ಕರ್ನಾಟಕದಲ್ಲಿ ಈಗಾಗಲೇ ಹಿಜಾಬ್, ಕೇಸರಿ ಶಾಲು ಸೇರಿದಂತೆ ಹಲವು ಹೋರಾಟಗಳು ನಡೆದಿದೆ. ಇದೀಗ ಬಿಂದಿ ಯುದ್ಧ ಆರಂಭಗೊಂಡಿದೆ. ಶಾಲಾ ವಿದ್ಯಾರ್ಥಿನಿ ಬಿಂದಿ ಇಟ್ಟು ಬಂದ ಕಾರಣಕ್ಕೆ ತೀವ್ರವಾಗಿ ಥಳಿಸಿ ಶಾಲೆಯಿಂದ ಹೊರಹಾಕಿದ ಘಟನೆ ನಡೆದಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಬದುಕು ಅಂತ್ಯಗೊಳಿಸಿದ್ದಾಳೆ.

ಧನಾಬಾದ್(ಜು.12)  ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ ಹಲವು ಬಾರಿಗೆ ಚರ್ಚೆಗೆ ಒಳಪಟ್ಟಿದೆ. ಹಲವು ಅಳಿದು ಹೋಗಿದೆ. ಮತ್ತೆ ಕೆಲವು ಉಳಿದಿದೆ. ಆದರೆ ಸಂಸ್ಕೃತಿ ಮೇಲೆ ನಿರಂತರ ದಾಳಿಗಳು ಆಗತ್ತಿರುವ ಅನ್ನೋ ಆರೋಪಗಳು ಇಂದು ನಿನ್ನೆಯದಲ್ಲ. ಇದೀಗ ಬಿಂದಿ ಸಂಸ್ಕೃತಿಯನ್ನು ಶಾಲಾ ಮಟ್ಟದಿಂದಲೇ ಅಳಿಸಿ ಹಾಕುವ ಪ್ರಯತ್ನವೊಂದು ನಡೆದಿದೆ. ಇದರ ಪರಿಣಾಮ ಮುಗ್ದ ಜೀವವೊಂದು ಬಲಿಯಾಗಿದೆ. ಜಾರ್ಖಂಡ್‌ನ ಧನಾಬಾದ್‌ನ ತೆಲ್ತುರಿ ವಲಯದಲ್ಲಿ ಖಾಸಗಿ ಶಾಲೆಗೆ ವಿದ್ಯಾರ್ಥಿನಿ ಬಿಂದಿ ಇಟ್ಟು ಬಂದಿದ್ದಾಳೆ. ಇದರಿಂದ ಕೆರಳಿದ ಟೀಚರ್ ವಿದ್ಯಾರ್ಥಿನಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬಳಿಕ ಶಾಲೆಯಿಂದ ಹೊರಹಾಕಲಾಗಿದೆ. ತೀವ್ರ ಥಳಿತ ಹಾಗೂ ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಬದುಕೇ ಅಂತ್ಯಗೊಳಿಸಿದ್ದಾರೆ. 

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ತನಿಖೆಗೆ ಆದೇಶಿಸಿದೆ. ಇತ್ತ ಸಮಿತಿಯನ್ನು ಧನಾಬಾದ್‌ಗೆ ಕಳುಹಿಸಿಕೊಟ್ಟಿದೆ. ಇತ್ತ ಜಾರ್ಖಂಡ್ ಮಕ್ಕಳ ಕಲ್ಯಾಣ ಸಮಿತಿ ಈ ಪ್ರಕರಣನ್ನು ಗಂಭೀರವಾಗಿ ಪರಿಗಣಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಟೀಚರ್‌‌ನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಶಾಲೆಗೆ ಸಿಬಿಎಸ್‌ಇ ಬೋರ್ಡ್ ಎಂದು ಮಕ್ಕಳಿಗೆ ಪಾಠ ಕಲಿಸುತ್ತಿದೆ.ಆದರೆ ಸಿಬಿಎಸ್‌ಇ ಅಧಿಕೃತ ಪರವಾನಗೆ ಇಲ್ಲ ಅನ್ನೋದು ಬೆಳಕಿಗೆ ಬಂದಿದೆ.

ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ಬಿಂದಿ ಹಚ್ಚೋದು ಒಳ್ಳೇಯದೇ!

