ಜೀನ್ಸ್ ಪ್ಯಾಂಟ್‌ನಲ್ಲಿ ಚಿನ್ನದ ಪುಡಿ ತುಂಬಿ ಸಾಗಾಟ ಮಾಡುತ್ತಿದ್ದವ ಅರೆಸ್ಟ್
ಜೀನ್ಸ್ ಪ್ಯಾಂಟ್‌ಗಳಲ್ಲಿ ಚಿನ್ನದ ಪುಡಿಯನ್ನು ಅಡಗಿಸಿಕೊಂಡು ಅಕ್ರಮವಾಗಿ ಸಾಗಿಸುವಾಗ ಚಾಲಾಕಿ ಪ್ರಯಾಣಿಕನೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರು (ಫೆ.23): ಜೀನ್ಸ್ ಪ್ಯಾಂಟ್‌ಗಳಲ್ಲಿ ಚಿನ್ನದ ಪುಡಿಯನ್ನು ಅಡಗಿಸಿಕೊಂಡು ಅಕ್ರಮವಾಗಿ ಸಾಗಿಸುವಾಗ ಚಾಲಾಕಿ ಪ್ರಯಾಣಿಕನೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಎರಡು ದಿನಗಳ ಹಿಂದೆ ಕೆಐಎ (KIA)ಗೆ ಶಾರ್ಜಾದಿಂದ ಆಗಮಿಸಿದ್ದ ಪ್ರಯಾಣಿಕ ಬಂಧಿತನಾಗಿದ್ದು, ಆತನಿಂದ ₹22.58 ಲಕ್ಷ ಮೌಲ್ಯದ 367.77 ಗ್ರಾಂ ಚಿನ್ನದ ಪೌಡರ್ ಜಪ್ತಿ ಮಾಡಲಾಗಿದೆ. ಜೀನ್ಸ್ ಪ್ಯಾಂಟನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಅದರಲ್ಲಿ ಚಿನ್ನದ ಪೌಡರನ್ನು ಅಡಗಿಸಿಕೊಂಡು ಆತ ಬಂದಿದ್ದ. ವಿಮಾನ ನಿಲ್ದಾಣದಲ್ಲಿಳಿದು ಹೊರಬರುವಾಗ ಶಂಕೆ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದಾಗ ಅಕ್ರಮ ಚಿನ್ನ ಸಾಗಾಣಿಕೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಬೆಂಗಳೂರು: ಪದೇ ಪದೇ ಡ್ರಗ್ಸ್ ಕೇಸಲ್ಲಿ ಫಿಟ್: ಪಿಐಟಿ-ಎನ್ಡಿಪಿಎಸ್ ಅಡಿ ಬಂಧನ; ಏನಿದು ಕಾಯ್ದೆ?
ಬೈಕ್‌ಗೆ ಲಾರಿ ಡಿಕ್ಕಿ, ಖಾಸಗಿ ಕಂಪನಿ ಉದ್ಯೋಗಿ ಸಾವು:
ಬೈಕ್‌ಗೆ ಲಾರಿ ಡಿಕ್ಕಿಯಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಸಾವನ್ನಪ್ಪಿರುವ ಘಟನೆ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಲ್ಲಿ ಕೆಲಸ ಹುಡುಕುತ್ತಿರೋ ಯುವಕರೇ ಇವರ ಟಾರ್ಗೆಟ್, ಸರ್ಕಾರಿ ನೌಕರಿ ಹೆಸರಲ್ಲಿ ಕೋಟ್ಯಾಂತರ ವಂಚನೆ!
ಎಚ್‌ಎಎಲ್ ಸಮೀಪದ ನಿವಾಸಿ ಮಹೇಶ್ (32) ಮೃತ ದುರ್ದೈವಿ. ಕೆಲಸ ಮುಗಿಸಿಕೊಂಡು ಡೈರಿ ಸರ್ಕಲ್‌ನಿಂದ ಮಡಿವಾಳ ಕಡೆಗೆ ಬುಧವಾರ ರಾತ್ರಿ 1.30ರ ಸುಮಾರಿಗೆ ಮಹೇಶ್ ತೆರಳುತ್ತಿದ್ದರು. ಆ ವೇಳೆ ಆತನ ಬೈಕ್‌ಗೆ ಲಾರಿ ಡಿಕ್ಕಿಯಾಗಿದೆ. ಆಗ ಕೆಳಗೆ ಬಿದ್ದ ಮಹೇಶ್ ಮೇಲೆ ಲಾರಿ ಚಕ್ರಗಳು ಹರಿದ ಪರಿಣಾಮ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಹೇಶ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನವನಾಗಿದ್ದು, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.