ಕೊಲೆಯಾದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಅದೇ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ಕೊಡಲು ಕಾರಣವೇನು?
ಕೊಲೆ ಆರೋಪಿ ದರ್ಶನ್ ಮತ್ತು ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದು ಹತ್ಯೆ ಮಾಡಲು ಶೆಡ್ ನ ಸ್ಥಳ ಯಾಕೆ ಆಯ್ಕೆ ಮಾಡಿದ್ದರು ಎಂಬ ಅಂಶ ಬಯಲಾಗಿದೆ.
ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತನ ಎರಡನೇ ಪತ್ನಿ ಪವಿತ್ರಾ ಗೌಡ (Darshan Second Wife Pavithra Gowda) ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೂಡ ಹಲವು ಮಂದಿ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದಿವರೆದಿದೆ. 4 ಜನ ತಲೆ ಮೆರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಚಿತ್ರರಂಗದಿಂದ ದರ್ಶನ್ ಬ್ಯಾನ್ ಯಾಕಿಲ್ಲ? ಲೆಕ್ಕವಿಲ್ಲದಷ್ಟೂ ವಿವಾದವಿದ್ದರೂ ರೌಡಿ ಶೀಟರ್ ಓಪನ್ ಮಾಡಿಲ್ಲವೇಕೆ?
ಈ ನಡುವೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದು ಹತ್ಯೆ ಮಾಡಲು ಶೆಡ್ ನ ಸ್ಥಳ ಯಾಕೆ ಬಳಸಲಾಗ್ತಿತ್ತು ಎಂಬ ಅಂಶ ಬಹಿರಂಗವಾಗಿದೆ. ಇದೊಂದು ಸೀಝ್ ವಾಹನಗಳನ್ನು ತಂದಿಡುವ ಶೆಡ್ ಆಗಿದೆ. ಬ್ಯಾಂಕ್ ಗಳಿಂದ ಸೀಝ್ ಆದ ಬೈಕ್, ಕಾರು ಇತರೆ ವಾಹನಗಳನ್ನು ಇಡುವ ಜಾಗ ಇಷ್ಟು ಮಾತ್ರವಲ್ಲದೆ, ಅಲ್ಲದೇ ಪೊಲೀಸರು ಪ್ರಕರಣಗಳನ್ನು ಸೀಝ್ ಮಾಡಿದ ವಾಹನಗಳನ್ನು ಕೂಡ ಪಾರ್ಕ್ ಮಾಡ್ತಾರೆ. ಇದಕ್ಕೆ ಬ್ಯಾಂಕ್ ನವರು ಪಾರ್ಕಿಂಗ್ ದರ ಕಟ್ಟಬೇಕು. ಕಂಪ್ಲೀಟಾಗಿ ಸೀಝ್ ವಾಹನಗಳನ್ನು ಇಡುವ ಜಾಗ ವಾಗಿದ್ದು, ಜಯಣ್ಣ ಈ ಶೆಡ್ ಅನ್ನು ಕಿಶೋರ್ ಎಂಬುವರಿಗೆ ಲೀಜ್ ಗೆ ನೀಡಿದ್ದಾರೆ.
ಬೆಳಗಿನವರೆಗೂ ಪಾರ್ಟಿ ಮಾಡಿದ್ದ ದರ್ಶನ್&ಗ್ಯಾಂಗ್! ಹತ್ಯೆಗೂ ಮುನ್ನ ಏನೇನಾಯ್ತು? ಕಂಪ್ಲೀಟ್ ಡೀಟೆಲ್ಸ್
ಇಲ್ಲಿದೆ ದರ್ಶನ್ ಮತ್ತು ಗ್ಯಾಂಗ್ ಅದೇ ಶೆಡ್ ಆಯ್ಕೆ ಮಾಡಿಕೊಳ್ಳಲು ಕಾರಣ:
- ಹತ್ಯೆ ನಡೆದ ಶೆಡ್ ದರ್ಶನ್ ಸ್ನೇಹಿತ ವಿನಯ್ ಮಾವ ಜಯಣ್ಣ ಎಂಬುವರಿಗೆ ಸೇರಿದ್ದು
- ಸಿಟಿಯಲ್ಲಿದ್ರೂ ಜನರ ಹೆಚ್ಚಾಗಿ ಓಡಾಡದ ಜಾಗವಾಗಿತ್ತು ಈ ಶೆಡ್
- ದರ್ಶನ್ ಸ್ನೇಹಿತ ವಿನಯ್ ಗೆ ಸಂಬಂಧಿಸಿದ ಶೆಡ್ ಹೀಗಾಗಿ ಸೇಫ್ ಎಂಬ ಕಾರಣ
- ದರ್ಶನ್ ನಿವಾಸಕ್ಕೆ ಅನತಿ ದೂರದಲ್ಲೇ ಇರುವ ಶೆಡ್
- ಒಂದು ವೇಳೆ ಶೆಡ್ ಸಿಸಿಟಿವಿಯಲ್ಲಿ ರೆಕಾರ್ಡ್ ಆದ್ರೂ ಡಿಲಿಟ್ ಮಾಡಿಸ್ಬೋದು ಎಂಬ ಕಾರಣ
- ಹಲ್ಲೆ ವೇಳೆ ಎಷ್ಟೇ ಕಿರುಚಿದ್ರೂ ಯಾರಿಗೂ ಧ್ಬನಿ ಕೇಳಲ್ಲ
- ಹೊರಗಡೆ ಸಿಸಿಟಿವಿ ಇದೆ, ಗೋಡಾನ್ ಒಳಗಡೆ ಯಾವುದೇ ಸಿಸಿಟಿವಿ ಇಲ್ಲ
- ಈ ಎಲ್ಲಾ ಕಾರಣಗಳಿಂದ ದರ್ಶನ್ ಗ್ಯಾಂಗ್ ಅದೇ ಶೆಡ್ ಆಯ್ಕೆ ಮಾಡಿಕೊಂಡಿತ್ತು
ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಸಲಾಕೆಯಿಂದ ಹೊಡೆದು, ಸಿಗರೇಟ್‌ನಲ್ಲಿ ಸುಟ್ಟು, ಚಪ್ಪಲಿಯಿಂದ ಹೊಡೆದು, ಹೀಗೆ ಹಲವು ರೀತಿಯಲ್ಲಿ ವಿಕೃತ ಹಿಂಸೆ ನೀಡಿ ಕೊಲ್ಲಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. 15 ಕ್ಕೂ ಹೆಚ್ಚು ಕಡೆ ಗಂಭೀರ ಗಾಯವಾಗಿದೆ.