Asianet Suvarna News Asianet Suvarna News

ಸಹೋದರರ ಮಧ್ಯೆ ಜಗಳ: ಕುಟುಂಬದ ನಾಲ್ವರನ್ನು ಕೊಂದ ಪತಿ-ಪತ್ನಿ

Crime News: ಗೃಹಿಣಿಯೊಬ್ಬಳು  ತನ್ನ ನಾಲ್ವರು ಕುಟುಂಬಸ್ಥರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ

Housewife murders four family members with sharp edged weapons after bitter war of words arrested in West Bengal mnj
Author
Bengaluru, First Published Aug 11, 2022, 7:21 PM IST

ಪಶ್ಚಿಮ ಬಂಗಾಳ (ಆ. 11):  ಗೃಹಿಣಿಯೊಬ್ಬಳು  ತನ್ನ ನಾಲ್ವರು ಕುಟುಂಬಸ್ಥರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ.  ಗುರುವಾರ ಬೆಳಿಗ್ಗೆ ಹೌರಾ ಸಿಟಿ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಲ್ಲಬಿ ಘೋಷ್ ಎಂದು ಪೊಲೀಸರು ಗುರುತಿಸಿದ್ದಾರೆ.  ಆಕೆಯ ಪತಿ ದೇಬ್ರಾಜ್ ಘೋಷ  ಭೀಕರ ಹತ್ಯೆಯಲ್ಲಿ ಆಕೆಗೆ ಸಹಾಯ ಮಾಡಿದ್ದು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುತ್ತಿದ್ದಾರೆ. ಮೃತರನ್ನು ಮಿನಾತಿ ಘೋಷ್ (55), ದೇಬಾಸಿಶ್ ಘೋಷ್ (36), ರೇಖಾ ಘೋಷ್ (30) ಮತ್ತು ತಿಯಾಶಾ ಘೋಷ್ (13) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಬುಧವಾರ ತಡರಾತ್ರಿ ಶಂಕಿತರು ಎಲ್ಲರನ್ನು ಹತ್ಯೆ ಮಾಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಇಬ್ಬರು ಸಹೋದರರ ಸಂಬಂಧವು ಕೆಲವು ಸಮಯದಿಂದ ಹದಗೆಟ್ಟಿತ್ತು ಮತ್ತು ಬುಧವಾರ ಸಂಜೆ ಅವರ ಮಧ್ಯೆ ಜಗಳವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ, ದೇಬ್ರಾಜ್ ಮತ್ತು ಅವರ ಪತ್ನಿ ಪಲ್ಲಬಿ ಘೋಷ್ ಸೇರಿ ದೇಬಶಿಶ್ ಘೋಷ್, ರೇಖಾ ಘೋಷ್ ಮತ್ತು ಅವರ ಮಗಳು ತಿಯಾಶಾ ಘೋಷ್ ಅವರನ್ನು ತಮ್ಮ ಕೋಣೆಯಲ್ಲಿ ಹರಿತವಾದ ಆಯುಧಗಳನ್ನು ಬಳಸಿ ಕೊಂದಿದ್ದಾರೆ.

ಅವರು ಕಿರುಚಾಟವನ್ನು ಕೇಳಿದಾಗ, ಅವರ ತಾಯಿ ಮಿನಾತಿ ಘೋಷ್ ಅಲ್ಲಿಗೆ ಓಡಿಹೋಗಿದ್ದರು ಆದರೆ ಆಕೆಯನ್ನೂ ಆರೋಪಿಗಳು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವವಾಗುತ್ತಿದ್ದಾಗ ತಿಯಾಶಾ ಮನೆಯಿಂದ ಪರಾರಿಯಾಗಿದ್ದಾಳೆ. ಮನೆಯ ಹೊರಗೆ ಜಮಾಯಿಸಿದ ನೆರೆಹೊರೆಯವರ ಬಳಿ ತನಗಾದ ಸಂಕಷ್ಟವನ್ನು ವಿವರಿಸಿ ಆಕೆ ಸಾವನ್ನಪ್ಪಿದ್ದಾಳೆ.

ಪತ್ನಿಯೊಂದಿಗೆ ಜಗಳ: 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

ಅಕ್ಕಪಕ್ಕದವರು ಪಲ್ಲಬಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ ದೇಬ್ರಾಜ್ ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಪರಾರಿಯಾಗುವಾಗ, ಅವರು ಅಪರಾಧಕ್ಕೆ ಬಳಸಿದ ಹರಿತವಾದ ಆಯುಧಗಳನ್ನು ನಾಶಪಡಿಸಿದ್ದಾರೆ. ಹೌರಾ ಸಿಟಿ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪಲ್ಲಬಿಯನ್ನು ಬಂಧಿಸಿದ್ದಾರೆ.  ಪೊಲೀಸರು ದೇಬ್ರಾಜ್‌ಗಾಗಿ ಹುಡುಕಾಟ ಆರಂಭಿಸಿದ್ದು, ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ: ಹಾಡಹಗಲೇ ಮನೆಗೆ ನುಗ್ಗಿ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಹತ್ಯೆ ಮಾಡಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಬೃಂದಾವನ ಬಡಾವಣೆ 1ನೇ ಹಂತದ 7ನೇ ಕ್ರಾಸ್‌ ನಿವಾಸಿ ಸಂಪತ್‌ಕುಮಾರ್‌(63) ಎಂಬವರೇ ಕೊಲೆಯಾದವರು. ಇವರು ಅಗರಬತ್ತಿ ಬಿಸಿನೆಸ್‌ ಜೊತೆಗೆ ಸಣ್ಣ ಪ್ರಮಾಣದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಮಾಡುತ್ತಿದ್ದರು ಎನ್ನಲಾಗಿದೆ. 

ಸೋಮವಾರ ಮಧ್ಯಾಹ್ನ ಸಂಪತ್‌ಕುಮಾರ್‌ ಮತ್ತು ಅವರ 16 ವರ್ಷದ ಮಗ ಇಬ್ಬರೇ ಮನೆಯಲ್ಲಿದ್ದರು. ಈ ವೇಳೆ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಕಬ್ಬಿಣ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 3.45ರ ಸಮಯದಲ್ಲಿ ಅಪ್ಪ ಮತ್ತು ನಾನು ಮನೆಯಲ್ಲಿದ್ದೆವು. ಆವಾಗ ಮನೆಗೆ ಕಳ್ಳನ ರೀತಿಯಲ್ಲಿ ನುಗ್ಗಿರುವ ಒಬ್ಬ ವ್ಯಕ್ತಿ ಕಬ್ಬಿಣದ ರಾಡಿನಿಂದ ಅಪ್ಪನ ತಲೆಯ ಹಿಂಬದಿ ಬಲವಾಗಿ ಹೊಡೆದ. ನಂತರ ನನ್ನ ಮೇಲೂ ದಾಳಿ ಮಾಡಲು ಬಂದಾಗ ತಪ್ಪಿಸಿಕೊಂಡೆ. 

ಕೇವಲ 50 ಸಾವಿರಕ್ಕೆ ಯುವಕನ ಭೀಕರ ಹತ್ಯೆ: ನಡೆದಿದ್ದು ಸುಪಾರಿ ಕೊಲೆ, ಆದ್ರೆ ಕೊಟ್ಟವರ್ಯಾರು?

ಅಷ್ಟರಲ್ಲಿ ಆತ ಮನೆಯಿಂದ ಪರಾರಿಯಾಗಿದ್ದಾಗಿ ಹತ್ಯೆಯಾದ ಸಂಪತ್‌ಕುಮಾರ್‌ ಅವರ ಪುತ್ರ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ, ಸಂಪತ್‌ಕುಮಾರ್‌ ಅವರನ್ನು ಯಾರು? ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ? ಯಾರು ಆರೋಪಿ ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ. ಈ ಸಂಬಂಧ ವಿವಿ ಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios