'ಸೃಜನ್ ಗೆ ಮೋಸ ಮಾಡಿ ಬೀದಿಗೆ ಬಂದಳು' ಕಣ್ಣೀರು ಬತ್ತಿಹೋಗಿದೆ!
* ನಾನು ವಿಜಯಲಕ್ಷ್ಮಿ ಕರ್ನಾಟಕದ ಮಗಳು
* ನಾನು ಮತ್ತೆ ಭರವಸೆ ಇಟ್ಟುಕೊಂಡು ಬೆಂಗಳೂರಿಗೆ ಬಂದಿದ್ದೇನೆ
* ಸೃಜನ್ ಗೆ ಮೋಸ ಮಾಡಿದ್ದಕ್ಕೆ ಬೀದಿಗೆ ಬಂದಳು ಎಂದು ಬರೆಯಬಬೇಡಿ
* ಫೆಸ್ ಬುಕ್ ಲೈವ್ ನಲ್ಲಿ ಅನೇಕ ವಿಚಾರ ಹಂಚಿಕೊಂಡ ನಟಿ
ಬೆಂಗಳೂರು(ಜು . 07) ನಟಿ ವಿಜಯಲಕ್ಷ್ಮೀ ಮತ್ತೆ ಫೇಸ್ ಬುಕ್ ಲೈವ್ ಬಂದಿದ್ದು ಅನೇಕ ವಿಚಾರಗಳನ್ನು ಹೇಳಿದ್ದಾರೆ. ಮಾಧ್ಯಮಗಳಿಗೂ ಒಂದು ವಿಚಾರ ಹೇಳಬೇಕು ಎಂದು ಬಂದಿದ್ದೇನೆ. ನನ್ನ ಮತ್ತು ಸೃಜನ್ ಲೋಕೇಶ್ ಬಗ್ಗೆ ಮತ್ತೆ ಮತ್ತೆ ಮಾತನಾಡುತ್ತಿದ್ದಾರೆ. ಅವರನ್ನು ಮದುವೆಯಾಗದ್ದಕ್ಕೆ ಬೀದಿಗೆ ಬಂದೆ ಎಂದು ಹೇಳುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಅವರ ಮಾತುಗಳಲ್ಲೇ ಅವರ ನೋವನ್ನು ಕೇಳಿ..
ಜೀವನದ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ನನಗೆ ಮೂವತ್ತೊಂಭತ್ತು ವರ್ಷ. ನಾಗಮಂಡಲದ ಕ್ಲೈಮಾಕ್ಸ್ ತರ ನನ್ನ ಜೀವನವಾಗಿದೆ. ನಾನು ಗುಬ್ಬಚ್ಚಿ ಅಲ್ಲ. ಆದರೆ ಹಿರಿಯರ ಮುಂದೆ ಇದೊಂದು ವಿಚಾರ ಇಡುತ್ತಿದ್ದೇನೆ ಎಂದು ವಿಜಯಲಕ್ಷ್ಮೀ ಹೇಳಿಕೊಂಡಿದ್ದಾರೆ.
ನನ್ನ ಮಾತೃಭಾಷೆ ತಮಿಳು, ನಾಣು ಹುಟ್ಟಿದ್ದು ಯಶವಂತಪುರದ ಮನೆಯಲ್ಲಿ. ನನ್ನ ಎಲ್ಲ ಫೌಂಡೇಶನ್ ಕರ್ನಾಟಕದಲ್ಲಿ. ಎಲ್ಲರೂ ನನ್ನನ್ನು ಬೆಂಗಳೂರು ವಿಜಯಲಕ್ಷ್ಮೀ ಎಂದೇ ಕರೆಯುತ್ತಾರೆ.
