Bengaluru Crime: ಹೆಂಡತಿಯನ್ನು ಮಂಚಕ್ಕೆ ಕರೆದವನ ತಲೆಯನ್ನೇ ಸೀಳಿದ ಗಂಡ: ಕುಡಿದ ಅಮಲಿನಲ್ಲಿ ಕೊಲೆಯಾದ ಯುವಕ
ಸ್ನೇಹಿತನ ಹೆಂಡತಿಯನ್ನು ಮಂಚಕ್ಕೆ ಕರೆದ ಮದ್ಯವ್ಯಸನಿ
ಮನೆಯಿಂದ ಕೆಳಗೆ ಇಳಿಯದೇ ಹೆಂಡತಿ ಕಳಿಸುವಂತೆ ಬೆದರಿಕೆ
ಕೋಪಗೊಂಡ ಗಂಡನಿಂದ ಕುಡುಕನ ಕೊಲೆ
ಬೆಂಗಳೂರು (ಮಾ.12): ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರ ಮನೆಯ ಮೇಲೆ ಹತ್ತಿ, ಕೆಳಗೆ ಇಳಿಯುವಂತೆ ಸೂಚಿಸಿದವರ ಹೆಂಡತಿಯನ್ನು ಮಂಚಕ್ಕೆ ಕಳಿಸುವಂತೆ ಕೇಳಿದ್ದ ಮದ್ಯವ್ಯಸನಿಯ ತಲೆಯನ್ನು ಸೀಳಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ.
ಬೆಂಗಳೂರಿನ ಸಿದ್ದಾಪುರದ ಕೆ ಎಸ್ ಕಾಲೋನಿಯಲ್ಲಿ ಮದ್ಯವ್ಯಸನಿಯೊಬ್ಬ ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಸಿಕ್ಕ ಬಿಲ್ಡಿಂಗ್ ಹತ್ತಿದ್ದನು. ಬಿಲ್ಡಿಂಗ್ ಹತ್ತಿ ಎದುರುಗಡೆ ಬಂದ ವ್ಯಕ್ತಿಯ ಪತ್ನಿ ಕಳಿಸುವಂತೆ ಅವಾಜ್ ಹಾಕಿದ್ದನು. ಇದರಿಂ ದ ಕೋಪಗೊಂಡ ಮನೆಯ ಮಾಲೀಕ ಸುರೇಶ್ ಮದ್ಯವ್ಯಸನಿ ಮಣಿಕಂಠ ಎಂಬಾತನನ್ನ ಮರದ ರಿಫಿಸ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಇನ್ನು ಕೆ ಎಸ್ ಕಾಲೋನಿಯಲ್ಲಿ ವಾಸವಿದ್ದ ಮೃತ ಮಣಿಕಂಠನ ತಾಯಿಗೆ ಮಹಡಿಯಿಮದ ಬಿದ್ದು ನಿಮ್ಮ ಮಗ ಗಾಯಗೊಂಡಿದ್ದಾನೆ ಎಂದು ಸುರೇಶ್ ತಿಳಿಸಿದ್ದನು. ಈ ಬಗ್ಗೆ ಸ್ಥಳ ಪರಶೀಲನೆಗೆ ಬಂದಿದ್ದ ಪೊಲೀಸರೊಂದಿಗೆ ಕೊಲೆ ಆರೋಪಿ ಸುರೇಶ್ ಕೂಡ ತಿರುಗಾಡಿಕೊಮಡು ಇದ್ದನು. ಈ ವೇಳೆ ಹಲವು ಕಥೆಗಳನ್ನು ಕಟ್ಟಿ ಆಕಸ್ಮಿಕ ಸಾಔಉ ಎಂಬುದನ್ನು ಬಿಂಬಿಸಲು ಮುಂದಾಗಿದ್ದನು.
ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ: ಮೊದಲ ಪತಿಯ ಮಗನನ್ನು ಕೊಲೆ ಮಾಡಿದ ಎರಡನೇ ಪತಿ
ಸಿಸಿಟಿವಿಯಲ್ಲಿ ಸುರೇಶನ ಕಳ್ಳಾಟ ಬಯಲು: ಕುಡಿದು ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸುರೇಶ್ ಕಥೆ ಕಟ್ಟಿ ನಾಟಕವಾಡಿದ್ದನು. ಈ ವೇಳೆ ಮಣಿಕಂಠನ ಮನೆಯವರು ಪೊಲೀಸರಿಗೆ ದೂರು ನೀಡಿದಾಗ ಈ ಬಗ್ಗೆ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೊತೆಗೆ, ಸ್ಥಳೀಯವಾಗಿದ್ದ ಸಿಸಿಟಿವಿಗಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸುರೇಶನ ಕಳ್ಳಾಟ ಬಯಲಾಗಿದೆ. ನಂತರ, ಪೊಲೀಸರ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯವನ್ನು ಸುರೇಶ್ ಹೇಳಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ಮಾಹಿತಿ: ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಣಿಕಂಠನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ಘಟನೆ ಕುರಿತು ಪೊಲೀಸರು ಪರಿಶೀಲನೆ ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಮರಣೋತ್ತರ ಪರೀಕ್ಷೆಯಲ್ಲಿಯೂ ಕೂಡ ಮಣಿಕಂಠನ ತಲೆಗೆ ಬಲವಾಗಿ ಹಲ್ಲೆ ಮಾಡಿರುವುದು ಕೂಡ ಕಂಡುಬಂದಿದೆ. ಈ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರು ಸುರೇಶನನ್ನು ಬಂಧಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಯ ವಿವರ ಏನು?: ಬೆಂಗಳೂರಿನ ಸಿದ್ದಾಪುರದಲ್ಲಿ ಮಾ.8ರಂದು ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಮಣಿಕಂಠ ಎನ್ನುವ ವ್ಯಕ್ತಿ ಸುರೇಶ್ ಮನೆಯ ಮೇಲೆ ಹತ್ತಿದ್ದಾನೆ. ಈ ವೇಳೆ ನೀನು ನಮ್ಮ ಮನೆಯ ಮೇಲೆ ಏಕೆ ಹತ್ತಿದ್ದೀಯ ಕೆಳಗೆ ಇಳಿದು ಬಾ ಎಂದು ಕರೆದಿದ್ದಾನೆ. ಎಷ್ಟೇ ಹೇಳಿದರೂ ಮನೆಯ ಮೇಲಿಂದ ಇಳಿದು ಬರದೇ ಹಠ ಪ್ರದರ್ಶನ ಮಾಡಿ ಅವ್ಯಾಚ್ಯ ಶಬ್ದಗಳಿಂದ ಸುರೇಶನಿಗೆ ನಿಂದಿಸಿದ್ದಾನೆ. ಮುಂದುವರೆದು ಮನೆಯಿಂದ ಕೆಳಗೆ ಇಳಿದು ಬರುವಂತೆ ಹೇಳಿದ ಸುರೇಶನಿಗೆ ನಿನ್ನಹೆಂಡತಿಯನ್ನು ನನ್ನೊಂದಿಗೆ ಕಳಿಸು ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಸುರೇಶ್ ಕಟ್ಟಡದ ಕೆಳಗೆ ಬಿದ್ದಿದ್ದ ಕಟ್ಟಿಗೆಯ ತುಂಡನ್ನು (ರಿಪೀಸ್ ಪಟ್ಟಿ) ಹಿಡಿದುಕೊಂಡು ಹೋಗಿ ಮಣಿಕಂಠನ ತಲೆಗೆ ಹೊಡೆದಿದ್ದಾನೆ. ಈ ಪರಿಣಾಮವಾಗಿ ಗಂಭೀರ ಗಾಯಗೊಂಡು ರಕ್ತಸ್ರಾವ ಉಂಟಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಗೂಡ್ಸ್‌ಶೆಡ್ ರಸ್ತೆ ಬುಲ್ಲಾರ್ಡ್ಸ್‌ಗೆ ಡಿಕ್ಕಿ ಹೊಡೆದು ಅಪ್ರಾಪ್ತ ಬಾಲಕ ಸಾವು: ಅತಿವೇಗದಿಂದ ಅಪಘಾತ
ಅನುಮಾನಗೊಂಡು ಪೊಲೀಸರಿಗೆ ದೂರು: ನಂತರ, ಮಣಿಕಂಠ ಕುಡಿದು ಮಹಡಿ ಮೇಲಿಂದ ಬಿದ್ದಿದ್ದಾನೆ ಎಂದು ಅವರ ಕುಟುಂಬ ಸದಸ್ಯರಿಗೆ ಹೋಗಿ ಹೇಳಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಣಿಕಂಠನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಮಹಡಿ ಮೇಲಿಂದ ಬಿದ್ದರೂ ಮಣಿಕಂಠನಿಗೆ ತಲೆಗೆ ಮಾತ್ರ ಗಾಯವಾಗಿದ್ದು, ದೇಹದ ಯಾವುದೇ ಭಾಗದಲ್ಲಿ ಗಾಯವಾಗಿರಲಿಲ್ಲ. ಆದ್ದರಿಂದ ಸುರೇಶ್ ಹೇಳಿದ್ದರಲ್ಲಿ ಏನೋ ಸುಳ್ಳು ಇರಬಹುದು ಎಂದು ಅನುಮಾನಗೊಂಡ ಮಣಿಕಂಠನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಸಿಸಿಟಿವಿ ಪರಿಶೀಲನೆಯಿಂದ ಸತ್ಯ ಬಯಲಿಗೆ ಬಂದಿದೆ.