ಹೆಲೋ..ನಾನು ದಿವ್ಯ..ಹೀಗೆ ಪರಿಚಯ ಮಾಡಿಕೊಳ್ಳುತ್ತಾ ವ್ಯಾಟ್ಸಾಪ್‌ನಲ್ಲಿ ಮೆಸೇಜ್ ನಿಮ್ಗೂ ಬಂದಿದೆಯಾ? ಹಾಗಂತ ದಿವ್ಯಾ ಫೇಕ್ ಅಲ್ಲ, ನಿಜ. ಆಕೆಯೇ ಮೆಸೇಜ್ ಮಾಡುತ್ತಾಳೆ. ಚಾಟಿಂಗ್ ಶುರು ಮಾಡಿದ್ರೆ ಸಮಸ್ಯೆ ಏನು?

ಭೋಪಾಲ್ (ಜು.14) ಹೆಲೋ ನಾನು ದಿವ್ಯಾ...ವ್ಯಾಟ್ಸಾಪ್‌ನಲ್ಲಿ ಈ ಸಂದೇಶ ಬಂದೊಡನೆ ಎಐ, ಫೇಕ್, ಯಾರು ಆಟ ಆಡಿಸ್ತಿದ್ದಾರೆ ಎಂದು ನಿಮ್ಮದೇ ಮೂಲಗಳಿಂದ ಮೆಸೇಜ್ ಮಾಡಿದ ದಿವ್ಯ ನಿಜವಾಗಿಯೂ ಇದ್ದಾಳಾ, ಇಲ್ಲಾ ನಕಲಿಯಾ ಎಂದು ಪರಿಶೀಲನೆ ನಡೆಸಿದರೂ ನಿಮಗೆ ದಿವ್ಯ ಅಸಲಿ ಅನ್ನೋ ಉತ್ತರವೇ ಬರುತ್ತೆ. ಕರೆ ಮಾಡಿ ಮಾತನಾಡಿದರೂ ನಿಮಗೆ ದಿವ್ಯಾ ನಿಮ್ಮ ಜೊತೆ ಮಾತನಾಡುತ್ತಾಳೆ. ಹೀಗಾಗಿ ದಿವ್ಯಾ ನಂಬಿಕೊಂಡು ಮಾತಿಗಿಳಿದರೆ ಜೋಕೆ. ಇದೇ ದಿವ್ಯಾ ಕ್ರಿಪ್ಟೋ ಕರೆನ್ಸಿ ಹೆಸರನಲ್ಲಿ 70 ವರ್ಷದ ಚಾರ್ಟೆಡ್ ಅಕೌಂಟ್‌ಗೆ 21.06 ಕೋಟಿ ರೂಪಾಯಿ ವಂಚಿಸಿದ್ದಾಳೆ. ವಿಶೇಷ ಅಂದರೆ ದಿವ್ಯಾ ಮತ್ತೆ ಹೊಸ ಹೆಸರಿನಿಂದ ನಿಮ್ಮ ಮುಂದೆ ಪ್ರತ್ಯಕ್ಷವಾದರೂ ಅಚ್ಚರಿಯಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಪ್ರಕರಣ

ಮಧ್ಯಪ್ರದೇಶದ ಛೇಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಮುಖ್ಯ ಅಧಿಕಾರಿ ಸಿಎ ಅಶೋಕ್ ವಿಜಯವರ್ಗಿಯ ಕೋಟಿ ಕೋಟಿ ಕಳೆದುಕೊಂಡಿದ್ದಾರೆ. ಅಶೋಕ್ ಅವರಿಗೆ ದಿವ್ಯಾ ವ್ಯಾಟ್ಸಾಪ್ ಮೆಸೇಜ್ ಮಾಡಿದ್ದಾಳೆ. ತನ್ನ ಪರಿಚಯ ಮಾಡಿಕೊಂಡು ಮಾತನಾಡಿದ್ದಾಳೆ. USDT ಸಮನಾಗಿರುವ ಕ್ರಿಪ್ಟೋ ಕರೆನ್ಸಿ ಹೂಡಿಕೆ ಕುರಿತು ವಿವರಣೆ ನೀಡಿದ್ದಾಳೆ. ಜೊತೆಗೆ ಒಂದಷ್ಟು ಮಾಹಿತಿಯನ್ನು ಚೆಕ್ ಮಾಡಲು ಹೇಳಿದ್ದಾಳೆ. ಕೆಲ ವೆಬ್‌ಸೈಟ್ ಸೇರಿದಂತೆ ಗೂಗಲ್ ಮೂಲಕ ಚೆಕ್ ಮಾಡಿದ ಅಶೋಕ್ ಅವರಿಗೆ ಈಕೆ ಹೇಳುತ್ತಿರುವುದು ಸರಿ ಎಂದು ಖಾತ್ರಿಯಾಗಿ ಸಣ್ಣ ಹೂಡಿಕೆ ಮಾಡಿದ್ದಾರೆ.

