Asianet Suvarna News Asianet Suvarna News

ವಿಜಯಲಕ್ಷ್ಮೀ ಹೆಸರಿನಲ್ಲಿ ಸಂಗ್ರಹವಾಗಿದ್ದ ಹಣ  ಫಿಲ್ಮ್ ಛೆಂಬರ್‌ಗೆ ನೀಡಿದ  ಯೋಗೇಶ್

* ಸಂಗ್ರಹವಾದ ಹಣ ಕೈಗೆ  ಬಂದಿಲ್ಲ ಎಂದು ನಟಿ ವಿಜಯಲಕ್ಷ್ಮಿ ಆರೋಪ
* ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿಗೆ ಹಣ ನೀಡಿದ ಯೋಗೇಶ್
* ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ  ನಟಿ ಆರೋಪ ಮಾಡಿದ್ದರು
* 3 ಲಕ್ಷ 2 ಸಾವಿರ 900 ರೂಪಾಯಿ ನೀಡಿಕೆ

Janasnehi Trust Yogesh Returns Money Collected For Vijayalakshmi to Karnataka Film Chamber mah
Author
Bengaluru, First Published Oct 4, 2021, 6:30 PM IST

ಬೆಂಗಳೂರು(ಅ. 04) ನೆರವಿಗೆ ಎಂದು ಅಭಿಮಾನಿಗಳು ಮತ್ತು ಜನರು ನೀಡಿದ್ದ ಹಣ(Money) ನನ್ನ ಕೈ ಸೇರಿಲ್ಲ ಎಂದು ನಟಿ ವಿಜಯಲಕ್ಷ್ಮಿ(Vijayalakshmi)ಆರೋಪ ಮಾಡಿದ್ದಸರು. ಸೋಮವಾರ ಹಣ ನೀಡುತ್ತೇನೆ ಎಂದು ಹೇಳಿ ಯೋಗೇಶ್ ಎಂಬುವರು ವಂಚನೆ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದರು

ಜನಸ್ನೇಹಿ ನಿರಾಶ್ರಿತರ ಆಶ್ರಮದ ಯೋಗೇಶ್ ನಟಿ ವಿಜಯಲಕ್ಷ್ಮಿ ಅವರ ತಾಯಿಯ ಅಂತ್ಯಕ್ರಿಯೆ ಮಾಡಿದ್ದರು. ನಟಿ ವಿಜಯಲಕ್ಷ್ಮಿ ತೀವ್ರ ಸಂಕಷ್ಟದಲ್ಲಿದ್ದು ಹಣ ನೀಡುವಂತೆ ಯೋಗೀಶ್ ತಮ್ಮ ಅಕೌಂಟ್ ವಿವಿರ ನೀಡಿದ್ದರು. ಕೇವಲ 3 ದಿನಗಳಲ್ಲಿ 3‌ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು.

ಬಿಗ್ ಬಾಸ್ ಗೂ ಹೋಗ್ತೆನೆ.. ಸಿನಿಮಾ ಮಾಡ್ತೆನೆ ಎಂದ ನಟಿ

ಫಿಲ್ಮ್ ಚೇಂಬರ್ ನಲ್ಲಿ (Sandalwood) ಶುಕ್ರವಾರ ನಟಿ ವಿಜಯಲಕ್ಷ್ಮಿ ಮತ್ತು ಯೋಗೀಶ್ ನ ಕರೆಸಿ ಹಣ ಹಸ್ತಾಂತರಿಸಲು ಮುಂದಾಗಿದ್ದರು.ಆದರೆ ಯೋಗೀಶ್ ಸೋಮವಾರ ಹಣ ಕೋಡೋದಾಗಿ ಹೇಳಿ ಹೋಗಿದ್ದರು. 

ಭಾನುವಾರ ಫೇಸ್ಬುಕ್ ಲೈವ್ (Social Media) ನಲ್ಲಿ ನಟಿ ಹಣ ಕೈಸೇರಿಲ್ಲ ಎಂದು ಆರೋಪ ಮಾಡಿದ್ದರು. ನನ್ನ ತಾಯಿಯ ಸಾವಿನ ವಿಚಾರ ಇಟ್ಟುಕೊಂಡು ಜನರಿಂದ ಹಣ ಸಂಗ್ರಹಿಸಿ ಯಾಮಾರಿಸಿದ್ದೀರಾ? ಜನಸ್ನೇಹಿ ಯೋಗೀಶ್ ನನಗೆ ದ್ರೋಹ ಬಗೆದಿದ್ದಾರೆ. ನನ್ನ ತೇಜೋವಧೆ ಮಾಡ್ತಿದ್ದಾರೆ. ಜನಸ್ನೇಹಿ ಟ್ರಸ್ಟ್ ಯೋಗೀಶ್ ನ ಯಾರು ನಂಬಬೇಡಿ. ಈ ವಿಚಾರವಾಗಿ ನಾನು ಕೋರ್ಟ್ ಗೆ ಹೋಗುತ್ತೇನೆ ಎಂದೆಲ್ಲ ಹೇಳಿದ್ದರು.

ವಿಜಯಲಕ್ಷ್ಮಿ ಹೆಸರಿನಲ್ಲಿ ಕಲೆ ಹಾಕಿರುವ ಹಣ ಕೊಡಲು ಕನ್ನಡಪರ ಸಂಘಟನೆಯ ಸದಸ್ಯರೊಂದಿಗೆ ಯೋಗೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ್ದಾರೆ. ಎಷ್ಟು ಹಣ ಸಂಗ್ರಹವಾಗಿದೆ ಅನ್ನೊದ್ರ ಲೆಕ್ಕ ಕೊಟ್ಟು ಕಾರ್ಯದರ್ಶಿಗಳಿಗೆ ತಲುಪಿಸಲಿದ್ದಾರೆ. ಎನ್ ಎಂ ಸುರೇಶ್, ಭಾ.ಮಾ ಹರೀಶ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ. 

ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್. ಎಂ ಸುರೇಶ್ ಜೊತೆ ಯೋಗೀಶ್ ಮಾತುಕತೆ ನಡೆಸಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್ ಎಂ ಸುರೇಶ್ ಗೆ 3 ಲಕ್ಷ 2 ಸಾವಿರ 900 ರೂಪಾಯಿ ನೀಡಿದ್ದಾರೆ ಆ ಹಣವನ್ನು ನಟಿ ವಿಜಯಲಕ್ಷ್ಮಿ ಅವರಿಗೆ ನೀಡುವುದಾಗಿ ತಿಳಿಸಿದ ಸುರೇಶ್  ತಿಳಿಸಿದ್ದಾರೆ ಇನ್ನು ಮುಂದೆ ವಿಜಯಲಕ್ಷ್ಮೀ ನೆರವಿಗೆ ಹಣವನ್ನು ತಮಗೆ ನೀಡಬಾರದು ಎಂದು  ಯೋಗೀಶ್ ಮನವಿ ಮಾಡಿಕೊಂಡಿದ್ದಾರೆ. 

 

Follow Us:
Download App:
  • android
  • ios