ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗಿ ಗ್ರೌಂಡ್ ಹ್ಯಾಂಡ್ಲಿಂಗ್ ಕಂಪನಿಯೊಂದರ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಬ್ಯಾಗೇಜ್‌ನಿಂದ ಎರಡು ಐಫೋನ್‌ಗಳನ್ನು ಕದ್ದಿದ್ದಾರೆ.

ಬೆಂಗಳೂರು (ಜೂನ್ 5, 2023): ನೀವು ವಿಮಾನ ಪ್ರಯಾಣ ಮಾಡ್ಬೇಕಾದ್ರೆ ಒಂದು ಬ್ಯಾಗ್‌ ಬಿಟ್ಟು ಮಿಕ್ಕೆಲ್ಲ ಲಗೇಜ್‌ಗಳನ್ನು ವಿಮಾನ ಸಿಬ್ಬಂದಿ ಅದನ್ನು ಬೇರೆ ವಿಮಾನದಲ್ಲಿ ಸಾಗಿಸಿ, ನೀವು ನಿಮ್ಮ ಜಾಗ ತಲುಪಿದಾಗ ನಿಮ್ಮ ಇತರೆ ಎಲ್ಲ ಲಗೇಜನ್ನು ನೀವು ನಿಗದಿತ ಜಾಗದಲ್ಲಿ ತೆಗೆದುಕೊಳ್ಳಬಹುದು. ಆದರೆ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಬ್ಬಂದಿಯೊಬ್ಬರು ಪ್ರಯಾಣಿಕರ ಬ್ಯಾಗ್‌ನಿಂದ ಐಫೋನ್‌ಗಳನ್ನು ಕಳ್ಳತನ ಮಾಡಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. 

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಖಾಸಗಿ ಗ್ರೌಂಡ್ ಹ್ಯಾಂಡ್ಲಿಂಗ್ ಕಂಪನಿಯೊಂದರ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಬ್ಯಾಗೇಜ್‌ನಿಂದ ಎರಡು ಐಫೋನ್‌ಗಳನ್ನು ಕದ್ದಿದ್ದಾರೆ ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಮೇ 31ರಂದು ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ವರದಿಯಾಗಿದೆ.

ಇದನ್ನು ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರಿ ಭದ್ರತಾ ಲೋಪ: ಮಾನವ ದೋಷ ಎಂದು ಸಮರ್ಥಿಸಿಕೊಂಡ ಅಧಿಕಾರಿಗಳು

TATA Sia Airlines Ltd (Vistara) ದ ಉದ್ಯೋಗಿ ಗಣೇಶ್ ಕುಮಾರ್ ಅವರು ನೀಡಿದ ದೂರಿನ ಪ್ರಕಾರ, ಪ್ರಯಾಣಿಕ ಹೇಮಂತ್ ಕುಮಾರ್ ಅವರು ಏಪ್ರಿಲ್ 28 ರಂದು ಬೆಂಗಳೂರಿನಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿನ ಸಿಬ್ಬಂದಿ ಪವರ್ ಬ್ಯಾಂಕ್‌ಗಳನ್ನು ತೆಗೆದುಹಾಕಲು ಅವರ ಬ್ಯಾಗ್ ಅನ್ನು ತೆರೆದರು. ಚೆಕ್-ಇನ್ ಬ್ಯಾಗೇಜ್‌ನಲ್ಲಿ ಪವರ್ ಬ್ಯಾಂಕ್‌ಗಳನ್ನು ನಿರ್ಬಂಧಿಸಿದ್ದು, ಈ ಹಿನ್ನೆಲೆ ಅದನ್ನು ತೆಗೆದುಹಾಕಿದ್ದಾರೆ. ಈ ಪ್ರಕ್ರಿಯೆಯ ನಂತರ, ಈ ಪ್ರಯಾಣಿಕರ ಲಗೇಜ್‌ ಅನ್ನು ಗಮ್ಯಸ್ಥಾನದ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ.

ಆದರೆ, ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಅನ್ನು ಸ್ವೀಕರಿಸಿದಾಗ, ಹೇಮಂತ್ ಕುಮಾರ್ ಅವರ ಎರಡು ಐಫೋನ್‌ಗಳು ಲಗೇಜಿನಲ್ಲಿ ಕಾಣೆಯಾಗಿದೆ ಎಂಬುದು ಅವರ ಅರಿವಿಗೆ ಬಂದಿದೆ. ಅವರು ತಕ್ಷಣ ಘಟನೆಯನ್ನು ಏರ್‌ಲೈನ್‌ಗೆ ವರದಿ ಮಾಡಿದರು, ನಂತರ ಅವರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳು ಫೋನ್ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.

ಇದನ್ನೂ ಓದಿ: ಮುಂಬೈಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯಿಂದ ಧೂಮಪಾನ: ಸಿಕ್ಕಿಬಿದ್ದ ಬಳಿಕ ಹುಚ್ಚು ಹುಚ್ಚಾಗಿ ಆಡ್ದ..!

ಆರೋಪಿ ಶುಭಂ ಮಿಶ್ರಾ, ಗ್ರೌಂಡ್-ಹ್ಯಾಂಡ್ಲಿಂಗ್ ಸರ್ವೀಸ್‌ ಪ್ರೊವೈಡರ್ AISATS ಲಿಮಿಟೆಡ್‌ನ 27 ವರ್ಷದ ಉದ್ಯೋಗಿ, ಏಪ್ರಿಲ್ 29 ರಂದು ಬೆಳಗಿನ ಜಾವ 2:30 ರ ಸುಮಾರಿಗೆ ಫೋನ್‌ಗಳನ್ನು ಕದ್ದಿದ್ದರು. ಅಲ್ಲದೆ, ಶುಭಂ ಮಿಶ್ರಾ ಫೋನ್‌ಗಳನ್ನು ಕದ್ದು ನಂತರ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇನ್ನು, ಕದ್ದ ವಸ್ತುಗಳ ಮೌಲ್ಯವನ್ನು ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಮರುಪಾವತಿ ಮಾಡಿದೆ. ಅದಲ್ಲದೆ, ಆರೋಪಿ ಶುಭಂ ಮಿಶ್ರಾ ಅವರನ್ನು ಏರ್‌ಲೈನ್ಸ್‌ ಕೆಲಸದಿಂದ ತೆಗೆದುಹಾಕಿದ್ದು, ಮತ್ತು ಅವರು ತಮ್ಮ ಊರಿಗೆ ಮರಳಿದ್ದಾರೆ. ಈ ಸಂಬಂಧ ಪೊಲೀಸರು ನೌಕರನ ಮೇಲೆ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ಭಾರತೀಯ ವಿದ್ಯಾರ್ಥಿಗೆ ಅಮೆರಿಕನ್‌ ಏರ್‌ಲೈನ್ಸ್ ನಿಷೇಧ