Success Story: ಕ್ಯಾಬ್ ಡ್ರೈವರ್ ಆಗಿದ್ದವ ಸಾಫ್ಟ್‌ವೇರ್ ಇಂಜಿನಿಯರ್ ಆದ!
* ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಆಶಿಶ್‌ಗೆ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು.
* ಡ್ರೈವಿಂಗ್ ಕಲಿತು ಕಾರು ಚಾಲಕನಾಗಿದ್ದು. ಆದರೆ, ತನ್ನ ಗುರಿಯನ್ನು ಬಿಟ್ಟುಕೊಟ್ಟಿರಲಿಲ್ಲ
* ಕೋಡಿಂಗ್ ಕಲಿತು ಸಾಫ್ಟ್‌ವೇರ್ ಎಂಜಿನಿಯರ್ ಆದ ಬಿಹಾರದ ಈ ಯುವಕ
ಗುರಿ ಮುಟ್ಟುವ ಛಲವಿದ್ದರೆ ಅಂದುಕೊಂಡಿದ್ದನ್ನ ಸಾಧಿಸಬಹುದು. ಬಡತನದಿಂದಲೋ? ಸೌಕರ್ಯ ಕೊರತೆಯಿಂದಲೋ? ಅನಾರೋಗ್ಯದಿಂದಲೋ? ನಾನಾ ಕಾರಣಗಳಿಂದಾಗಿ ಕೆಲವೊಮ್ಮೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಆದ್ರೆ ಎಷ್ಟೇ ಕಷ್ಟವಿದ್ರೂ ಛಲ ಬಿಡದೇ ಪ್ರಯತ್ನಿಸಿದರೆ ಗುರಿ ಮುಟ್ಟಬಹುದು ಅನ್ನೋದಕ್ಕೆ ಬಿಹಾರದ ಕ್ಯಾಬ್ ಡ್ರೈವರ್ ಮಾಡಿರೋ ಸಾಧನೆಯೇ ಸಾಕ್ಷಿ. ಕ್ಯಾಬ್ ಡ್ರೈವರ್ ಆಶಿಶ್ ರಾಜ್ (Ashish Raj) ಈಗ ಟೆಕ್ಕಿ. ದೊಡ್ಡ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ವೆಬ್ ಎಂಗೇಜ್ (WebEngage) ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ (Software Engineer) ಆಗಿ ಕೆಲಸ ಮಾಡುತ್ತಿದ್ದಾರೆ. ಕ್ಯಾಬ್ (Cab) ಓಡಿಸುವುದರ ಜೊತೆಗೆ ಒಂದೊಳ್ಳೆ ಕಂಪನಿಯಲ್ಲಿ ಕೆಲಸ ಪಡೆಯಲು ಸಾಕಷ್ಟು ಶ್ರಮಿಸಿದ್ದಾರೆ. ಕ್ಯಾಬ್ ಚಾಲನೆ ಮಾಡೋದರ ಜೊತೆಗೆ ಕೋಡಿಂಗ್ ಕುರಿತು 30 ವಾರಗಳ ಕೋರ್ಸ್ ಪೂರೈಸಿದ್ದಾರೆ. ಈ ಶಾರ್ಟ್ ಕೋರ್ಸ್ ಅವರ ಜೀವನವನ್ನೇ ಬಲಾಯಿಸಿಬಿಟ್ಟಿದೆ. ಸಾಫ್ಟ್‌ವೇರ್ ಡೆವಲಪರ್ ಕೆಲಸ ದಕ್ಕಿಸಿಕೊಂಡಿದ್ದಾರೆ. ಮುಂಗಾರ್ ಮೂಲದ ಆಶಿಶ್ ರಾಜ್ ರೈತನ ಮಗನಾಗಿದ್ದು, ಅವರ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ. ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಉನ್ನತ ಶಿಕ್ಷಣಕ್ಕಾಗಿ ಮಧ್ಯಪ್ರದೇಶದ ಭೋಪಾಲ್‌ಗೆ ಸ್ಥಳಾಂತರಗೊಂಡರು. ಆದರೆ, ಪರಿಸ್ಥಿತಿಯೇನೂ ಸುಧಾರಣೆಯಾಗಲಿಲ್ಲ.
