ಸಮಯಕ್ಕೆ ಸರಿಯಾಗಿ ಬಾರದ ಆಂಬ್ಯುಲೆನ್ಸ್, ಅಪಘಾತದಲ್ಲಿ ಗಾಯಗೊಂಡಾತ ನರಳಾಡಿ ಪ್ರಾಣಬಿಟ್ಟ!

ಅಪಘಾತದಲ್ಲಿ ಗಾಯಗೊಂಡವರನ್ನ ಸಾಗಿಸಲು ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಕಾರಣಕ್ಕೆ ಗಾಯಳು ಓರ್ವ ನಡುರಸ್ತೆಯಲ್ಲಿ ಒಂದೂವರೆ ಗಂಟೆ ನರಳಾಡಿ ಪ್ರಾಣಬಿಟ್ಟ ದಾರುಣ ಘಟನೆ ನಡೆದಿದ್ದು, ಮೃತನ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ambulance did not come on time after one hour injured person died in Hubballi gow

ಹುಬ್ಬಳ್ಳಿ (ಸೆ.20) : ಅಪಘಾತದಲ್ಲಿ ಗಾಯಗೊಂಡವರನ್ನ ಸಾಗಿಸಲು ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಕಾರಣಕ್ಕೆ ಗಾಯಳು ಓರ್ವ ನಡುರಸ್ತೆಯಲ್ಲಿ‌ ನರಳಾಡಿ ಪ್ರಾಣ ಬಿಟ್ಟ ಘಟನೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ‌ ಹೆದ್ದಾರಿಯಲ್ಲಿ‌ ನಡೆದಿದೆ. ಇಂದು ಸಂಜೆ ಟಿಪ್ಪರ್ ಲಾರಿ ಹಾಗೂ ಬೈಕ್ ಮದ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಸಾಗಿಸಲು ಸಕಾಲಕ್ಕೆ ಆಂಬ್ಯುಲೆನ್ಸ್ ಬರಲೇ ಇಲ್ಲ ಇದರಿಂದಾಗಿ ಗಾಯಳು ನಡು ರಸ್ತೆಯಲ್ಲೇ ನರಳಾಡಿ ಪ್ರಾಣಬಿಟ್ಟರೆ, ಗಾಯಾಳುಗಳು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ದಾಖಲಾದ ಅಮಾನವೀಯ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಷ್ಮೇಶ್ವರದಿಂದ ಮರಳು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ಎದುರಿಗಿದ್ದ ಸಾರಿಗೆ ಬಸ್ ಓವರಟೆಕ್ ಮಾಡುವ ಭರದಲ್ಲಿ ರಸ್ತೆ ಪಕ್ಕ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ‌‌ ಗಂಭೀರವಾಗಿ ಗಾಯಗೊಂಡಿದ್ದ, ಸ್ಥಳೀಯರು ಗಾಯಳುವನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಕರೆ ಮಾಡಿದ್ರೂ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬರಲೇ ಇಲ್ಲ. ಇದರಿಂದಾಗಿ ಗಾಯಳು ನಡು ರಸ್ತೆಯಲ್ಲಿ ಜೀವ ಬಿಟ್ಟರೇ, ತೀವ್ರ ಗಾಯವಾಗಿದ್ದ ಮಗು ಹಾಗೂ ಪತ್ನಿಯನ್ನು ಸ್ಥಳೀಯರೇ ಆಂಬ್ಯುಲೆನ್ಸ್ ಬಾರದ ಕಾರಣ ಒತ್ತಾಯ ಮಾಡಿ ಪೊಲೀಸ್ 112 ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ.
 
ಕೊನೆಗೂ ಟಿಪ್ಪರ್ ಲಾರಿ ಕೆಳಗೆ ಸಿಲುಕಿದ್ದ ಬೈಕ್ ಸವಾರರನ್ನು ಬದುಕಿಸಲು ಸ್ಥಳೀಯರು ಎಷ್ಟೇ ಕರೆ ಮಾಡಿದ್ರು ಆಂಬ್ಯುಲೆನ್ಸ್ ಬರಲೇ ಇಲ್ಲ. ಒಂದು ಗಂಟೆಗೂ ಅಧಿಕ ಕಾಲ ನರಳಾಟ ನಡೆಸಿದ ಗಾಯಳುವನ್ನು ಸ್ಥಳೀಯರ ಸಹಾಯದಿಂದ ಗೂಡ್ಸ್ ವಾಹನದ ಮೂಲಕ ಕುಂದಗೋಳ ತಾಲೂಕು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು ಆದ್ರೆ ಅಷ್ಟೋತ್ತಿಗಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
 
