Asianet Suvarna News Asianet Suvarna News

ತನ್ನ ಲೈನ್‌ ಕ್ಲೀಯರ್‌ ಮಾಡಲು ಪ್ರಿಯಕರನ ಎರಡನೇ ಹೆಂಡತಿಯ ಕತ್ತು ಹಿಸುಕಿ ಕೊಂದ ಗೆಳತಿ

Crime News: ತನ್ನ ಸಂಬಂಧವನ್ನು ಸುಗಮಗೊಳಿಸಲು ಮಹಿಳೆ ತನ್ನ ಪ್ರಿಯಕರನ ಎರಡನೇ ಹೆಂಡತಿಯನ್ನು ಕೊಂದಮ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ

Girlfriend strangles lovers second wife to ease their relationship in Madhya Pradesh mnj
Author
Bengaluru, First Published Aug 10, 2022, 6:59 PM IST

ಮಧ್ಯಪ್ರದೇಶ (ಆ. 10): ಮಧ್ಯಪ್ರದೇಶದ ದೇವಾಸ್‌ ಜಿಲ್ಲೆಯಲ್ಲಿ ತನ್ನ ಸಂಬಂಧವನ್ನು ಸುಗಮಗೊಳಿಸಲು ಮಹಿಳೆ ತನ್ನ ಪ್ರಿಯಕರನ ಎರಡನೇ ಹೆಂಡತಿಯನ್ನು ಕೊಂದಿದ್ದಾಳೆ. ಆರೋಪಿ ಮಹಿಳೆಯನ್ನು ರಿತು ಎಂದು ಗುರುತಿಸಲಾಗಿದೆ.  ತನ್ನ ಪ್ರಿಯಕರನ ತೊಂದರೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ ಮತ್ತು ಅವನೊಂದಿಗೆ ಇರಲು ಬಯಸಿದ ಮಹಿಳೆ ಆತನ ಹೆಂಡತಿಯನ್ನು ದಾರಿಯಿಂದ ತೆಗೆದುಹಾಕಲು ನಿರ್ಧರಿಸಿ ಈ ಕೃತ್ಯವೆಸಗಿದ್ದಾಳೆ ಎಂದು ವರದಿಗಳು ತಿಳಿಸಿವೆ.  

ಆರೋಪಿ ಮಹಿಳೆ ತನ್ನ ಸ್ನೇಹಿತನೊಂದಿಗೆ ಸಂತ್ರಸ್ತೆಯ ಬಳಿಗೆ ಹೋಗಿದ್ದಳು. ಬ್ಲೌಸ್ ಹೊಲಿಯುವ ನೆಪದಲ್ಲಿ ಇಬ್ಬರೂ ಆಗಮಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಆರೋಪಿ ಗೆಳತಿ ತನ್ನ ಪ್ರಿಯಕರ ಬಬ್ಲು ಮನೆಗೆ ತೆರಳಿ ಈ ವಿಷಯ ತಿಳಿಸಿದ್ದಾಳೆ.‌ ಯಾರಿಗೂ ಅನುಮಾನ ಬಾರದಿರಲಿ ಎಂದು ಯುವಕ ತನ್ನ ಪತ್ನಿಯ ಶವದೊಂದಿಗೆ ಆಸ್ಪತ್ರೆ ತಲುಪಿ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಹೇಳಿದ್ದಾನೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಹಿಳೆ ಉಸಿರುಗಟ್ಟಿ ಸಾವಿಗೀಡಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಾಧವನ್ನು ಮರೆಮಾಚಲು ತನ್ನ ಹುಚ್ಚು ಗೆಳತಿಗೆ ಸಹಾಯ ಮಾಡಿದ ಆರೋಪಿ ಪ್ರಿಯಕರ ಈಗಾಗಲೇ ಎರಡು ಮದುವೆಯಾಗಿದ್ದ. ಮತ್ತೊಂದೆಡೆ ಆತನ ಗೆಳತಿ ಅಂದರೆ ಆರೋಪಿ ಮಹಿಳೆಯೂ ಮದುವೆಯಾಗಿದ್ದು, 7 ವರ್ಷದ ಬಾಲಕಿಯ ತಾಯಿಯಾಗಿದ್ದಾಳೆ.

ಪತ್ನಿಯನ್ನು ಕೊಂದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ!

ಬಬ್ಲು 14 ವರ್ಷಗಳ ಹಿಂದೆ ನೀಲಂ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಅವಳಿಂದ ಅವನಿಗೆ ಮೂವರು ಮಕ್ಕಳೂ ಇದ್ದಾರೆ. ಇದಾದ ನಂತರವೂ, ಮೂರು ತಿಂಗಳ ಹಿಂದೆ ಮೇ 2022 ರಲ್ಲಿ, ಬಬ್ಲು ದೇವಸ್ಥಾನದಲ್ಲಿ ರಾಣಿ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಈ ವಿಚಾರ ಬಬ್ಲು ಪತ್ನಿ ಹಾಗೂ ಮನೆಯವರಿಗೆ ತಿಳಿದಾಗ ಮನೆಯಲ್ಲಿ ಜಗಳ ಶುರುವಾಗಿತ್ತು. 

ಆದರೆ ಬಬ್ಲುವಿಗೆ ಇಬ್ಬರು ಪತ್ನಿಯರು ಸಂಘ ಸಾಕಾಗಿರಲಿಲ್ಲ. ಆರೋಪಿ ಬಬ್ಲು  6 ವರ್ಷಗಳಿಂದ ರಿತು ಗೌರ್ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇನ್ನು ಇತ್ತ ರಿತುಗು ಮದುವೆಯಾಗಿದ್ದು, 7 ವರ್ಷದ ಮಗಳಿದ್ದಾಳೆ. ರಿತು ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಾಳೆ. 

ದಿನವೂ ರಕ್ತದಲ್ಲೇ ಸ್ನಾನ: 600 ಹೆಣ್ಣುಮಕ್ಕಳನ್ನ ಕೊಂದ ಸಿರಿಯಲ್‌ ಕಿಲ್ಲರ್‌ ಕಹಾನಿ

ಬಬ್ಲು ಕುಟುಂಬ ಈ ಅಂಗಡಿಯಿಂದ ಆಭರಣಗಳನ್ನು ಖರೀದಿಸುತ್ತಿತ್ತು. ಬಬ್ಲು ರಿತು ಮನೆಗೆ ಭೇಟಿ ನೀಡುತ್ತಿದ್ದರು ಮತ್ತು ಇಬ್ಬರ ನಡುವೆ ಸಂಬಂಧ ಬೆಳೆದಿದೆ. ಇನ್ನು ರಾಣಿಯನ್ನು ಮದುವೆಯಾಗಿ ತಪ್ಪು ನಿರ್ಧಾರವನ್ನು ಕೈಗೊಂಡೆ ಎಂದು ಬಬ್ಲು ರಿತುಗೆ ತಿಳಿಸಿದ್ದ. 

ಆದ್ದರಿಂದ ಅವಳು ಅವನ ತಪ್ಪನ್ನು ಸರಿಪಡಿಸಲು ಮತ್ತು ಅವಳನ್ನು ಕೊಲೆ ಮಾಡುವ ಮೂಲಕ ಅವರ ಸಂಬಂಧವನ್ನು ಸುಗಮಗೊಳಿಸಲು ಸಹಾಯ ಮಾಡಲು ನಿರ್ಧರಿಸಿದ್ದಳು. ಸದ್ಯ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios