Asianet Suvarna News Asianet Suvarna News

Sexual Harassment: ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಆರೋಪಿ ಬಂಧನ

2020ರಲ್ಲಿ ನಟಿ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಪನನ್‌ಗಟ್ಟು ಪದೈ ಕಟ್ಚಿ ಪಕ್ಷದ ಸ್ಥಾಪಕ ಹರಿ ನಾಡಾರ್‌ ಎಂಬಾತನನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಬಂಧಿಸಿದ್ದಾರೆ.

Hari Nadar arrested from Bengaluru in actor Vijayalakshmi Harassment Case gvd
Author
Bangalore, First Published Jan 21, 2022, 1:50 AM IST

ಚೆನ್ನೈ (ಜ.21): 2020ರಲ್ಲಿ ನಟಿ ವಿಜಯಲಕ್ಷ್ಮಿ (Vijayalakshmi) ಲೈಂಗಿಕ ಕಿರುಕುಳ (Sexual Harassment) ನೀಡಿದ್ದ ಪ್ರಕರಣದಲ್ಲಿ ಪನನ್‌ಗಟ್ಟು ಪದೈ ಕಟ್ಚಿ ಪಕ್ಷದ ಸ್ಥಾಪಕ ಹರಿ ನಾಡಾರ್‌ (Hari Nadar) ಎಂಬಾತನನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಬಂಧಿಸಿದ್ದಾರೆ.

ನಟಿಗೆ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಆತನನ್ನು ಬಂಧಿಸಲಾಗಿದೆ. 2020ರಲ್ಲಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಲೈಂಗಿಕ ಕಿರುಕುಳವೇ ಕಾರಣ ಎನ್ನಲಾಗಿತ್ತು. 2020ರ ಜುಲೈನಲ್ಲಿ ನಾಮ್‌ ತಮಿಳರ್‌ ಕಟ್ಚಿ (ಎನ್‌ಟಿಕೆ) ಪಕ್ಷದ ನಾಯಕ ಸೀಮನ್‌ ಕುಮ್ಮಕ್ಕಿನ ಮೇಲೆ ನಾಡಾರ್‌ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು.

ನಾಡಾರ್‌ ಯಾರು: ತಿರುನೆಲ್ವೇಲಿ ನಿವಾಸಿ ಹರಿ ನಾಡಾರ್‌ ಅಲಿಯಾಸ್‌ ಗೋಪಾಲಕೃಷ್ಣ ನಾಡಾರ್‌ (39) 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಲಗುಲಂ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ. ಉದ್ಯಮಿಯೋರ್ವರಿಗೆ 360 ಕೋಟಿ ಬ್ಯಾಂಕ್‌ ಲೋನ್‌ ಕೊಡಿಸುವುದಾಗಿ ನಂಬಿಸಿ 7 ಕೋಟಿ ರು. ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಈತನನ್ನು 2021 ಮೇ ನಲ್ಲಿ ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಬಳಿಕ ಬಿಡುಗಡೆ ಆಗಿದ್ದ.

ವಿಜಯಲಕ್ಷ್ಮೀ ಹೆಸರಿನಲ್ಲಿ ಸಂಗ್ರಹವಾಗಿದ್ದ ಹಣ  ಫಿಲ್ಮ್ ಛೆಂಬರ್‌ಗೆ ನೀಡಿದ  ಯೋಗೇಶ್

2020 ರಲ್ಲಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆ ನಡೆಸುತ್ತಿದ್ದ ತಿರುವನ್‌ಮಿಯೂರ್‌ ಪೊಲೀಸರಿಗೆ ನಟಿ, ಈ ಹಿಂದೆ ತನ್ನೊಂದಿಗೆ ಸಂಬಂಧ ಹೊಂದಿದ್ದ ಎನ್‌ಟಿಕೆ ಮುಖಂಡ ಸೀಮನ್‌ ತನಗೆ ಕಿರುಕುಳ ನೀಡಲು ಹರಿ ನದರ್‌ನನ್ನು ಕಳಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದರು. ಇದೀಗ ಪ್ರಕರಣ ಸಂಬಂಧ ಬುಧವಾರ ಆತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕೋರ್ಟ್‌ ಮುಂದೆ ಆತನನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.

ಕಷ್ಟದಲ್ಲಿರೋ ವಿಜಯಲಕ್ಷ್ಮಿಗೆ ಸ್ಪಂದಿಸಿದ ಕರುನಾಡು: 'ನಾಗಮಂಡಲ' ಖ್ಯಾತಿಯ ನಟಿ ವಿಜಯಲಕ್ಷ್ಮಿ ಭಿಕ್ಷೆ ಎಂದುಕೊಂಡಾದರೂ ಸಹಾಯ ಮಾಡಿ, ಎಂದು ವಿಡಿಯೋ ಮೂಲಕ ಕನ್ನಡದ ಜನತೆಗೆ ಮನವಿ ಮಾಡಿಕೊಂಡಿದ್ದರು. ಅಭಿಮಾನಿಗಳು ಹಾಗೂ ಸಂಘದವರು ಸೇರಿಕೊಂಡು 3 ಲಕ್ಷ 2 ಸಾವಿರ 900 ರೂ. ಸಂಗ್ರಹ ಮಾಡಿ ವಾಣಿಜ್ಯ ಮಂಡಳಿ ಮೂಲಕ ವಿಜಯಲಕ್ಷ್ಮಿಗೆ ಹಸ್ತಾಂತರಿಸಿದ್ದರು. 'ನನಗೆ ಯಾರೂ ಇಲ್ಲ ಅನ್ನೋದು ನಿಮಗೆ ಗೊತ್ತಿದೆ. ಅಮ್ಮ ಹೋಗಿದ ತಕ್ಷಣ ನಾನು ಕರೆ ಮಾಡಿದ್ದು ಪ್ರೇಮಾ ಅವರಿಗೆ. ಏನ್ ಮಾಡ್ತೀಯಾ ನೀನು ಎಂದು ಪ್ರಶ್ನೆ ಮಾಡಿ, ನನಗೆ ಬಾಮಾ ಹರೀಶ್ ಅವರ ನಂಬರ್ ಕೊಟ್ಟರು. 

