ಕೊಲೆಯಾದ ರೇಣುಕಾಸ್ವಾಮಿಗೆ ಖೆಡ್ಡಾ ತೋಡಲು ಪವಿತ್ರಾ ಮತ್ತು ದರ್ಶನ್ ಗ್ಯಾಂಗ್ ನಿಂದ ಖತರ್ನಾಕ್ ಪ್ಲಾನ್!
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಖೆಡ್ಡಾಗೆ ತೋಡಲು ನಟ ದರ್ಶನ್ ಗ್ಯಾಂಗ್ ಖತರ್ನಾಕ್ ಪ್ಲಾನ್ ಮಾಡಿತ್ತು ಎಂಬ ಅಂಶ ಬಯಲಾಗಿದೆ. ಅದರಲ್ಲಿ ಪವಿತ್ರಾಳೇ ಮಾಸ್ಟರ್ ಎನ್ನಲಾಗುತ್ತಿದೆ.
ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತನ ಎರಡನೇ ಪತ್ನಿ ಪವಿತ್ರಾ ಗೌಡ (Darshan Second Wife Pavithra Gowda) ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ಇಂದು ಪೊಲೀಸರು ಅವರನ್ನು ಸ್ಥಳ ಮಹಜರು ನಡೆಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಖೆಡ್ಡಾಗೆ ತೋಡಲು ನಟ ದರ್ಶನ್ ಗ್ಯಾಂಗ್ ಖತರ್ನಾಕ್ ಪ್ಲಾನ್ ಮಾಡಿತ್ತು ಎಂಬ ಅಂಶ ಬಯಲಾಗಿದೆ. ದರ್ಶನ್ ಎರಡನೇ ಪತ್ನಿ ಪವಿತ್ರಾ ಗೌಡ ಹೆಸರಿನಲ್ಲಿ ನಕಲಿ ಖಾತೆಯಿಂದ ಚಾಟ್ ಮಾಡ್ತಿದ್ದ ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಮೊದಲು ಕೆಡವಿದ್ದೇ ಆರೋಪಿಗಳಲ್ಲಿ ಒಬ್ಬನಾಗಿರುವ ಪವನ್ ಮತ್ತು ಪ್ರದೋಶ್ ಇವರಿಬ್ಬರೂ ಪವಿತ್ರಾ ಗೌಡ ಜೊತೆಗೆ ಕೈ ಜೋಡಿಸಿ ಕೊಲೆಯಾದವನಿಗೆ ಮೆಸೇಜ್ ಮಾಡಿದ್ದರು.
ಕೊಲೆಯಾದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಅದೇ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ಕೊಡಲು ಕಾರಣವೇನು?
ತನ್ನೊಂದಿಗೆ ನಕಲಿ ಖಾತೆಯಲ್ಲಿ ಚಾಟ್ ಮಾಡ್ತಿರೋನು ಯಾರು? ಅನ್ನೋದು ಪವಿತ್ರಾ ಗೌಡಗೆ ತಲೆನೋವಾಗಿತ್ತು. ಹೀಗಾಗಿ ಚಾಟ್ ಮಾಡೋ ವ್ಯಕ್ತಿಯನ್ನ ಪತ್ತೆ ಮಾಡಲು ಪವಿತ್ರಾ ಪವನ್ ಮತ್ತು ಪ್ರದೋಶ್ ಜೊತೆಗೆ ಸೇರಿ ಖತರ್ನಾಕ್ ಪ್ಲಾನ್ ಮಾಡಿದ್ದಳು. ರೇಣುಕಾಸ್ವಾಮಿ ಪತ್ತೆ ಹಚ್ಚಲು ಸಹಕರಿಸಿದ್ದು ಆರೋಪಿ ಪ್ರದೋಶ್. ಸಾಫ್ಟ್‌ವೇರ್ ಇಂಜಿನಿಯರ್ ಆಗಿರೋ ಪ್ರದೋಶ್ ಒಂದು ವಾರಗಳ ಕಾಲ ಟ್ರಾಕ್ ಮಾಡಿ ರೇಣುಕಾಸ್ವಾಮಿ ಪತ್ತೆ ಮಾಡಿದ್ದ. ರೇಣುಕಾಸ್ವಾಮಿ ಮಾಡಿದ್ದ ರೀತಿಯಲ್ಲೇ ನಕಲಿ ಖಾತೆ ತೆರೆದು ಟ್ರಾಪ್ ಮಾಡಲಾಗಿತ್ತು. ನಕಲಿ ಖಾತೆ ತರೆದು ರೇಣುಕಾಸ್ವಾಮಿಯೊಂದಿಗೆ ಚಾಟ್ ಮಾಡಲಾಗುತ್ತಿತ್ತು
ನಕಲಿ ಐಡಿ ಬಳಸುತ್ತಿದ್ದ ರೇಣುಕಾಸ್ವಾಮಿ ಜೊತೆ ಚಾಟ್ ಆರಂಭಿಸಲಾಗಿತ್ತು, ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ಚಾಟ್ ಮಾಡುವ ಬದಲು ವಾಟ್ಸ್ ಆಪ್ ಚಾಟ್ ಮಾಡು ಅಂದಿ ಆರೋಪಿಗಳು. ಈ ಮೂಲಕ ಪವಿತ್ರ ಮೆಸೇಜ್ ಮಾಡುವ ರೀತಿಯಲ್ಲಿ ಚಾಟಿಂಗ್ ಮಾಡಿದ್ದ, ಹುಡುಗಿಯರು ಚಾಟ್ ಮಾಡುವ ರೀತಿಯಲ್ಲೇ ಮೆಸೇಜ್ ಮಾಡಿ ಖೆಡ್ಡಾ ತೋಡಿದ್ದರು.
ಚಿತ್ರರಂಗದಿಂದ ದರ್ಶನ್ ಬ್ಯಾನ್ ಯಾಕಿಲ್ಲ? ಲೆಕ್ಕವಿಲ್ಲದಷ್ಟೂ ವಿವಾದವಿದ್ದರೂ ರೌಡಿ ಶೀಟರ್ ಓಪನ್ ಮಾಡಿಲ್ಲವೇಕೆ?
ರೇಣುಕಾಸ್ವಾಮಿಗೆ ಫೊನ್ ನಂಬರ್ ಕೊಟ್ಟು ಪವಿತ್ರಾ ಅಂತ ಚಾಟ್ ಮಾಡಿದ್ದರು ಆರೋಪಿಗಳು. ಇದನ್ನ ನಂಬಿದ್ದ ರೇಣುಕಾಸ್ವಾಮಿ ನಂಬರ್ ಕೊಟ್ಟು ವಾಟ್ಸ್ ಆಪ್ ಚಾಟ್ ಮಾಡಿದ್ದ. ಇದರಿಂದಲೇ ರೇಣುಕಾಸ್ವಾಮಿ ದರ್ಶನ್ ಗ್ಯಾಂಗ್ ಗೆ ಲಾಕ್ ಆಗಿದ್ದು, ರೇಣುಕಾಸ್ವಾಮಿ ನಂಬರ್ ಪಡೆದ ಬಳಿಕ ಆತನ ಊರು ಕೇರಿ ಯಾವುದು ಎಂದು ಪವನ್ ತಿಳಿದುಕೊಂಡಿದ್ದ. ನಂತರ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಡಿ ಬಾಸ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ಕಿಡ್ನಾಪ್ ಮಾಡಿ ತಂದ ದರ್ಶನ್ ಅಂಡ್ ಟೀಮ್. ಆರ್ ಆರ್ ನಗರದ ಪಟ್ಟಣಗೆರೆ ಬಳಿ ಇರುವ ಶೆಡ್ ನಲ್ಲಿ ಇಟ್ಟಿತ್ತು.
ಜೂನ್ 8 ರಂದು ಕಿಡ್ನಾಪ್ ಮಾಡಿ ತಂದು ರಾತ್ರಿ ಇಡೀ ಚಿತ್ರಹಿಂಸೆ ನೀಡಿ, ಸಲಾಕೆಯಿಂದ ಹೊಡೆದು, ಮನಬಂದಂತೆ ಥಳಿಸಿ, ಮರ್ಮಾಂಗವನ್ನು ಒದ್ದು, ಸಿಗರೇಟ್‌ನಲ್ಲಿ ಸುಟ್ಟು ಕಂಡು ಕೇಳರಿಯದ ರೀತಿಯಲ್ಲಿ ಕೊಲೆ ಮಾಡಿ ಜೂನ್ 9ರ ಬೆಳಗ್ಗೆ ಸುಮನಹಳ್ಳಿ ಬ್ರಿಡ್ಜ್ ಬಳಿ ಬಿಸಾಕಲಾಗಿತ್ತು. ದರ್ಶನ್ ಗ್ಯಾಂಗ್ ಮೀಟಿಂಗ್ ಮಾಡಿದಂತೆ ಹಣಕಾಸಿನ ವಿಷಯದಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಿ ಜೂನ್ 10 ರಂದು 3 ಜನ ಶರಣಾಗಿದ್ದರು. ಶರಣಾಗಲು ಇವರಿಗೆ ದರ್ಶನ್ 30 ಲಕ್ಷ ಡೀಲ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಜೂನ್ 11 ರಂದು ದರ್ಶನ್ ಮತ್ತು ಟೀಂ ಅನ್ನು ಪೊಲೀಸು ಅರೆಸ್ಟ್ ಮಾಡಿದ್ದರು.