Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು
ತನ್ನ ಪತ್ನಿ ರಾತ್ರಿ ಮಲಗಿದ್ರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡ್ತಾಳೆ. ಮತ್ತೆ ಸಂಜೆ 5-30ಕ್ಕೆ ಮಲಗಿದ್ರೆ ರಾತ್ರಿ 9-30 ಕ್ಕೆ ಎದ್ದೇಳುತ್ತಾಳೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಮಾಡ್ತಿದಾಳೆ ಎಂದೂ ದೂರಿನಲ್ಲಿ ವಿವರಿಸಲಾಗಿದೆ.
ಬೆಂಗಳೂರು (ಮಾರ್ಚ್ 13, 2023) : ಪೊಲೀಸರಿಗೆ ದಿನನಿತ್ಯ ನಾನಾ ರೀತಿಯ ದೂರುಗಳು ಕೇಳಿ ಬರುತ್ತಲೇ ಇರುತ್ತದೆ. ಈ ಪೈಕಿ ಪತಿ - ಪತ್ನಿಯರ ಜಗಳವೂ ಇರುತ್ತೆ. ಕೆಲ ದೂರುಗಳು ಗಂಭೀರವಾಗಿದ್ದರೆ, ಇನ್ನು ಕೆಲವು ಅಷ್ಟೇನೂ ಗಂಭೀರವಾಗಿರುವುದಿಲ್ಲ. ಇದೇ ರೀತಿ, ಬೆಂಗಳೂರಿನ ಪೊಲೀಸರಿಗೆ ವಿಚಿತ್ರ ದೂರೊಂದು ಕೇಳಿಬಂದಿದೆ. ಅದೇನಪ್ಪಾ ವಿಚಿತ್ರ ಅಂತೀರಾ..
ಪತ್ನಿ ತಡವಾಗಿ ಎದ್ದೇಳ್ತಾಳೆ (Wakes Up late) ಎಂದು ಪತಿಯಿಂದ ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಂಗಳೂರಲ್ಲಿ (Bengaluru) ವರದಿಯಾಗಿದೆ. ತನ್ನ ಪತ್ನಿ ರಾತ್ರಿ (Night) ಮಲಗಿದ್ರೆ ಮಧ್ಯಾಹ್ನ (Afternoon) 12-30ವರೆಗೂ ನಿದ್ದೆ (Sleep) ಮಾಡ್ತಾಳೆ. ಮತ್ತೆ ಸಂಜೆ (Evening) 5-30ಕ್ಕೆ ಮಲಗಿದ್ರೆ ರಾತ್ರಿ 9-30 ಕ್ಕೆ ಎದ್ದೇಳುತ್ತಾಳೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಮಾಡ್ತಿದಾಳೆ ಎಂದೂ ದೂರಿನಲ್ಲಿ ವಿವರಿಸಲಾಗಿದೆ.
ಇದನ್ನು ಓದಿ: ಕೌಟುಂಬಿಕ ಕಲಹ: ಪತ್ನಿ ಮೇಲೆ ಕೋಪಕ್ಕೆ ಮಲಮಗನ ಕೊಂದವನ ಬಂಧನ!
ಅಲ್ಲದೆ, ಅಡುಗೆ (Cook) ಕೂಡ ಮಾಡುವುದಿಲ್ಲ, ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ನಾನು ಪ್ರಶ್ನಿಸದೆ ಸುಮ್ಮನಿದ್ದೆ, ಆದರೀಗ ತನ್ನ ಹೆಂಡತಿಯ (Wife) ಕುಟುಂಬಸ್ಥರಿಂದ ನಮ್ಮ ಮೇಲೆ ಹಲ್ಲೆ (Assault) ನಡೆಸಿದ್ದಾಳೆ. ತನಗೆ ಪತ್ನಿಯಿಂದ ಹಾಗು ಆಕೆಯ ಕುಟುಂಬದಿಂದ ನರಕಯಾತನೆಯಾಗಿದೆ. ಹೀಗಾಗಿ ಪತ್ನಿ ಹಾಗು ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಪತಿ ಬಸವನಗುಡಿ ಪೊಲೀಸ್ ಠಾಣೆಗೆ (Basavanagudi Police Station) ದೂರು ನೀಡಿದ್ದಾರೆ.
ಕಮ್ರಾನ್ ಖಾನ್ ಎಂಬ ನೊಂದ ಪತಿ ಈ ರೀತಿ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾಯಲ್ ಲೈಫ್ ಲೀಡ್ ಮಾಡುವ ಉದ್ದೇಶದಿಂದ ತನ್ನನ್ನ ಪತ್ನಿ ಆಯೇಷಾ ಫರ್ಹಿನ್ ಮದ್ವೆಯಾಗಿದ್ದಾರಂತೆ. ಆಕೆಗೆ ಮದ್ವೆಗೆ ಮುಂಚೆಯೇ ಕಾಯಿಲೆಗಳಿದ್ದರೂ, ಅದನ್ನ ಮರೆ ಮಾಚಿ ತನಗೆ ಐದು ವರ್ಷದ ಹಿಂದೆ ಮದ್ವೆ ಮಾಡಿಸಿದ್ದಾರೆಂದು ಸಹ ಈ ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Bengaluru Crime: ಹೆಂಡತಿಯನ್ನು ಮಂಚಕ್ಕೆ ಕರೆದವನ ತಲೆಯನ್ನೇ ಸೀಳಿದ ಗಂಡ: ಕುಡಿದ ಅಮಲಿನಲ್ಲಿ ಕೊಲೆಯಾದ ಯುವಕ
ಇನ್ನು ಹುಟ್ಟು ಹಬ್ಬದ ಹಿನ್ನಲೆ 20-25 ಜನರನ್ನ ಮನೆಗೆ ಆಹ್ವಾನಿಸಿ ಆ ನೆಪದಲ್ಲಿ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೂ ತನ್ನ ಜೊತೆ ಜಗಳವಾಡಿ 15-20 ದಿನ ತವರು ಮನೆಗೆ ಸೇರಿಕೊಳ್ತಾಳೆ ಎಂದೂ ಬಸವನಗುಡಿ ಪೊಲೀಸ್ ಠಾಣೆಗೆ ನೀಡಿರೋ ದೂರಿನಲ್ಲಿ ಪತಿ ನೋವು ತೋಡಿಕೊಂಡಿದ್ದಾರೆ.
ಹಾಗೂ, ತನ್ನ ಬಗ್ಗೆ ಕಿಂಚಿತ್ತೂ ಪ್ರೀತಿ , ಮಮಕಾರ ಇಲ್ಲ. ತನ್ನ ಆಸ್ತಿ ಲಪಟಾಯಿಸಲು ಹಾಗೂ ರಾಯಲ್ ಲೈಫ್ ಲೀಡ್ ಮಾಡಲು ತನ್ನನ್ನ ಮದ್ವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆಂದು ಸಹ ಪತಿ ಕಮ್ರಾನ್ ಖಾನ್ ದೂರು ನೀಡಿದ್ದಾರೆ. ಪತ್ನಿ ಆಯೇಷಾ ಮಾವ ಆರಿಫುಲ್ಲ , ಅತ್ತೆ ಹೀನಾ ಕೌಸರ್, ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ಪತಿ ಕಮ್ರಾನ್ ಖಾನ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಿರುಕುಳದ ದೂರು ನೀಡಿದ್ದಾರೆ.
ಇದನ್ನೂ ಓದಿ: ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ: ಮೊದಲ ಪತಿಯ ಮಗನನ್ನು ಕೊಲೆ ಮಾಡಿದ ಎರಡನೇ ಪತಿ