ಬರೋಬ್ಬರಿ 7 ತಿಂಗಳ ಆಟ, ಖಾತೆ ಖಾಲಿ

ದಿವ್ಯಾ ಹಾಗೂ ಆಕೆಯ ಸಂಗಡಿಗರು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿದ್ದಾರೆ. ಹಂತ ಹಂತವಾಗಿ 21 ಕೋಟಿ ರೂಪಾಯಿ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇತ್ತ ವಂಚತರು ನಕಲಿ ಆನ್‌ಲೈನ್ ಟ್ರೇಡಿಂಗ್ ಸೃಷ್ಟಿಸಲಾಗಿದೆ. ಆನ್‌ವೈನ್ ಮೂಲಕರ ಚೆಕ್ ಮಾಡಿದಾಗ ತಮ್ಮ ಹಣ ಸುರಕ್ಷಿತವಾಗಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆಯಾಗಿರುವುದು ಗಮನಿಸಿದ್ದಾರೆ. ದಿನದಿಂದ ದಿನಕ್ಕೆ ಕ್ರಿಪ್ಟೋ ಕರೆನ್ಸಿ ಹಣ ಹೆಚ್ಚಾಗುತ್ತಾ ಹೋಗಿದೆ. ಹೀಗೆ ಏರಿಕೆಯಾಗಿ 21 ಕೋಟಿ ರೂಪಾಯಿ 33 ಕೋಟಿ ರೂಪಾಯಿ ಎಂದು ನಕಲಿ ಟ್ರೇಡಿಂಗ್ ಸೈಟ್‌ನಲ್ಲಿ ತೋರಿಸಿದೆ. ಇದನ್ನೇ ನಂಬಿದ ಅಶೋಕ್ ಅವರು ಇನ್ನು ಹೆಚ್ಚಾಗಲಿ ಎಂದು ಟ್ರೇಟಿಂಗ್ ನೋಡುತ್ತಾ ಖುಷಿ ಪಟ್ಟಿದ್ದಾರೆ.

ತುರ್ತು ಸ್ವಲ್ಪ ಹಣದ ಅವಶ್ಯಕತೆ ಇತ್ತು. ಹೀಗಾಗಿ ಹಣ ಡ್ರಾ ಮಾಡಲು ಮುಂದಾದಾಗ ನಯಾ ಪೈಸೆ ಇಲ್ಲ. ನೋಡಿದರೆ ಇಡೀ ಸೈಟ್, ಎಲ್ಲವೂ ನಕಲಿ. ಕಂಗಾಲಾದ ಅಶೋಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಪೊಲೀಸರು ತನಿಖೆ ನಡೆಸಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ. ಇದರ ಹಿಂದೆ ಅತೀ ದೊಡ್ಡ ನೆಟ್‌ವರ್ಕ್ ಅಡಗಿದೆ. ಬರೋಬ್ಬರಿ 20 ಸಾವಿರ ಟ್ರಾನ್ಸಾಕ್ಷನ್ ಮೂಲಕ ಹಣ ಚದುರಿಸಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಸೈಬರ್ ಪೊಲೀಸರು ಕಾರ್ಯಪ್ರವೃತ್ತರಾಗುವಾಗ 19 ಕೋಟಿ ರೂಪಾಯಿ ಹಣ ವಂಚಕರ ಕೈಸೇರಿತ್ತು. ಕೇವಲ 2 ಕೋಟಿ ರೂಪಾಯಿ ಹಣವನ್ನು ಖಾತೆಯಲ್ಲಿ ಫ್ರೀಜ್ ಮಾಡಲು ಸಾಧ್ಯವಾಗಿದೆ. ಇದೀಗ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.