CBSE SRESHTA Scholarship: ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಶ್ರೇಷ್ಠ ಸ್ಕಾಲರಶಿಪ್ ಆರಂಭಿಸಿದ ಸಿಬಿಎಸ್ಇ
ಮಗನ ಶಿಕ್ಷಣಕ್ಕೆ ತಂದೆ ಕಷ್ಟಪಡುತ್ತಿದ್ದರು. ತಂದೆ ತಮ್ಮ ಜೀವನದ ಉಳಿತಾಯವನ್ನು ಮಗನ ಮೊದಲ ವರ್ಷದ ಕಾಲೇಜು ಶುಲ್ಕಕ್ಕಾಗಿ ಖರ್ಚು ಮಾಡಿದರು. ಆನಂತರ ತಮ್ಮ ಸ್ನೇಹಿತರು ಸಲಹೆಯ ಮೇರೆಗೆ, ಆಶಿಶ್ ಸರ್ಕಾರಿ ನೌಕರಿ ಪಡೆಯುವ ನಿರೀಕ್ಷೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಸೇರಿಕೊಂಡರು. ಬಳಿಕ ಜೀವನ ನಿರ್ವಹಣೆಗಾಗಿ, ಆಶಿಶ್ ತನ್ನ ಸೋದರಸಂಬಂಧಿಯ ಸಹಾಯವನ್ನು ಪಡೆದು ಕಾರ್ ಡ್ರೈವಿಂಗ್ ಕಲಿತು ಸ್ವಲ್ಪ ಸಮಯದೊಳಗೆ ಚಾಲನಾ ಪರವಾನಗಿಯನ್ನು ಪಡೆದರು. ಭೋಪಾಲ್ (Bhopal) ನಲ್ಲಿ ಕ್ಯಾಬ್ ಅಗ್ರಿಗೇಟರ್ ಉಬರ್ (Uber) ನೊಂದಿಗೆ ಚಾಲಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಹಣದ ಅತ್ಯಗತ್ಯವಿದ್ದ ಕಾರಣ ಆಶಿಸ್ ರಾಜ್‌ಗೆ ಕ್ಯಾಬ್ ಚಾಲನೆಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಅಧ್ಯಯನ ಮಾಡಲು ಸಮಯ ಅಥವಾ ಬೇರೆ ಸಂಪನ್ಮೂಲಗಳಿರಲಿಲ್ಲ. ಅವರು ತಮ್ಮ ಕೆಲಸದ ಸಮಯವನ್ನು ಮೊಟಕುಗೊಳಿಸಿದರೆ ಅಗತ್ಯವಿರುವ ಪುಸ್ತಕಗಳು, ಹಾಸ್ಟೆಲ್ ಶುಲ್ಕಗಳು ಸೇರಿದಂತೆ ಹೆಚ್ಚುವರಿ ಸರಬರಾಜುಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆಶಿಶ್ ರಾಜ್, ಅಲ್ಪಾವಧಿಯ ಕೋಡಿಂಗ್ ಕೋರ್ಸ್ (Coding Courses)ಗೆ ಸೇರ್ಪಡೆಯಾದರು. ಬಿಹಾರದ ಮಸಾಯ್‌ನಲ್ಲಿ ಪೂರ್ಣ-ಸ್ಟಾಕ್ ವೆಬ್ ಅಭಿವೃದ್ಧಿಯಲ್ಲಿ ಅಲ್ಪಾವಧಿಯ 30 ವಾರಗಳ ಕೋರ್ಸ್ ಸೇರಿಕೊಂಡರು. ಏಪ್ರಿಲ್ 2020 ರಲ್ಲಿ ಕೋರ್ಸ್ ತೆಗೆದುಕೊಂಡು MERN ಸ್ಟಾಕ್ ಜೊತೆಗೆ HTML, JavaScript, CSS ಕಲಿತರು. ಪ್ರಾಜೆಕ್ಟ್ ಕೆಲಸದ ಭಾಗವಾಗಿ ವೃತ್ತಿಪರ ನೆಟ್‌ವರ್ಕಿಂಗ್ ವೆಬ್‌ಸೈಟ್ ಲಿಂಕ್ಡ್‌ಇನ್‌ನ ಕ್ಲೋನ್ ಅನ್ನು ಸಹ ನಿರ್ಮಿಸಿದರು.
ಆಶಿಶ್‌ಗೆ, ಕೋರ್ಸ್ ಮುಗಿದ ನಂತರ ಕೆಲಸ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಸಂದರ್ಶನ ಕೌಶಲ್ಯದ ಕೊರತೆಯಿಂದಾಗಿ ಕೆಲಸ ಪಡೆಯುವುದು ವಿಳಂಬವಾಗಿತ್ತು. ಪ್ರತಿ ಸಂದರ್ಶನವನ್ನು ಅವರು ಕಲಿಕೆಯ ಹಂತವಾಗಿ ತೆಗೆದುಕೊಂಡರು. WebEngageನಲ್ಲಿ ಕೆಲಸಕ್ಕಾಗಿ, ಅವರು ಮೊದಲು ಕೋಡಿಂಗ್ ಪರೀಕ್ಷೆಯ ಮೂಲಕ ಹೋಗಬೇಕಾಗಿತ್ತು. ನಂತರ ತಾಂತ್ರಿಕ ಸಂದರ್ಶನ, ಆಮೇಲೆ ಮ್ಯಾನೇಜರ್ ಮತ್ತು HR ಸಂದರ್ಶನ ಸುತ್ತುಗಳನ್ನು ಎದುರಿಸಿ ಅಂತಿಮವಾಗಿ ಕೆಲಸ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
AIIA New Courses: ಎರಡು ಹೊಸ ಕೋರ್ಸ್ ಆರಂಭಿಸಿದ ಅಖಿಲ ಭಾರತ ಆರ್ಯುವೇದ ಸಂಸ್ಥೆ
ವ್ಯಕ್ತಿಯೊಬ್ಬ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಆಶಿಶ್ ಇದೀಗ ಉದಾಹಱಣೆಯಾಗಿದ್ದಾರೆ. ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಹುಡುಕಿಕೊಂಡು ಹೋಗುವುದನ್ನು ಎಷ್ಟೇ ಕಷ್ಟವಾದರೂ ಬಿಟ್ಟುಕೊಡಬಾರದು ಎಂಬುದನ್ನು ಈ ಯುವಕನ ಸಾಧನೆಯ ಕತೆ ಸಾರಿ ಹೇಳುತ್ತದೆ. ಗುರಿ ಮುಟ್ಟವರಿಗೆ ಸತತ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು. ಆಗ ಯಶಸ್ಸು ತಾನಾಗೇ ಒಲಿದು ಬರುತ್ತದೆ ಎನ್ನುವುದು ಈ ಯುವಕನೇ ಉದಾಹರಣೆಯಾಗಿದ್ದಾರೆ.