ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ. ಹೀಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ.ಮೊಮ್ಮಗನನ್ನು ಪ್ರೀತಿಯಿಂದ ಸ್ವಾಗತಿಸಿದ ಅಜ್ಜಿ ಅಜ್ಜಿಯನ್ನೇ ಹೈತ್ಯೆಗೈದ ಮೊಮ್ಮಗ ಪರಾರಿಯಾಗಿದ್ದಾನೆ.

ತ್ರಿಶೂರ್(ಜು.24) ಪೋಷಕರು ವಿಚ್ಚೇದನ, ತಾಯಿ ಬೇರೊಬ್ಬರನ್ನು ಮದುವೆಯಾಗಿ ದೂರ ಸರಿದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಕೇರಳದ ತ್ರಿಶೂರ್ ಜಿಲ್ಲೆಯ ಅಕ್ಮಲ್ ತೀವ್ರವಾಗಿ ನೊಂದಿದ್ದ. ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲ ತಿಂಗಳು ಚಿಕಿತ್ಸೆ ಪಡೆದ ಅಕ್ಮಲ್ ಚೇತರಿಸಿಕೊಂಡಿದ್ದ, ಸ್ವಭಾವದಲ್ಲಿ ಬದಲಾವಣೆಯಾಗಿತ್ತು. ತಾನು ಮನಗೆ ಮರಳುತ್ತೇನೆ. ಭವಿಷ್ಯ ರೂಪಿಸಿಕೊಳ್ಳುತ್ತೇನೆ ಎಂದು ಆಸ್ಪತ್ರೆ ವೈದ್ಯರಿಗೆ ಹೇಳಿದ್ದ. ಈತನ ವರ್ತನೆ, ನಡೆತೆ ಬದಲಾದ ಕಾರಣ ವೈದ್ಯರು ಅಕ್ಮಲನನ್ನು ಬಿಡುಗಡೆ ಮಾಡಿದ್ದಾರೆ. ಮನೆಗೆ ಮರಳಿದ ಮೊಮ್ಮಗನನ್ನು ಅಜ್ಜ-ಅಜ್ಜಿ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಆದರೆ ಸ್ವಾಾಗತ ಕೋರಿದ ಮರುಕ್ಷಣದಲ್ಲೇ ಅಜ್ಜ-ಅಜ್ಜಿಯನ್ನೇ ಹೈತ್ಯಗೈದು ಮಂಗಳೂರಿಗೆ ಪರಾರಿಯಾಗಿದ್ದ. ಇದೀಗ ಮಂಗಳೂರು ಪೊಲೀಸರು ಅಕ್ಮಲ್‌ನ ಬಂಧಿಸಿದ್ದಾರೆ.

ಅಕ್ಮಲ್ ತಾಯಿ ಬೇರೆ ಮದುವೆಯಾಗಿದ್ದಾರೆ. 75 ವರ್ಷದ ಅಜ್ಜ ಅಬ್ದುಲ್ಲಾ ಹಾಗೂ 64 ವರ್ಷದ ಜಮೀಲಾ ಪೋಷಣೆಯಲ್ಲೇ ಅಕ್ಮಲ್ ಬೆಳೆದಿದ್ದ. ಮನೆಯ ವಾತಾವರಣ ಸರಿಇಲ್ಲದ ಕಾರಣ ಅಕ್ಮಲ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಯಾರನ್ನೂ ಕಂಡರೂ ಆಕ್ರಮಣ ಮಾಡುವ ಪರಿಸ್ಥಿತಿಗೆ ತಲುಪಿದ್ದ. ಹೀಗಾಗಿ ಸ್ಥಳೀಯರು ಅಕ್ಮಲ್‌ನ ಹಿಡಿದು ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು. ಇತ್ತ ಮನೆಯಲ್ಲಿ ಅಜ್ಜ-ಅಜ್ಜಿ ಮೊಮ್ಮಗನ ಚೇತರಿಕೆಗಾಗಿ ಪ್ರಾರ್ಥನೆ ಆರಂಭಿಸಿದ್ದರು.

Bengaluru crime: ಕೈಕೊಡಲು ಯತ್ನಿಸಿದ ಪ್ರೇಮಿಗೆ ಇರಿದ ಪ್ರೇಯಸಿ!,ಇದೆಂಥ ಪ್ರೀತಿ?

ಕಳೆದ ಕೆಲ ತಿಂಗಳುಗಳಿಂದ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಅಕ್ಮಲ್ ಚಿಕಿತ್ಸೆ ಪಡೆಯುತ್ತಿದ್ದ. ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸಿದ್ದ. ಅಕ್ಮಲ್ ಆರೋಗ್ಯದಲ್ಲಿ ಭಾರಿ ಬದಲಾವಣೆ ಬಂದಿತ್ತು. ಅಜ್ಜ -ಅಜ್ಜಿ ಇಳಿವಯಸ್ಸಿನಲ್ಲೂ ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗನ ಆರೋಗ್ಯ ವಿಚಾರಿಸಿ ಬರುತ್ತಿದ್ದರು. ವೈದ್ಯರ ಚಿಕಿತ್ಸೆ, ಕೌನ್ಸಲಿಂಗ್‌ಗಳಿಂದ ಅಕ್ಮಲ್ ಸಂಪೂರ್ಣ ಬದಲಾಗಿದ್ದು. ವರ್ತನೆ, ನಡತೆ, ಮಾತುಗಳು ಬದಲಾಗಿತ್ತು.

ಇತ್ತ ವೈದ್ಯರ ಬಳಿ ತಾನು ಮನೆಗೆ ಹಿಂತಿರುಗುವುದಾಗಿ ಮನವಿ ಮಾಡಿದ್ದರು. ಅಜ್ಜ ಅಜ್ಜಿ ಜೊತೆ ಮುಂದಿನ ಜೀವನ ನಡೆಸುವುದಾಗಿ ಹೇಳಿದ್ದ. ಇತ್ತ ವೈದ್ಯರು ಕೂಡ ಅಕ್ಮಲ್ ಬದಲಾವಣೆ ಗಮನಿಸಿದದ್ದರು. ಹೀಗಾಗಿ ಬಿಡುಗಡೆ ಮಾಡಿದ್ದಾರೆ. ಆಸ್ಪತ್ರೆಯಿಂದ ಮರಳಿದ ಮೊಮ್ಮಗನನ್ನು ಮನೆಯಲ್ಲಿ ಅಜ್ಜ ಹಾಗೂ ಅಜ್ಜಿ ಪ್ರೀತಿಯಿಂದ ಸ್ವಾಗತಿಸಿದ್ದಾರೆ. 

ಅಕ್ಮಲ್‌ಗೆ ವಿಶೇಷ ಔತಣಕೂಟವನ್ನು ಆಯೋಜಿಸಿದ್ದಾರೆ. ಆದರೆ ಮನೆಗೆ ಮರಳುತ್ತಿದ್ದಂತೆ ಅಕ್ಮಲ್ ಗಂಭೀರವಾಗಿದ್ದಾನೆ. ಅಜ್ಜ ಅಜ್ಜಿಯನ್ನು ಪ್ರೀತಿಯಿಂದ ಮಾತನಾಡಿಸಿ ಕೆಲ ಹೊತ್ತಲ್ಲೇ ದಾಳಿ ಮಾಡಿದ್ದಾನೆ. ಅಕ್ಮಲ್ ದಾಳಿಗೆ ಅಜ್ಜ ಹಾಗೂ ಅಜ್ಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಜೆ ವೇಳೆ ಈ ಘಟನೆ ನಡೆದಿದೆ. ಬಳಿಕ ಅಕ್ಮಲ್ ಪರಾರಿಯಾಗಿದ್ದಾನೆ. ಮರುದಿನ ದಿನಸಿಗಳನ್ನು ತಲುಪಿಸಲು ಹೋದ ಅಂಗಡಿ ಸಿಬ್ಬಂದಿಗೆ ಇಬ್ಬರು ಕೊಲೆಯಾಗಿರುವುದು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಿರಿಕ್ ಕುಡುಕನ ಆಕ್ರೋಶಕ್ಕೆ ಹೊತ್ತಿ ಉರಿಯಿತು ಬಾರ್, ನಶೆಯಲ್ಲಿದ್ದ 11 ಮಂದಿ ಸಜೀವ ದಹನ!

ಗುರುವಾಯೂರ್ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಿಸಿಟಿವಿ ಸೇರಿದಂತೆ ಇತರ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ. ಇತ್ತ ಹತ್ಯೆಮಾಡಿ ಪರಾರಿಯಾದ ಅಕ್ಮಲ್ ಮಂಗಳೂರು ತಲುಪಿದ್ದಾನೆ. ಮಂಗಳೂರು ಪೊಲೀಸರು ಅಕ್ಮಲ್‌ನನ್ನು ಬಂಧಿಸಿದ್ದಾರೆ. ಇದೀಗ ಕೇರಳ ಪೊಲೀಸರು ಮಂಗಳೂರಿಗೆ ತೆರಳಿದ್ದಾರೆ.