ಚಿತ್ರರಂಗದಿಂದ ದರ್ಶನ್ ಬ್ಯಾನ್ ಯಾಕಿಲ್ಲ? ಲೆಕ್ಕವಿಲ್ಲದಷ್ಟೂ ವಿವಾದವಿದ್ದರೂ ರೌಡಿ ಶೀಟರ್ ಓಪನ್ ಮಾಡಿಲ್ಲವೇಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್ ಬೆನ್ನಲ್ಲೇ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಮತ್ತು ರೌಡಿ ಶೀಟರ್ ಓಪನ್ ಮಾಡಬೇಕು ಎಂಬ ಒತ್ತಡ ಹೆಚ್ಚಿದೆ.
ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್ (Actor Darshan), ಆತನ ಎರಡನೇ ಪತ್ನಿ ಪವಿತ್ರಾ ಗೌಡ (Darshan Second Wife Pavithra Gowda) ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇದೀಗ ವಿಷ್ಯ ಅದಲ್ಲ ಒಬ್ಬ ನಟನಾಗಿ ಸಮಾಜಕ್ಕೆ ಮಾದರಿಯಾಗಿರಬೇಕಿದ್ದ ದರ್ಶನ್ ವಿರುದ್ಧ ಚಿತ್ರರಂಗ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿಲ್ಲವೇಕೆ? ಗಲಾಟೆಗಳ ಸರಮಾಲೆ, ಈಗ ಕೊಲೆ ಕೇಸ್, ದೈಹಿಕ ಹಲ್ಲೆ ಇಷ್ಟೆಲ್ಲ ಇದ್ದರೂ ರೌಡಿ ಶೀಟರ್ ಓಪನ್ ಮಾಡಿಲ್ಲವೇಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಪ್ರಶ್ನಿಸುತ್ತಿದ್ದಾರೆ.
ಬೆಳಗಿನವರೆಗೂ ಪಾರ್ಟಿ ಮಾಡಿದ್ದ ದರ್ಶನ್&ಗ್ಯಾಂಗ್! ಹತ್ಯೆಗೂ ಮುನ್ನ ಏನೇನಾಯ್ತು? ಕಂಪ್ಲೀಟ್ ಡೀಟೆಲ್ಸ್
ಕಾವೇರಿ ಹೋರಾಟದಲ್ಲಿ ಭಾಗಿಯಾದವರ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲಾಗಿದೆ. ರಸ್ತೆ ರೈಲು ತಡೆದವರ ವಿರುದ್ಧವೂ ಪೊಲೀಸರು ರೌಡಿಶೀಟರ್ ಓಪನ್ ಮಾಡಿದ್ದಾರೆ. ಕೇಸ್ ಮೇಲೆ ಕೇಸ್, ಗಲಾಟೆ ಮೇಲೆ ಗಲಾಟೆ ಮಾಡಿಕೊಂಡಿರುವ ದರ್ಶನ್ ಮೇಲೆ ಯಾಕೆ ರೌಡಿಶೀಟರ್ ಓಪನ್ ಮಾಡಲಾಗುತ್ತಿಲ್ಲ? ಈ ಹಿಂದೆ ಕೂಡ ದರ್ಶನ್ ನಡೆಸಿದ್ದ ಹಲವು ಅಪರಾಧ ಕೃತ್ಯಗಳು ಬೆಳಕಿಗೆ ಬಂದಿತ್ತು. ಇದರಲ್ಲಿ ಕೆಲವೊಂದನ್ನು ಮುಚ್ಚಿ ಹಾಕಲಾಗಿತ್ತು ಎನ್ನು ಆರೋಪಗಳು ಕೇಳಿಬರುತ್ತಲೇ ಇದೆ.
ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಗಳಿಂದ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುವ ದರ್ಶನ್ ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿಯಾಗಲಿ ಬ್ಯಾನ್ ಮಾಡುವ ಕ್ರಮ ತೆಗೆದುಕೊಂಡಿಲ್ಲ, ಹಲವು ಅಪರಾಧ ಇದ್ದರೂ ಕರ್ನಾಟಕ ಪೊಲೀಸ್ ಇಲಾಖೆ ರೌಡಿ ಶೀಟರ್ ಓಪನ್ ಮಾಡದೆ ಪೊಲೀಸರು ಸುಮ್ಮನಿರುವುದ್ಯಾಕೆ? ಯಾವುದಾದರೂ ಕಾಣದ ಶಕ್ತಿ ಪೊಲೀಸರ ಕೈ ಕಟ್ಟಿ ಹಾಕಿದ್ಯಾ? ಎಂಬ ಪ್ರಶ್ನೆಗಳು ಎದ್ದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೆಜೆಸ್ಟಿಕ್ ದಾಸ... 6 ದಿನ ಪೊಲೀಸ್ ಕಸ್ಟಡಿಯಲ್ಲಿ ವಾಸ!
- 2011ರಲ್ಲಿ ಮೊದಲ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ 28 ದಿನ ಜೈಲಿನಲ್ಲಿದ್ದ.
- 2012ರಲ್ಲಿ ಚಿಂಗಾರಿ ಸಿನೆಮಾ ಸಕ್ಸಸ್ ಆಗಿತ್ತು. ಈ ವೇಳೆ ನಿರ್ಮಾಪಕ ಮಹದೇವ್ ಮತ್ತು ದರ್ಶನ್ ನಡುವೆ ಕಿರಿಕ್ ಆಗ ಬಗ್ಗೆ ಸುದ್ದಿಯಾಗಿತ್ತು.
- 2017ರಲ್ಲಿ ನಾನು ಸುದೀಪ್ ಇನ್ನು ಸ್ನೇಹಿತರಲ್ಲ ಎಂದು ಟ್ವೀಟ್ ಮಾಡಿ ತಿಳಿಸಿದ್ದು, ಭಾರೀ ಚರ್ಚೆ ಹುಟ್ಟುಹಾಕಿತ್ತು.
- 2018ರಲ್ಲಿ ಮೈಸೂರಿನ ಕ್ರಾಫ್ಟ್ ಬಜಾರ್ ಎದುರುಗಡೆ ರಸ್ತೆಯಲ್ಲಿ ದರ್ಶನ್ ಕಾರ್ ಅಪಘಾತಕ್ಕೊಳಗಾಗಿತ್ತು. ರಾತ್ರೋರಾತ್ರಿ ಅಪಘಾತಕ್ಕೊಳಾಗಿದ್ದ ಕಾರ್‌ನ್ನು ಮೈಸೂರಿನಿಂದ ಬೇರೆಡೆ ಶಿಫ್ಟ್ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಬಳಿಕ ಶ್ರೀರಂಗಪಟ್ಟಣದ ಸ್ನೇಹಿತನ ತೋಟದ ಮನೆಯಲ್ಲಿ ಆಡಿ ಕ್ಯೂ7 ಕಾರು ಪತ್ತೆಯಾಗಿತ್ತು.
- 2019ರಲ್ಲಿ ಯಜಮಾನ ಚಿತ್ರೀಕರಣದ ವೇಳೆ ಸಹನಟನ ಮೇಲೆ ಹಲ್ಲೆ ಪ್ರಕರಣ.
- 2021ರಲ್ಲಿ 10 ವರ್ಷದ ಬಾಲಕಿ ಮೇಲೆ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಫಾರ್ಮ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕ ಈ ಅಪರಾಧ ಎಸಗಿದ್ದ. ಬಳಿಕ ಆತನಿಗೆ ಶಿಕ್ಷೆ ಆಗಿತ್ತು. ಇದು ಕೂಡ ವಿವಾದವಾಗಿತ್ತು.
- 2021ರಲ್ಲಿ ದರ್ಶನ್ ಹೆಸರಲ್ಲಿ ಸಾಲ ಪಡೆಯಲು ಯತ್ನ ಎಂಬ ಆರೋಪದ ಮೇಲೆ ಉಮಾಪತಿ ಶ್ರೀನಿವಾಸಗೌಡ ವಿರುದ್ಧ ದರ್ಶನ್ ಆರೋಪ. ಇದು ಬಹಳ ವಿವಾದವಾಗಿತ್ತು.
- ಮೈಸೂರಿನಲ್ಲಿ ಹೊಟೇಲ್ ಸಪ್ಲೈಯರ್ ಮೇಲೆ ಹಲ್ಲೆ ಆರೋಪ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಬಗ್ಗೆ ಹೇಳಿದ್ದರು. ಇದು ಕೂಡ ವಿವಾದವಾಗಿತ್ತು. ದರ್ಶನ್ ಹಿಂಬಾಲಕರಿಂದ ನನಗೆ ಜೀವ ಬೆದರಿಕೆಯಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.
- ಬೆಂಗಳೂರಿನಲ್ಲಿರುವ ದರ್ಶನ್ ನಿವಾಸ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಬಹುದಿನಗಳಿಂದಲೂ ಕೇಳಿ ಬಂದರೂ ಈವರೆಗೆ ಏನೂ ಮಾಡಲಾಗಲಿಲ್ಲ.
- ಸಂದರ್ಶನವೊಂದರಲ್ಲಿ ನಿರ್ದೇಶಕ ಪ್ರೇಮ್ ವಿರುದ್ಧ ಅವನೇನು ದೊಡ್ಡ ಪುಡಾಂಗ? ಅವನಿಗೆನೂ ಎರಡು ಕೊಂಬಿದೆಯಾ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ರಕ್ಷಿತಾ ಮತ್ತು ಪ್ರೇಮ್ ಅಸಮಾಧಾನ ಹೊರ ಹಾಕಿದ್ದರು.
- ಮಾಧ್ಯಮಗಳ ವಿರುದ್ಧ ಕಿರಿಕ್ ಮಾಡಿಕೊಂಡಿದ್ದ ದರ್ಶನ್, ಅವ್ಯಾಚ್ಯ ಪದಗಳಿಂದ ನಿಂದಿಸಿದ್ದರಿಂದ ಮಾಧ್ಯಮಗಳು 2 ವರ್ಷ ಬ್ಯಾನ್ ಮಾಡಿದ್ದವು. ಬಳಿಕ ಇತ್ತೀಚೆಗೆ ಸಂಧಾನ ನಡೆದು ಕ್ಷಮೆ ಕೇಳಿದ್ದರು.
- ಇನ್ನು ದರ್ಶನ್ ಫ್ಯಾನ್ ಮತ್ತು ಜಗ್ಗೇಶ್ ಫ್ಯಾನ್ ಗಲಾಟೆ ನಡೆದಿತ್ತು. ಈ ವಿಚಾರದಲ್ಲಿ ಕೊನೆಗೆ ಜಗ್ಗೇಶ್ ಒತ್ತಾಯಪೂರ್ವಕ ಕ್ಷಮೆ ಕೇಳಿದ್ದರು. ಇದರಲ್ಲೂ ದರ್ಶನ್ ಕೈವಾಡದ ವಿವಾದವಿತ್ತು.
2023ರಲ್ಲಿ ಆದ ವಿವಾದಗಳಿವು...
- ರಾಜ್ಯದಲ್ಲಿ ಹುಲಿ ಉಗುರು ವಿಚಾರ ಭಾರೀ ಸದ್ದಾಗಿತ್ತು. ಈ ವೇಳೆ ದರ್ಶನ್ ಕೂಡ ಹುಲಿ ಉಗುರು ಧರಿಸಿರುವ ಫೋಟೋ ವೈರಲ್ ಆಗಿತ್ತು.
- ಫಾರ್ಮ್ ಹೌಸ್‌ನಲ್ಲಿ ದರ್ಶನ್ ವನ್ಯಜೀವಿಗಳನ್ನು ಸಾಕಿದ್ದಾರೆ ಎನ್ನುವ ಆರೋಪ, ಇದು ಕೂಡ ವಿವಾದವಾಗಿತ್ತು. ಬಾರ್ ಹೆಡೆಡ್ ಗೂಸ್ ಎಂಬ ವಿಶೇಷ ಪ್ರಬೇಧದ ಬಾತುಕೋಳಿ ಸಾಕಿದ ಆರೋಪ ಇತ್ತು. ಬಳಿಕ ಅರಣ್ಯಾಧಿಕಾರಿಗಳು ಇದನ್ನು ವಶಕ್ಕೆ ಪಡೆದಿದ್ದರು.
- ಕಾಟೇರ ಸಿನೆಮಾ ಸಕ್ಸಸ್ ಮೀಟ್ ನಲ್ಲಿ ಮಹಿಳೆಯರ ಬಗ್ಗೆ ಪದ ಬಳಸಿ ಅವಹೇಳನ ಮಾಡಿರುವ ಆರೋಪ ಇತ್ತು. ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಸಿದ್ದವು.
- ಕಾಟೇರ ಸಿನೆಮಾ ಸಕ್ಸಸ್ ಖುಷಿಯಲ್ಲಿ ಜೆಟ್‌ಲ್ಯಾಗ್ ರೆಸ್ಟೋ ಬಾರ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿ ವಿವಾದವಾಗಿತ್ತು.
- ದರ್ಶನ್ ಸಾಕು ನಾಯಿ ಬಿಟ್ಟು ಕಚ್ಚಿಸಿದ್ದಾರೆ ಎಂದು ಮಹಿಳೆ ಒಬ್ಬರು ದೂರು ನೀಡಿದ್ದರು. ಇದು ಕೂಡ ವಿವಾದವಾಗಿತ್ತು.