ಸೃಜನ್ ಯಾಮಾರಿಸಿ ಬೀದಿಗೆ ಬಂದಳು ಎನ್ನುವವರು ನಾವು ಯಾವ ಬೀದಿಯಲ್ಲಿ ಇದ್ದೇವೆ ಎನ್ನುವುದನ್ನು ಹೇಳಬೇಕಿದೆ. ಲಕ್ಷ ಲಕ್ಷ ಖರ್ಚು ಮಾಡಿ ಎಂಗೇಜ್ ಮೆಂಟ್ ಮಾಡಿಸಿದ್ದು ನಾವೇ. ಎಲ್ಲ ಅರೆಂಜ್ ಮೆಂಟ್ ಮಾಡಿಸಿದಾಗ ನಾವು ಕನ್ನಡದವರು.. ನೀವು ತಮಿಳರಲ್ಲವಾ.. ಈ ರೀತಿ ಪ್ರಸ್ತಾಪ ಆಗುತ್ತಲೇ ಬಂತು. ಸೃಜನ್ ಮತ್ತು ನಾನು ಒಳ್ಳೆಯ ಸ್ನೇಹಿತರೇ ಆಗಿದ್ದೇವು. ನಮ್ಮಿಬ್ಬರಲ್ಲಿ ಏನೂ ಸಮಸ್ಯೆ ಇರಲಿಲ್ಲ.. ನೀವು ತಮಿಳರಲ್ಲವಾ? ಹೀಗೆ ಮಾತು ಮುಂದುವರಿಯುತ್ತಲೇ ಇತ್ತು.
ಎಂಗೇಜ್ ಮೆಂಟ್ ಮಾಡಿಸಿಕೊಂಡು ಬಿಟ್ಟು ಹೋಗಬೇಕು ಎಂದು ಯಾವ ಹುಡುಗಿಯೂ ಬಯಸುವುದಿಲ್ಲ. ನಾವಿಬ್ಬರೂ ಕುಳಿತುಕೊಂಡೇ ತೀರ್ಮಾನ ಮಾಡಿದೆವು. ಇದ್ನ್ನೇ ಸ್ವಚ್ಛವಾದ ಪ್ರೀತಿ ಎಂದು ಕರೆಯುತ್ತೇವೆ. ಮನೆಯಲ್ಲಿ ಯಾರಿಗೂ ಇಷ್ಟ ಇಲ್ಲದೇ ಮದುವೆ ಮಾಡಿಕೊಂಡು ದಿನಾ ಹೋರಾಟ ಮಾಡುವುದು ಬೇಡ ಎಂದು ತೀರ್ಮಾನ ತೆಗೆದುಕೊಂಡೆ.
ವಿಜಯಲಕ್ಷ್ಮೀ-ರವಿಪ್ರಕಾಶ್ ಕೇಸ್ ಗೆ ಟ್ವಿಸ್ಟ್
ನಾನು ಮೋಸ ಮಾಡಿದ್ದೇನೆ ಎಂದು ಹೇಳುತ್ತಿದ್ದಾರಲ್ಲಾ? ಅನೇಕ ನಟರ ಬಾಳಲ್ಲೂ ಇದಾಗಿದೆ.. ಅವರ ಬಗ್ಗೆಯೂ ಬರೆಯುತ್ತಿದ್ದೀರಾ.. ನನಗೆ ಎಲ್ಲ ಗೊತ್ತಾಗುತ್ತಿದೆ. ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದೇನೆ. ಏನಾಗಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ನನ್ನನ್ನು ತಮಿಳರು ಎಂದ ಡ ಪೂಜಾ ಅವರೇ ತಮಿಳಿನಲ್ಲಿ ಧಾರಾವಾಹಿ ಮಾಡಿದರು. ಈ ವಿಚಾರದ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ.
ಕಲಾವಿದರ ಫಂಡ್ ಬಗ್ಗೆ ನಾನು ಮೊಟ್ಟಮೊದಲನೆಯವಳಾಗಿ ಒಂದು ಲಕ್ಷ ರೂ. ಕೊಟ್ಟೆ. ಎಲ್ಲಿಯೂ ಹೇಳಿಕೊಂಡಿಲ್ಲ. ನನ್ನ ಕೈಯಲ್ಲಿ ನಿಜವಾದ ಹಾವು ಕೊಟ್ಟರು ಅದರ ಜತೆಯೇ ನಟನೆ ಮಾಡಿದೆ. ಯಾವ ಬೀದಿಯಲ್ಲಿ ನಿಂತಿದ್ದೇನೆ ಸ್ವಾಮಿ? ಯಾವ ರೇಪ್ ಕೇಸ್ ಹಾಕಿದ್ದೀನಿ..ಹೇಳಿ.. ತಮಿಳುನಾಡಿನಲ್ಲಿ ನಿಂತು ಕನ್ನಡದ ಪರ ಮಾತನಾಡಿದ್ದೇನೆ. ನನ್ನ ಜನ ಇದ್ದಾರೆ ಎಂದು ಹೇಳಿ ಬಂದಿದ್ದೇನೆ...
ಮತ್ತೆ ಈ ತರ ಮಾತಾಡುತ್ತಿದ್ದರೆ ಅನೇಕ ವಿಚಾರಗಳು ಹೊರಬರುತ್ತವೆ. ನಾಲ್ಕು ತಿಂಗಳು ಕಾಲ ನನ್ನ ಕರೆಸಿ ಕರೆಸಿ ಕ್ಷಮೆ ಕೇಳಿದರು. ಪಾರ್ವತಮ್ಮ ರಾಜ್ ಕುಮಾರ್ ಅವರು ಆ ಸಮಯದಲ್ಲಿ ನನ್ನನ್ನು ಕಾಪಾಡಿದರು. ಪಾರ್ವತಮ್ಮ ಇರುವ ಜಾಗದಲ್ಲಿ ಈಗ ಶಿವಣ್ಣ ಇದ್ದಾರೆ. ಯಾರ ಮನೆಯಲ್ಲಿ ಇದ್ದ ಕೋಟಿ ರೂ. ತೆಗೆದುಕೊಂಡು ಓಡಿ ಹೋಗಲಿಲ್ಲ. ಆ ಭಾಷೆ ಎನ್ನುವುದು ಸಮಸ್ಯೆ ತಂತು..
ನಾನು ಹದಿನೈದು ವರ್ಷ ಆಯಿತಿ ಚೆನ್ನೈಗೆ ಹೋಗಿ. ಸ್ವಚ್ಛ ಕನ್ನಡದಲ್ಲಿ ಮಾತನಾಡುತ್ತೇನೆ. ಚೆನ್ನೈನಿಂದ ಕನ್ನಡಿಗರನ್ನು ಓಡಿಸಿ ಎಂದು ಹೇಳುತ್ತಾರಲ್ಲ ಅವರ ಬಗ್ಗೆ ಹೋರಾಟ ಮಾಡಿ. ಬೇರೆ ನಟಿಯರ ಬಗ್ಗೆ ಬರೆಯಲ್ಲ.. ಏನು ಬೇಕಾದರೂ ಬರೆದು ಬಿಡೋಣ ವಿಜಯಲಕ್ಷ್ಮಿ ಬಗ್ಗೆ ಎಂದು ಮುಂದಾಗಿದ್ದೀರಾ...! ಕರ್ನಾಟದ ಬಗ್ಗೆ ಪ್ರೀತಿ ಯಾವಾಗಲೂ ಇರುತ್ತದೆ.. ನನ್ನ ಮಾತನ್ನು ತಿರುಗಿಸಿ ಹಾಕಬೇಡಿ... ಇನ್ನೊಮ್ಮೆ ಸೃಜನ್ ಗೆ ಯಾಮಾರಿಸಿದೆ ಎಂದು ಹೇಳಿದ್ದರೆ ಶಿವಣ್ಣ ಬಳಿ ಎರಡು ಕುಟುಂಬ ಕರೆದುಕೊಂಡು ಹೋಗಿ ಪಂಚಾಯಿತಿ ನಡೆಸಬೇಕಾಗುತ್ತದೆ. ತಮಿಳುನಾಡಿಗೂ ನನಗೂ ಸಂಬಂಧ ಮುಗಿದಿದೆ. ನನ್ನ ಕರ್ನಾಟಕದಲ್ಲಿ ನನಗೆ ಬದುಕಲು ಬಿಡಿ...ಅಳೋದಕ್ಕೆ ನನಗೆ ಕಣ್ಣೀರು ಸಹ ಇಲ್ಲ..