ಮೃತ ವ್ಯಕ್ತಿ ಮಹಮ್ಮದ್ ಶಪಿಕ್ ನೂಲ್ವಿ (38) ಹುಬ್ಬಳ್ಳಿ ತಾಲೂಕಿನ ಶರೇವಾಡ ಗ್ರಾಮದವರೆಂದು ತಿಳಿದು ಬಂದಿದ್ದು, ಪತ್ನಿ ಹಾಗೂ ಮಗು ಸಮೇತ ಕುಂದಗೋಳ ತಾಲೂಕು ಆಸ್ಪತ್ರೆಗೆ ಬಂದು ತನ್ನೂರು ಶರೇವಾಡಕ್ಕೆ ಮರಳುವ ವೇಳೆ ಈ ಘಟನೆ ನಡೆದಿದೆ.  ರಸ್ತೆ ಮದ್ಯೆ ಪೆಟ್ರೋಲ್ ಖಾಲಿಯಾಗಿ ನಿಂತಿದ್ದ ಬೈಕ್ ಸವಾರ ಓರ್ವನಿಗೆ ಸಹಾಯ ಮಾಡಲು ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ.
 
ಅಪಘಾತದಲ್ಲಿ ತೀವ್ರ ಗಾಯಗೊಂಡ ಪತ್ನಿ ರಿಯಾನಭಾನು, ಮಗುವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನು ಕುಂದಗೋಳ ತಾಲೂಕು ಆಸ್ಪತ್ರೆ ಬಳಿ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಸಮಯಕ್ಕೆ ಬಾರದ ಆಂಬ್ಯುಲೆನ್ಸ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.  ಘಟನೆ ಕುರಿತು  ಕುಂದಗೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸ್ಟೆಲ್‌ ವಿದ್ಯಾರ್ಥಿನಿ ಬಾತ್ರೂಮ್ ವಿಡಿಯೋ ರೆಕಾರ್ಡ್:

ಬಸ್‌-ಬೈಕ್‌ ಅಪಘಾತ ; ಬೈಕ್‌ ಸವಾರ ಸಾವು
ಬಾಗಲಕೋಟೆ: ಬೈಕ್‌ ಮತ್ತು ಬಸ್‌ ಮಧ್ಯ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರೂ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶೀಗಿಕೇರಿ ಗ್ರಾಮದ ಬಳಿ ಸೋಮವಾರ ಸಂಜೆ ನಡೆದಿದೆ. ಬೈಕ್‌ ಸವಾರರಿಬ್ಬರೂ ಸಾವಿಗೀಡಾಗಿದ್ದು, ಸಾವಿಗೀಡಾದ ಬೈಕ್‌ ಸವಾರರನ್ನು ಶ್ರೀನಿವಾಸ ಹೌಂಸನೂರು (31), ಈಶಪ್ಪ ಮಾಚಕನೂರ (55) ಎಂದು ಗುರುತಿಸಲಾಗಿದ್ದು, ಇಬ್ಬರು ಶೀಗಿಕೇರಿ ಗ್ರಾಮದ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

SC ಮಕ್ಕಳಿಗೆ ತಿಂಡಿ, ಚಾಕಲೇಟ್‌ ಮಾರಾಟ ನಿಷೇಧ: ಅಂಗಡಿಯವ ಸೇರಿ ಇಬ್ಬರ ಬಂಧನ: 

ಟಿಪ್ಪರ್‌ ಡಿಕ್ಕಿ, ಬೈಕ್‌ ಸವಾರ ಸಾವು
ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದಿಂದ ವಾಸನ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಟಿವಿಎಸ್‌ ಎಕ್ಸೆಲ್‌ ಹಾಗೂ ಟಿಪ್ಪರ್‌ ನಡುವೆ ಅಪಘಾತ ಸಂಭವಿಸಿ, ವಾಸನ ಗ್ರಾಮದ ನಿಂಗಪ್ಪ ನಾಗಪ್ಪ ಹಡಪದ (ಅಗಸಿಮನಿ) (68) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿಂಗಪ್ಪ ಅವರು ಟಿವಿಎಸ್‌ ಎಕ್ಸೆಲ್‌ ಮೇಲೆ ಕೊಣ್ಣೂರ ಗ್ರಾಮಕ್ಕೆ ಹೋಗುವಾಗ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದಿಂದ ಎದುರಿಗೆ ಬಂದ ಟಿಪ್ಪರ್‌ ನಡುವೆ ಅಪಘಾತ ಸಂಭವಿಸಿದೆ. ನರಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios