Asianet Suvarna News Asianet Suvarna News

Hit & Run : ನಿದ್ದೆ ಮಾಡ್ತಿದ್ದವರ ಮೇಲೆ ಹರಿದ ಟ್ರಕ್, ನಾಲ್ವರ ದಾರುಣ ಸಾವು

ರಸ್ತೆ ವಿಭಾಜಕದ ಮೇಲೆ ಮಲಗಿದವರ ಮೇಲೆ ಟ್ರಕ್ಕೊಂದು ಸಂಚರಿಸಿದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ದೆಹಲಿಯ (Delhi) ಸೀಮಾಪುರಿಯಲ್ಲಿ (Seemapuri) ನಡೆದಿದೆ. ಘಟನೆಯಲ್ಲಿ ಇನ್ನು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯರಾತ್ರಿ 1.51 ರ ಸುಮಾರಿಗೆ ಈ ಅನಾಹುತ ನಡೆದಿದೆ. 

hit and run killed 4 in delhi, Speeding Truck mows over People Sleeping on Road Divider akb
Author
First Published Sep 21, 2022, 12:20 PM IST

ನವದೆಹಲಿ: ರಸ್ತೆ ವಿಭಾಜಕದ ಮೇಲೆ ಮಲಗಿದವರ ಮೇಲೆ ಟ್ರಕ್ಕೊಂದು ಸಂಚರಿಸಿದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ದೆಹಲಿಯ (Delhi) ಸೀಮಾಪುರಿಯಲ್ಲಿ (Seemapuri) ನಡೆದಿದೆ. ಘಟನೆಯಲ್ಲಿ ಇನ್ನು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯರಾತ್ರಿ 1.51 ರ ಸುಮಾರಿಗೆ ಈ ಅನಾಹುತ ನಡೆದಿದೆ.  ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ ಮತ್ತೊಬ್ಬ ಮಾರ್ಗಮಧ್ಯೆ ಹಾಗೂ ಇನ್ನೊಬ್ಬರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು 52 ವರ್ಷ ಕರೀಮ್‌, 25 ವರ್ಷದ ಚೋಟೆ ಖಾನ್ (Chotte Khan), 38 ವರ್ಷದ ಶಾ ಅಲಂ, ಹಾಗೂ 45 ವರ್ಷದ ರಾಹುಲ್(Rahul)  ಎಂದು ಗುರುತಿಸಲಾಗಿದೆ. ಹಾಗೆಯೇ 16 ವರ್ಷದ ಮನೀಶ್ (Manish) ಹಾಗೂ 30 ವರ್ಷದ ಪ್ರದೀಪ್ (Pradeep) ಗಂಭೀರವಾಗಿ ಗಾಯಗೊಂಡಿದ್ದಾರೆ. ಅನಾಹುತದ ಬಳಿಕ ಘಟನಾ ಸ್ಥಳದಿಂದ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ದೆಹಲಿ ಪೊಲೀಸರು ಚಾಲಕ ಹಾಗೂ ಅಪಘಾತವೆಸಗಿದ ಟ್ರಕ್‌ ಪತ್ತೆಗೆ ಹಲವು ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ. 


ಸಮಯಕ್ಕೆ ಸರಿಯಾಗಿ ಬಾರದ ಆಂಬ್ಯುಲೆನ್ಸ್, ಅಪಘಾತದಲ್ಲಿ ಗಾಯಗೊಂಡಾತ ನರಳಾಡಿ ಪ್ರಾಣಬಿಟ್ಟ!

Follow Us:
Download App:
  • android
  • ios