Asianet Suvarna News Asianet Suvarna News

Crime| ಬಾಯ್‌ ಫ್ರೆಂಡ್‌ಗಾಗಿ ತನ್ನ ಮನೆಯಲ್ಲಿಯೇ ಅರ್ಧ ಕೇಜಿ ಚಿನ್ನಾಭರಣ ಕದ್ದಳು..!

*  ಕೆಲಸ ಪಡೆಯಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಸ್ನೇಹಿತ
*  ತಂದೆಯನ್ನು ನೋಡಿಕೊಳ್ಳುವಾಗ ಪರಿಚಯವಾದ ಆಸ್ಪತ್ರೆ ಕಾವಲುಗಾರ
*  ಆಯೇಷಾಳನ್ನು ವಶಕ್ಕೆ ಪಡೆದ ಪೊಲೀಸರು 
 

Girl Theft Jewellery For Her Boyfriend in Bengaluru grg
Author
Bengaluru, First Published Nov 10, 2021, 9:05 AM IST
  • Facebook
  • Twitter
  • Whatsapp

ಬೆಂಗಳೂರು(ನ.10):  ತನ್ನ ಗೆಳೆಯನ ಮಾತು ಕೇಳಿ ಮನೆಯಲ್ಲಿ ಚಿನ್ನಾಭರಣ ಕಳವು(Theft) ಮಾಡಿದ್ದಾಳೆ ಎಂದು ಆರೋಪಿಸಿ ಮಗಳ ವಿರುದ್ಧ ಭಾರತಿನಗರ ಪೊಲೀಸ್‌ ಠಾಣೆಯಲ್ಲಿ ತಾಯಿಯೊಬ್ಬರು ದೂರು ದಾಖಲಿಸಿದ್ದಾರೆ.

ಭಾರತಿನಗರದ ನಿವಾಸಿ ಆಯೇಷಾ ಆರ್ಶೀನ್‌ ಹಾಗೂ ಆಕೆಯ ಗೆಳೆಯ ಅಮೀನುಲ್‌ ಇಸ್ಲಾಂ ಆರೋಪಿತರಾಗಿದ್ದು, ಆಯೇಷಾ ತಾಯಿ ಫಿರೋಜ ಭಾನು ನೀಡಿದ ದೂರಿನ(Complaint) ಮೇರೆಗೆ ಕಳ್ಳತನ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು(Police), ಆಯೇಷಾಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಗದಗ ಪೊಲೀಸರ ಭರ್ಜರಿ ಬೇಟೆ: 89 ಆರೋಪಿಗಳ ಬಂಧನ

ಗೆಳೆಯನ ಕೆಲಸಕ್ಕೆ ಕಳ್ಳತನ

ಕೆಲ ತಿಂಗಳ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಆಯೇಷಾ ತಂದೆ ಚಿಕಿತ್ಸೆಗೆ ದಾಖಲಾಗಿದ್ದರು. ಆ ವೇಳೆ ತಂದೆ ನೋಡಿಕೊಳ್ಳಲು ಆಸ್ಪತ್ರೆಯಲ್ಲಿದ್ದ ಆಯೇಷಾಳಿಗೆ ಅದೇ ಆಸ್ಪತ್ರೆಯ ಕಾವಲುಗಾರ ಅಮೀನುಲ್‌ ಪರಿಚಯವಾಗಿದೆ. ಬಳಿಕ ಅವರ ಮಧ್ಯೆ ಆತ್ಮೀಯತೆ ಮೂಡಿತು. ಆಗ ನನಗೆ ಒಳ್ಳೆಯ ಕೆಲಸ ಪಡೆಯಲು ಹಣದ ಅವಶ್ಯಕತೆ ಇದೆ. ನಿಮ್ಮ ಮನೆಯಲ್ಲಿರುವ ಚಿನ್ನದ ಒಡವೆ ಕೊಟ್ಟರೆ ನಾನು ಅಡಮಾನವಿಟ್ಟು ಹಣ ಪಡೆಯುತ್ತೇನೆ. ಕೆಲಸ ಸಿಕ್ಕಿದ ಬಳಿಕ ಆಭರಣ ಮರಳಿಸುತ್ತೇನೆ ಎಂದು ಆಯೇಷಾಳಿಗೆ ಅಮೀನುಲ್‌ ಹೇಳಿದ್ದ. ಈ ಮಾತು ನಂಬಿದ ಆಕೆ, ತನ್ನ ಪೋಷಕರಿಗೆ ಗೊತ್ತಾಗದಂತೆ ಮನೆಯಲ್ಲಿ ಒಂದೊಂದೆ ಒಡವೆ ಕದ್ದು ಗೆಳೆಯನಿಗೆ ಕೊಟ್ಟಿದ್ದಳು. ಇತ್ತೀಚಿಗೆ ಬೀರುವಿನಲ್ಲಿಟ್ಟಿದ್ದ ಆಭರಣದ ಬಾಕ್ಸ್‌ ಅನ್ನು ತೆರೆದಾಗ ಬಾನು ಅವರಿಗೆ ಆಭರಣ ಕಳ್ಳತನದ ಬಗ್ಗೆ ಶಂಕೆ ಮೂಡಿದೆ. ಕೂಡಲೇ ಮಕ್ಕಳನ್ನು ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಒಟ್ಟು 430 ಗ್ರಾಂ ಆಭರಣ ಕಳ್ಳತನವಾಗಿದೆ. ಈ ಆಭರಣಗಳನ್ನು ವಿವಿಧ ಚಿನ್ನಾಭರಣ(Jewellery) ಮಾರಾಟ ಮಳಿಗೆಯಲ್ಲಿ ಅಡಮಾನವಿಟ್ಟು ಅಮೀನುಲ್‌ ಹಣ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