ಕರೆ ಮಾಡಿದ ತಕ್ಷಣ ಬರ್ತಾ ಇದ್ದೀನಿ ಅಂತ ಹೇಳಿದ್ರು. ನಾವು ಹೆಣ್ಣು ಮಕ್ಕಳು ಎಷ್ಟೇ ಧೈರ್ಯವಂತರಾದರೂ ಒಂದು ಪಾಯಿಂಟ್‌ನಲ್ಲಿ ಸೋತು ಹೋಗುತ್ತೇವೆ. ಸುಂಟಿಕೊಪ್ಪ ಅನಾಥ ಆಶ್ರಮಕ್ಕೆ ಕರೆದುಕೊಂಡು ನೈಟ್‌ ಅಲ್ಲೇ ಇಟ್ಟು ಬೆಳಗ್ಗೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆಮೇಲೆ ಮೂರು ದಿನಗಳ ನಂತರ ಶ್ರೀರಂಗಪಟ್ಟಣದಲ್ಲಿ ಭೂದಿ ಬಿಟ್ಟು ಪೂಜೆ ಮಾಡಿ, ಅವರ ಆತ್ಮ ತೃಪ್ತಿಯಾಗಿ ಕಳುಹಿಸುವ ಕೆಲಸ ಮಾಡಿದ್ದೀವಿ,' ಎಂದು ವಿಜಯ್ ಲಕ್ಷ್ಮಿ ಮಾತನಾಡಿದ್ದರು. 'ದಯವಿಟ್ಟು ವಿಚಾರವನ್ನು ಕಾಂಪ್ಲೀಕೇಟ್ ಮಾಡಬೇಡಿ. ಮೀಡಿಯಾದವರು ಓವರ್ ಎಫೀಶಿಯಂಟ್ ಆಗಬೇಡಿ. ಎಲ್ಲರ ಬಂದು ಕೈ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಯಾವ ಅಕೌಂಟ್‌ಗೆ ದುಡ್ಡು ಹಾಕಬೇಕು ಎಂದು ಕೇಳುತ್ತಿದ್ದಾರೆ. ಯಾರೂ ಚುಚ್ಚುವ ಕೆಲಸ ಮಾಡುತ್ತಿಲ್ಲ. 

'ಸೃಜನ್‌ ಗೆ ಮೋಸ ಮಾಡಿ ಬೀದಿಗೆ ಬಂದಳು' ಕಣ್ಣೀರು ಬತ್ತಿಹೋಗಿದೆ!

ಶಿವಣ್ಣ, ಯಶ್ ಎಲ್ಲರೂ ನನ್ನ ಜೊತೆ ಮಾತನಾಡಿ ಆಯ್ತು. ನಾವು ಕಲಾವಿದರು ಹೊಡೆದುಕೊಂಡರೂ, ಒಂದೇ ಫ್ಯಾಮಿಲಿಯಲ್ಲಿ ಇರಬೇಕು.  ಆನೇಕಲ್‌ನಲ್ಲಿ ಒಂದು ಮನೆ ಫ್ರೀ ಆಗಿ ಕೊಡುತ್ತಿದ್ದಾರೆ ನನಗೆ. ಆದರೆ ನಾನು ಹೋಗುತ್ತಿಲ್ಲ ಏಕೆಂದರೆ ನಾನು ಬೆಂಗಳೂರಿನಲ್ಲಿ ಇದ್ದರೆ ಮಾತ್ರ ಸಿನಿಮಾ ಚಿತ್ರೀಕರಣ ಮಾಡಲು ಸಾಧ್ಯ. ಒಂದು ತಿಂಗಳು ನಾನು ಅಳುವುದಕ್ಕೆ ಆಗುತ್ತಾ? ಅಕ್ಕನಿಗೆ ಒಂದೇ ತಿಂಗಳಲ್ಲಿ ಚಿಕಿತ್ಸೆ ನೀಡುವುದಕ್ಕೆ ಆಗುತ್ತಾ? ನಾನು ಅನಾಥೆ. ನನಗೆ ಇವರೇ ಫ್ಯಾಮಿಲಿ. ಈಗ ನನಗೆ 3 ಲಕ್ಷ ಬಂದಿದೆ ಅಂದ್ರೆ ನಾನು ಹರೀಶ್ ಅಣ್ಣ ಅವರಿಗೆ ಕೇಳುತ್ತಿರುವೆ ಅಣ್ಣ ಇದನ್ನ ಏನ್ ಮಾಡ್ಲಿ ಅಂತ,' ಎಂದಿದ್ದರು ವಿಜಯಲಕ್ಷ್ಮಿ.

Follow Us:
Download App:
  • android
  • ios