Asianet Suvarna News Asianet Suvarna News

ಸಂಬಳ ಕೇಳಿದ ಟ್ಯಾಕ್ಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿಯರು

ಯುವತಿಯರ ಗುಂಪೊಂದು ಸಾರ್ವಜನಿಕ ಸ್ಥಳದಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

group of women thrashing a man outside the Swami Vivekananda International Airport in Raipur akb
Author
First Published Sep 20, 2022, 3:06 PM IST

ರಾಯ್‌ಪುರ: ಸಣ್ಣಪುಟ್ಟ ಕಾರಣಗಳಿಗೆ ಯುವಕರು ಗ್ಯಾಂಗ್ ಕಟ್ಟಿಕೊಂಡು ಬಂದು ತಮ್ಮ ವಿರೋಧಿ ಗುಂಪಿನ ಯುವಕನಿಗೆ ಬಾರಿಸಿದಂತಹ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಆದರೆ ಇಲ್ಲೊಂದು ಕಡೆ ಯುವತಿಯರ ಗುಂಪೊಂದು ಸಾರ್ವಜನಿಕ ಸ್ಥಳದಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರ್‌ನ ವಿಮಾನ ನಿಲ್ದಾಣದಲ್ಲಿ ಈ ಭಯಾನಕ ಘಟನೆ ನಡೆದಿದೆ. ಇಲ್ಲಿನ ಸ್ವಾಮಿ ವಿವೇಕಾನಂದ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ (Swami Vivekananda International Airport) ಈ ಘಟನೆ ನಡೆದಿದ್ದು, ಇದರ ವಿಡಿಯೋ ನೆಟ್ಟಿಗರನ್ನು ಕೆಲ ಕಾಲ ದಂಗುಗೊಳಿಸುವಂತೆ ಮಾಡಿದೆ. ಹೀಗೆ ಯುವತಿಯರಿಂದ ಹಲ್ಲೆಗೊಳಗಾದ ಯುವಕನನ್ನು ದಿನೇಶ್ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಕ್ಯಾಬ್ ಚಾಲಕ (Cab driver) ಎಂದು ತಿಳಿದು ಬಂದಿದೆ. ಈ ಕ್ಯಾಬ್ ಚಾಲಕ ರಾಹುಲ್ ಟ್ರಾವೆಲ್ಸ್ (Rahul Travels)ಎಂಬ ಟ್ರಾವೆಲ್ ಸಂಸ್ಥೆಯೊಂದರಲ್ಲಿ ಕೆಲಸಕ್ಕಿದ್ದ. 

ಆದರೆ ಈತನಿಗೆ ಟ್ರಾವೆಲ್ ಕಂಪನಿ ಮೇ ಹಾಗೂ ಜೂನ್ ತಿಂಗಳಲ್ಲಿ ಸಂಬಳ (salary) ನೀಡಿಲ್ಲ ಎನ್ನಲಾಗಿದ್ದು, ಈ ಬಗ್ಗೆ ದಿನೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಈ ಬಗ್ಗೆ ದಿನೇಶ್ ಕಂಪನಿ ಮ್ಯಾನೇಜರ್ (Manager) ಬಳಿ ಈ ಬಗ್ಗೆ ಕೇಳಿದಾಗ, ಕಂಪನಿ ಸಿಬ್ಬಂದಿ ಆತನ ವಿರುದ್ಧ ಅಸಮಾಧಾನ ವ್ಯಕ್ತಿಪಡಿಸಿದ್ದರು.  ಇದಾದ ಬಳಿಕವೂ ಟಾಕ್ಸಿ ಡ್ರೈವರ್‌ಗೆ(taxi driver) ಸಂಬಳವೇನೂ ಸಿಕ್ಕಿಲ್ಲ, ಆದರೆ ಈತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಉದ್ಯೋಗಿಗಳು ಈತನೊಂದಿಗೆ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾರೆ. ಈ ಬಗ್ಗೆ ದಿನೇಶ್ ಮ್ಯಾನೇಜರ್ ನಂಬರ್ ನೀಡುವಂತೆ ಕೇಳಿದಾಗ, ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳು ಆತನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. 

ಅಕ್ಕಂಗೆ ಟೈಟಾಗಿದೆ, ಪೊಲೀಸ್ ಸೇರಿ ಕ್ಯಾಬ್ ಡ್ರೈವರ್ ಮೇಲೆ ಎಗರಾಡಿ ನಡು ಬೀದಿಯಲ್ಲಿ ರಂಪಾಟ!

ಘಟನೆಯ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಮಹಿಳೆಯರ ಗುಂಪು, ಚಾಲಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆತನ ಬಟ್ಟೆಯನ್ನು ಹರಿದು ಹಾಕುತ್ತಿರುವುದು ಕಾಣಿಸುತ್ತಿದೆ. ಆತನನ್ನು ಹೊಡೆಯುವುದಕ್ಕೆ ಮಹಿಳೆಯರು ಬೆಲ್ಟ್ ಬಳಸಿದ್ದನ್ನು ಕೂಡ ವಿಡಿಯೋ ತೋರಿಸುತ್ತಿದೆ. ಈ ವೇಳೆ ದಿನೇಶ್(Dinesh) ಸ್ಥಳದಿಂದ ಓಡಿ ಹೋಗಿ ಯತ್ನಿಸಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದ ಅನೇಕರು ನೋಡುತ್ತಾ ನಿಂತಿದ್ದು, ಯಾರೂ ಕೂಡ ಯುವಕನ ಸಹಾಯಕ್ಕೆ ಧಾವಿಸಿ ಬಂದಿಲ್ಲ. ಘಟನೆ ಬಗ್ಗೆ ದಿನೇಶ್ ತಾನು ಕೆಲಸ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿ ಹಾಗೂ ಅದರ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. 

ಈ ಘಟನೆಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಾಲಕನ ಸಹಾಯಕ್ಕೆ ಧಾವಿಸದೇ ಸುಮ್ಮನೆ ನಿಂತ ಮಜಾ ನೋಡುತ್ತಾ ನಿಂತ ಜನರ ವಿರುದ್ಧವೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ ಒಂದು ವೇಳೆ ತಪ್ಪು ಮಾಡಿದ್ದರೂ ಕೂಡ ಈ ರೀತಿಯ ಶಿಕ್ಷೆ ನೀಡಿದ್ದು ಸರಿಯಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 
Success Story: ಕ್ಯಾಬ್ ಡ್ರೈವರ್‌ ಆಗಿದ್ದವ ಸಾಫ್ಟ್‌ವೇರ್ ಇಂಜಿನಿಯರ್ ಆದ!

Follow Us:
Download App:
  • android
  • ios