5 ಜನ ದರೋಡೆಕಾರರ ಬಂಧನ

ಹರಪನಹಳ್ಳಿ: ವಾಹನಗಳ ಅಡ್ಡಗಟ್ಟಿ ದರೋಡೆ(Robbery) ಮಾಡಲು ಹೊಂಚು ಹಾಕಿದ್ದ ನಾಲ್ವರು ದರೋಡೆಕೋರರನ್ನು ಇಲ್ಲಿಯ ಪೊಲೀಸರು ಇತ್ತೀಚೆಗೆ ತಾಲೂಕಿನ ಅಲಗಿಲವಾಡ ಕ್ರಾಸ್‌ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧಿತರಿಂದ(Arrest) .10 ಲಕ್ಷ ಮೌಲ್ಯದ ವಸ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಇಲಾಖೆ, ಇಂದ್ರ ಮೋಡಿಕಾರ ಅಲಿಯಾಸ್‌ ದುರುಗಪ್ಪ(22), ಚನ್ನದಾಸರ ಭೀಮ ಅಲಿಯಾಸ್‌ ಭೀಮೇಶ(19), ಚಂದ್ರಪ್ಪ ಅಲಿಯಾಸ್‌ ಕುಲ್ಡ(26) ಹಾಗೂ ರಮೇಶ(26) ಬಂಧಿತ ದರೋಡೆಕೋರರು.

ರೌಡಿ ಗುರುವಿನಂತೆ ಫೇಮಸ್‌ ಆಗಲು ಸುಲಿಗೆಗೆ ಇಳಿದಿದ್ದ ಕಳ್ಳ ಶಿಷ್ಯರ ಬಂಧನ..!

ಆರೋಪಿತರು(Accused) ಹಗರಿಬೊಮ್ಮನಹಳ್ಳಿ ಪಟ್ಟಣದ ಕುರದಗಡ್ಡಿಯವರು. ಇವರ ಜತೆ ಇನ್ನೊಬ್ಬ ಸಂಶಯಾಸ್ಪದ ವ್ಯಕ್ತಿ ಮೋರಗೇರಿ ಮೋಡಿಕಾರ ನಾಗರಾಜ ಒಟ್ಟು 5 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಪುನಃ ವಿಚಾರಣೆಗೆ ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈ ತಂಡದವರು ಈ ಹಿಂದೆ ಬೇರೆ ಬೇರೆ ಕಡೆ ದರೋಡೆ, ಕಳ್ಳತನ ಮಾಡಿದ್ದು, ವಿವಿಧ ಪೊಲೀಸ್‌ ಠಾಣೆಗಳಲ್ಲಿ ಇವರ ವಿರುದ್ಧ ದೂರುಗಳು ದಾಖಲಾಗಿದ್ದವು.

ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಾಲ್ಕು ದೂರು, ಹಲುವಾಗಲು ಠಾಣೆಯಲ್ಲಿ, ಹಡಗಲಿ ತಾಲೂಕಿನ ಇಟಗಿ ಠಾಣೆಯಲ್ಲಿ ಹಾಗೂ ಕೂಡ್ಲಿಗಿ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಪೊಲೀಸರು ಸಮಗ್ರ ವಿಚಾರಣೆ ಕೈಗೊಂಡಾಗ 145 ಗ್ರಾಂ ಬಂಗಾರದ ಆಭರಣಗಳು, 1 ಕಿಲೋ 500 ಗ್ರಾಂ ಬೆಳ್ಳಿ ಆಭರಣಗಳು, .76 ಸಾವಿರ ನಗದು, ಕಳ್ಳತನ ಮಾಡಿದ 4 ಮೋಟಾರು ಸೈಕಲ್‌ಗಳು ಒಟ್ಟು .10.50 ಲಕ್ಷದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಹಾಲಮೂರ್ತಿ ರಾವ್‌ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ, ಹರಪನಹಳ್ಳಿ ಪಿಎಸ್‌ಐ ಸಿ. ಪ್ರಕಾಶ್‌, ಹಲುವಾಗಲು ಪಿಎಸ್‌ಐ ಪ್ರಶಾಂತ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ವಿಜಯನಗರ ಜಿಲ್ಲಾ ಎಸ್ಪಿ ಡಾ. ಕೆ. ಅರುಣ ಇಲ್ಲಿಯ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
 

Follow Us:
Download App:
  • android
  • ios