ಬೆಂಗಳೂರು; ರೌಡಿ ಗೆಳೆಯನ ಜತೆ ಅಕ್ರಮ ಸಂಬಂಧಕ್ಕಾಗಿ ಮಗನ ಹತ್ಯೆ ಮಾಡಿದ ಹೆತ್ತವ್ವ!

 * ಬೆಂಗಳೂರು ಮೈಕೋ ಲೇಔಟ್ ನಲ್ಲಿ ಬಾಲಕನ ಸಾವು ಪ್ರಕರಣ
* ಹೆತ್ತ ತಾಯಿಯ ಅಕ್ರಮ ಸಂಬಂಧಕ್ಕೆ ಮಗು ಬಲಿಯಾಯಿಯಾ?
* ಬಾಲಕನ ಕೊಂದು ಹಾಕಿದ್ದ ರೌಡಿ ಶೀಟರ್ ಸುನೀಲ್!
* ದೂರು ಕೊಟ್ಟಾಗಲೇ ಪೊಲೀಸರಿಗೆ ಅನುಮಾನ ಬಂದಿತ್ತು

First Published Sep 10, 2021, 4:24 PM IST | Last Updated Sep 10, 2021, 4:24 PM IST

ಬೆಂಗಳೂರು(ಸೆ. 10)  ಮೈಕೋ ಲೇಔಟ್ ನಲ್ಲಿ  ಬಾಲಕನ ಕೊಲೆ ಕೇಸಿಗೆ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧಕ್ಕೆ ಬಾಲಕ ಬಲಿಯಾಗಿದ್ದಾನೆ. ಮಗುವಿಗೆ ವಿಚಾರ ಗೊತ್ತಾಗಲಿದೆ ಎನ್ನುವ ಕಾರಣಕ್ಕೆ ಮಗುವಿನ ತಾಯಿ, ರೌಡಿ ಸುನೀಲ್ ಮತ್ತು ಆತನ ಪ್ರೇಯಸಿ ಸೇರಿ ಹತ್ಯೆ ಮಾಡಿದ್ದಾರೆ.

ಅಮ್ಮನ ಅನೈತಿಕ ಸಂಬಂಧವನ್ನೇ ತನ್ನ ಬಂಡವಾಳ ಮಾಡಿಕೊಂಡ ಕಿಲಾಡಿ ಪುತ್ರಿ!

ಸಂಬಂಧಿಕರು ಮಗು ಎಲ್ಲಿ ಎಂದು ಕೇಳಿದಾಗ ಹತ್ಯೆ ವಿಚಾರ ಬಯಲಾಗಿದೆ.  ನೆಪ ಮಾತ್ರಕ್ಕೆ ಪೊಲೀಸ್ ದೂರನ್ನು ದಾಖಲಿಸಿದ್ದರೂ ಹಲವು ಅನುಮಾನ ವ್ಯಕ್ತವಾಗಿದೆ.  ಈ ಬಗ್ಗೆ ವಾಸನೆ ಹಿಡಿದ ಪೊಲೀಸರಿಗೆ ಬಾಲಕನ  ಕೊಲೆಯಾಗಿದೆ ಎನ್ನುವ ವಿಚಾರ ಗೊತ್ತಾಗಿದೆ.