Asianet Suvarna News Asianet Suvarna News

ಪತ್ನಿಯನ್ನು ಕೊಂದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ!

  • ಪತ್ನಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆಗೈದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ
  • ಕಾರವಾರದ ಮುಂಡಗೋಡದಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಹತ್ಯೆ!
  • ಸದ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಆರೋಪಿ ಬಸವರಾಜು ಮೇಲಿನಮನಿ

 

Crime husband killed his wife and tried to commit suicide in Karwar rav
Author
Bangalore, First Published Aug 3, 2022, 12:34 PM IST

ಕಾರವಾರ (ಆ.3) : ಪತ್ನಿಯ ಕತ್ತು ಕುಯ್ದು ಬರ್ಬರವಾಗಿ ಕೊಂದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ ಪತ್ನಿಯನ್ನು ಕೊಂದ ಪಾಪಿ ಗಂಡ ಬಸವರಾಜ ಮೇಲಿನಮನಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದವನು. ಪತ್ನಿ ಅಕ್ಕಮ್ಮ ಬಸವರಾಜ ಮೇಲಿನಮನಿ(45) ಪಾಳಾ ಗ್ರಾಮ ಪಂಚಾಯತ್ ಸದಸ್ಯೆಯಾಗಿದಳು. ಆಗಾಗ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಅಲ್ಲಿಗೆ ನಿಲ್ಲುತ್ತಿತ್ತು.

ಅವಿಶ್ವಾಸ ಮತ ಚಲಾವಣೆ ವಿಚಾರ ಜಗಳ:

 ಗ್ರಾಮ ಪಂಚಾಯತ್ ಅಧ್ಯಕ್ಷನ ಮೇಲೆ  ಅವಿಶ್ವಾಸ ಮತ ಚಲಾವಣೆ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪ ಆಗಿದೆ. ಮೊದಲಿಗೆ ಸಾಮಾನ್ಯವಾಗಿ ನಡೆದ ಗಲಾಟೆ, ಮಾತಿಗೆ ಮಾತು ಬೆಳೆದು ಹಲ್ಲೆಗೆ ತಿರುಗಿತ್ತು.  ಈ ವಿಚಾರವಾಗಿ ತನಗೆ ವಿರುದ್ಧವಾಗಿ ವರ್ತಿಸಿದ ಪತ್ನಿ ಮೇಲೆ ಕೋಪಗೊಂಡ ಬಸವರಾಜ ಮೇಲಿನಮನಿ ಮಾರಕಾಸ್ತ್ರದಿಂದ ಪತ್ನಿ ಮೇಲೆ ದಾಳಿ ಮಾಡಿದ್ದಾನೆ. ಗಂಡನ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳಾದರೂ ಕುಪಿತಗೊಂಡಿದ್ದ ಪಾತಕಿ ಗಂಡ, ಪತ್ನಿಯ ಕತ್ತನ್ನು ಸೀಳಿಯೇ ಬಿಟ್ಟಿದ್ದಾನೆ.   ಈ ಘಟನೆಯಿಂದ ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಪತ್ನಿಯ ಪ್ರಾಣಪಕ್ಷಿ ಹಾರಿಹೋಗಿದೆ.

Husband Kills Wife : ಬಾ ನಲ್ಲೆ ಮಧುಚಂದ್ರಕೆ..... ಗೋವಾಕ್ಕೆ ಕರೆದುಕೊಂಡು ಹೋಗಿ ಪತ್ನಿ  ಹತ್ಯೆ!

ಪತ್ನಿಯನ್ನು ಕೊಂದು ವಿಷ ಸೇವಿಸಿದ:
ಗ್ರಾಮಪಂಚಾಯತ್ ಅಧ್ಯಕ್ಷನ ಮೇಲೆ ಅವಿಶ್ವಾಸ ಮತ ಹಾಕುವ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯನ್ನು ಕೊಂದ ಬಳಿಕ ಬಸವರಾಜ ಮೇಲಿನಮನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ ತೀವ್ರ ಅಸ್ವಸ್ಥಗೊಂಡ ಆರೋಪಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಇದೀಗ ಆರೋಪಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.

ದಾವಣಗೆರೆ; 'ಕುಡಿಯಲು ಹಣ ಕೊಡಲ್ಲ, ಬುದ್ಧಿ ಹೇಳ್ತಿಯಾ' ಪಾಪಿಯಿಂದ ಪತ್ನಿ ಹತ್ಯೆ!

ಪ್ರಕರಣ ದಾಖಲು:  ಕೊಲೆ ಯಾಕೆ, ಯಾವ ವಿಚಾರಕ್ಕೆ ನಡೆದಿದೆ ಎಂದು ನಿಖರವಾರ ಕಾರಣ ತಿಳಿದುಬಂದಿಲ್ಲ. ಕೊಲೆ ಆರೋಪಿ ಇದೀಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮುಂಡಗೋಡ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಸ್ ದಾಖಲಿಸಿಕೊಂಡಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಘಟನೆಯ ವಿವರ ಪಡೆದುಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ

Follow Us:
Download App:
  • android
  • ios