ವಿದ್ಯಾರ್ಥಿನಿ ಶಾಲೆಗೆ ಬಂದಿ ಇಟ್ಟು ತೆರಳಿದ್ದಾಳೆ. ಖಾಸಗಿ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿನಿಗೆ ಬಿಂದಿ ಇಡಲು ಅವಕಾಶ ನೀಡುತ್ತಿಲ್ಲ. ಬಿಂದಿಗೆ ಅವಕಾಶವಿಲ್ಲ ಅನ್ನೋದನ್ನು ಶಾಲಾ ಆಡಳಿತ ಮಂಡಳಿ ಅಧಿಕೃತವಾಗಿ ಹೇಳಿಲ್ಲ. ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಆದರೆ ಶಾಲಾ ಶಿಕ್ಷಕರು, ಸಿಬ್ಬಂದಿಗಳ ಮೂಲಕ ವಿದ್ಯಾರ್ಥಿನಿಯರನ್ನು ತಮ್ಮ ಆದೇಶ ಪಾಲನೆ ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಥಿನಿ ಎಂದಿನಂತೆ ಬಿಂದಿ ಇಟ್ಟು ಶಾಲೆಗೆ ಆಗಮಿಸಿದ್ದಾಳೆ. ಬಿಂದಿ ನೋಡಿ ಕೆರಳಿದ ಟೀಚರ್ ಇದನ್ನು ಪ್ರಶ್ನಿಸಿದ್ದಾರೆ. ಇತ್ತ ವಿದ್ಯಾರ್ಥಿನಿ ಟೀಚರ್ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದೇ ನಿಂತಿದ್ದಾಳೆ. ಇದು ಟೀಚರ್ ಪಿತ್ತ ಮತ್ತಷ್ಟು ನೆತ್ತಿಗೇರಿಸಿದೆ. ಬಿಂದಿ ಇಟ್ಟು ಬಂದಿರುವ ಕಾರಣಕ್ಕೆ ಟೀಚರ್ ತೀವ್ರವಾಗಿ ವಿದ್ಯಾರ್ಥಿನಿಯನ್ನು ಥಳಿಸಿದ್ದಾರೆ. ಇತರ ವಿದ್ಯಾರ್ಥಿಗಳ ಮುಂದೆ ಈ ಘಟನೆ ನಡೆದಿದೆ. 

ಮಕ್ಕಳಿಗೆ ಕಾರ್ಟೂನ್‌ ಚಿತ್ರ ಪ್ರದರ್ಶನ ವೇಳೆ ಅಶ್ಲೀಲ ಫೋಟೋ ತೋರಿಸಿದ ಥಿಯೇಟರ್‌ ಸಿಬ್ಬಂದಿ!

ವಿದ್ಯಾರ್ಥಿನಿಯನ್ನು ಥಳಿಸಿ ದಿನವಿಡಿ ಶಾಲೆಯ ಹೊರಗಡೆ ನಿಲ್ಲುವ ಶಿಕ್ಷೆ ವಿಧಿಸಲಾಗಿದೆ. ಈ ಘಟನೆಯಿಂದ ವಿದ್ಯಾರ್ಥಿನಿ ತೀವ್ರವಾಗಿ ನೊಂದಿದ್ದಾಳೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಕುಗ್ಗಿದ್ದಾಳೆ. ಅಂದು ಸಂಜೆ ಶಾಲೆಯಿಂದ ಮರಳಿದ ವಿದ್ಯಾರ್ಥಿನಿ ಬದುಕನ್ನೇ ಅಂತ್ಯಗೊಳಿಸಿದ್ದಾಳೆ. ಈ ಘಟನೆಯಿಂದ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಕುಟುಂಬಸ್ಥರು, ಸ್ಥಳೀಯರು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಶಾಲಾ ಮಾನ್ಯತೆ ರದ್ದು ಮಾಡುವಂತೆ ಕೋರಿದ್ದಾರೆ. ನಮ್ಮ ಮಗಳಿಗೆ ಆದಂತೆ ಇತರ ಮಕ್ಕಳಿಗೆ ಆಗಬಾರದು. ಹೀಗಾಗಿ ಶಾಲಾ ಮಾನ್ಯತೆ ರದ್ದು ಮಾಡಿ, ಈ ಮಕ್ಕಳನ್ನು ಇತರ ಶಾಲೆಗೆ ಸೇರಿಸಲು ಅವಕಾಶ ಮಾಡಿಕೊಡಿ ಎಂದು ಮೃತಳ ಪೋಷಕರು ಆಗ್ರಹಿಸಿದ್ದಾರೆ. ಪೊಲೀಸರು ಟೀಚರ್‌ನ ಬಂಧಿಸಲಾಗಿದೆ. ಇತ್ತ ಆಡಳಿತ ಮಂಡಳಿ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ.