ಮೊಬೈಲ್ ಲೌಡ್ ಸ್ಪೀಕರ್ ಹಾಕುವ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳದ ವೇಳೆ ಪತ್ನಿಯ ಮೇಲೆ ಹಲ್ಲೆಗೈದು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಮೇ.06): ಮೊಬೈಲ್ ಲೌಡ್ ಸ್ಪೀಕರ್ ಹಾಕುವ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳದ ವೇಳೆ ಪತ್ನಿಯ ಮೇಲೆ ಹಲ್ಲೆಗೈದು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾಗಣಪತಿನಗರ ನಿವಾಸಿ ಲೋಕೇಶ್ ಕುಮಾರ್ ಗೆಹಲೋಟ್ (43) ಬಂಧಿತ. ಈತ ಏ.24ರಂದು ಸಂಜೆ ಸುಮಾರು 6 ಗಂಟೆಗೆ ಪತ್ನಿ ನಮಿತಾ ಸಾಹು (43) ಜತೆಗೆ ಜಗಳ ತೆಗೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಏನಿದು ಘಟನೆ?: ರಾಜಸ್ಥಾನ ಮೂಲದ ಲೋಕೇಶ್ ಕಬ್ಬನ್‌ಪೇಟೆಯಲ್ಲಿ ಫೋಟೋ ಸ್ಟುಡಿಯೋ ನಡೆಸುತ್ತಿದ್ದ. ಐದು ವರ್ಷಗಳ ಹಿಂದೆ ಮ್ಯಾಟ್ರಿಮೊನಿ ಮುಖಾಂತರ ಪರಿಚಿತವಾಗಿದ್ದ ನಮಿತಾ ಸಾಹುರನ್ನು ಮದುವೆ ಆಗಿದ್ದ. ದಂಪತಿಗೆ 3 ವರ್ಷದ ಹೆಣ್ಣು ಮಗುವಿದ್ದು, ಬಸವೇಶ್ವರನಗರದ ಮಹಾಗಣಪತಿ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆರೋಪಿ ಲೋಕೇಶ್ ಏ.24ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಈ ವೇಳೆ ಪತ್ನಿಯ ಅಣ್ಣ ಸತ್ಯಂ, ಲೋಕೇಶ್ ಮೊಬೈಲ್‌ಗೆ ಕರೆ ಮಾಡಿದ್ದರಿಂದ ಆತನೊಂದಿಗೆ ಮಾತನಾಡುತ್ತಿದ್ದ. ಆಗ ಪತ್ನಿ ನಮಿತಾ ಯಾರು ಕರೆ ಮಾಡಿರುವುದು ಎಂದು ಕೇಳಿದ್ದಾರೆ.
ಅದಕ್ಕೆ ನಿಮ್ಮ ಅಣ್ಣ ಎಂದು ಲೋಕೇಶ್ ಹೇಳಿದ್ದಾನೆ. ಹಾಗಾದರೆ, ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡಿ ಎಂದು ನಮೀತಾ ಹೇಳಿದ್ದಾರೆ. ಅಷ್ಟಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಲೋಕೇಶ್ ರೊಚ್ಚಿಗೆದ್ದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ನೆಲಕ್ಕೆ ಕೆಡವಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿಕೊಲೆಮಾಡಿಪರಾರಿಯಾಗಿದ್ದ. ಬಳಿಕ ಮನೆಯ ಮಾಲೀಕ ಭೂಪೇಂದರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಣ್ಣ ಎದುರೇ ತಂದೆಯ ಕೊಂದ ಮಾವನ ಹ*ತ್ಯೆ: ನಾಲ್ವರ ಬಂಧನ
ವರದಕ್ಷಿಣೆ ತರುವಂತೆ ಒತ್ತಾಯ: ಲೋಕೇಶ್ ತನ್ನ ಫೋಟೋ ಸ್ಟುಡಿಯೋ ಅಭಿವೃದ್ಧಿಪಡಿ ಸುವ ಹಾಗೂ ನಗರದಲ್ಲಿ ಸ್ವಂತ ನಿವೇಶನ ಖರೀದಿಸುವ ಆಸೆ ಹೊಂದಿದ್ದ. ಹೀಗಾಗಿ ಮದುವೆಗೂ ಮುಂಚೆ ಕೂಡಿಟ್ಟಿದ್ದ ಹಣ ಕೊಡುವಂತೆ ಪತ್ನಿ ನಮಿತಾಳನ್ನು ಪೀಡಿಸುತಿದ್ದ. ಅದರಂತೆ ಆಕೆಯಿಂದ ಕ60 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ. ಹಣದ ವಿಚಾರಕ್ಕೆ ದಂಪತಿ ನಡುವೆ ಕಳೆದ 15 ದಿನದಿಂದ ಜಗಳ ನಡೆಯುತ್ತಿತ್ತು. ಏ.24ರಂದು ಮೊಬೈಲ್ ಲೌಡ್ ಸ್ಪೀಕರ್ ಹಾಕುವ ವಿಚಾರಕ್ಕೆ ಆರಂಭವಾದ ಜಗಳ ಬಳಿಕ ವರದಕ್ಷಿಣೆ ಹಣದ ವಿಚಾರಕ್ಕೆ ತಿರುಗಿದೆ. ಆಗ ಲೋಕೇಶ್ ಪತ್ನಿ ಕೊಲೆ ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


