ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತ ಪುರುಷರನ್ನು ಪರಿಚಯಿಸಿಕೊಂಡು, ಹೋಟೆಲ್‌ಗೆ ಕರೆದೊಯ್ದು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ 'ಜಾಸ್ಮಿನ್ ಗ್ಯಾಂಗ್' ಎಂಬ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ನಾಲ್ವರು ಮಹಿಳೆಯರು ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಕಿಂಗ್‌ಪಿನ್‌ಗಾಗಿ ಹುಡುಕಾಟ ಮುಂದುವರೆದಿದೆ.
ಹೆಣ್ಣುಮಕ್ಕಳು ಚೆನ್ನಾಗಿ ಮಾತನಾಡಿಸಿ, ಬಣ್ಣಬಣ್ಣದ ಮಾತುಗಳಿಂದ ಮರುಳು ಮಾಡಿಬಿಟ್ಟರೆ ಸಾಕು, ಅದಕ್ಕೆ ಮರುಳಾಗುವ ಪುರುಷರ ಕೆಲವರಿದ್ದಾರೆ. ವಿವಾಹಿತರಾಗಿದ್ದರೆ ಮನೆಯಲ್ಲಿ ಇರುವ ಮಡದಿ, ಮಕ್ಕಳು ಯಾರೂ ಆ ಸಮಯದಲ್ಲಿ ನೆನಪಾಗುವುದೇ ಇಲ್ಲ. ಇನ್ನು ಅವಿವಾಹಿತರಂತೂ ಬಿಡಿ, ಹೇಳುವುದೇ ಬೇಡ. ಇಂಥ ಬಕರಾಗಳನ್ನೇ ಬುಟ್ಟಿಗೆ ಹಾಕಿಕೊಂಡು ಸ್ವರ್ಗ ತೋರಿಸ್ತೇವೆ ಎಂದು ಹೋಟೆಲ್‌ಗೆ ಕರೆದೊಯ್ದು, ವಿವಸ್ತ್ರಗೊಳಿಸಿ ಅವರ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಜಾಸ್ಮಿನ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಜಾಸ್ಮಿನ್ ಗ್ಯಾಂಗ್
ಅಷ್ಟಕ್ಕೂ ಪುರುಷರಾಗಲೀ, ಮಹಿಳೆಯರಾಗಲಿ ಎಲ್ಲ ದೇಶಗಳಲ್ಲಿಯೂ ಅದೇ ಮೆಂಟಾಲಿಟಿ ಇರುತ್ತದೆ. ಅದಕ್ಕಾಗಿಯೇ ಹೆಣ್ಣುಮಕ್ಕಳ ಬ್ರೈನ್ವಾಷ್ ಮಾಡುವ ಕೆಲವು ಗಂಡಸರು ಒಂದೆಡೆಯಾದರೆ, ಗಂಡಸರನ್ನು ಬಣ್ಣದ ಮಾತುಗಳಿಂದ ಬುಟ್ಟಿಗೆ ಹಾಕಿಕೊಂಡು ಹನಿಟ್ರ್ಯಾಪ್ ಮಾಡುವ ಹೆಂಗಸರೂ ಇನ್ನೊಂದೆಡೆ. ಈ ಜಾಸ್ಮಿನ್ ಗ್ಯಾಂಗ್ ಘಟನೆ ನಡೆದಿರುವುದು ಬಾಂಗ್ಲಾದಲ್ಲಿ. ಅಲ್ಲಿಯ ಪೊಲೀಸರು ನಾಲ್ವರು ಮಹಿಳೆಯರು ಸೇರಿ ಆರೋಪಿ ಪುರುಷರನ್ನೂ ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾದಿಂದ ಪರಿಚಯ
ಈ ಗುಂಪು ಸಾಮಾನ್ಯವಾಗಿ ಪುರುಷರನ್ನು ಮೋಸಗೊಳಿಸಲು ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಬಳಸಿಕೊಳ್ಳುತ್ತಿದ್ದರು. ಸುಂದರಿಯರ ಪ್ರೊಫೈಲ್ ನೋಡಿ ಎಲ್ಲವನ್ನೂ ಮರೆಯುವವರನ್ನೇ ಕಾದು ಕುಳಿತು, ಬಲೆಯಲ್ಲಿ ಬೀಳಿಸಿಕೊಳ್ಳುತ್ತಿದ್ದರು. ಹೋಟೆಲ್ ಇತ್ಯಾದಿಗಳಿಗೆ ಕರೆದು ತಮ್ಮ ಕೆಲಸ ಆರಂಭಿಸುತ್ತಿದ್ದರು. ಬಂದ ಪುರುಷರನ್ನು ಬೆತ್ತಲು ಮಾಡಿ ವಿಡಿಯೋ ಮಾಡಿ ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಮಂತ ಪುರುಷರ ಟಾರ್ಗೆಟ್
ಸೋಷಿಯಲ್ ಮೀಡಿಯಾ ಮಾತ್ರವಲ್ಲದೇ, ಇದಕ್ಕಾಗಿ ಒಂದು ಗ್ಯಾಂಗ್ ಕೂಡ ಸಕ್ರಿಯವಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಜಲೀಲ್ ಎಂಬಾತ ಇದರ ಕಿಂಗ್ಪಿನ್. ಇವನು ವೀಕ್ ಮೈಂಡ್ ಇರುವ ಶ್ರೀಮಂತ ಪುರುಷರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು, ಬಳಿಕ ಅವರನ್ನು ತನ್ನದೇ ಐಷಾರಾಮಿ ಕಾರಿನಲ್ಲಿ ಮನೆಗೆ ಎಂದು ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಿದ್ದ. ಅಲ್ಲಿಗೆ ಬರುವ ಚೆಲುವೆಯರನ್ನು ಪರಿಚಯಿಸುತ್ತಿದ್ದ. ಮುಂದೆ ಅವರು ಎಂದುಕೊಂಡಂತೆ ಎಲ್ಲವೂ ನಡೆಯುತ್ತಿತ್ತು. ಪೊಲೀಸರು ಬರುತ್ತಲೇ ಕೆಲವರು ಎಸ್ಕೇಪ್ ಆಗಿದ್ದಾರೆ. ನಾಲ್ವರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಮತ್ತು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


