ಐರ್ಲೆಂಡ್‌ನ ಲಂಡನ್‌ಡೆರ್ರಿಯಲ್ಲಿ ಮಕ್ಕಳಿಗೆ ಸೂಪರ್‌ ಮ್ಯಾರಿಯೋ ಬ್ರೋಸ್‌ನ ಸಿನಿಮಾವೊಂದನ್ನು ಪ್ರದರ್ಶಿಸುವ ವೇಳೆ ಅಶ್ಲೀಲ ಫೋಟೋವೊಂದನ್ನು ಪ್ರದರ್ಶಿಸಲಾಗಿದೆ.

ಐರ್ಲೆಂಡ್‌ (ಜುಲೈ 9, 2023): ಮಕ್ಕಳಿದ್ದಾಗ ಸೂಪರ್‌ ಮ್ಯಾರಿಯೋ ಕಾರ್ಟೂನ್‌ ಸಿನಿಮಾ ಅನ್ನು ನೀವು ನೋಡಿರ್ಬೋದು. ಇಲ್ಲದಿದ್ದರೆ, ವಿಡಿಯೋ ಗೇಮ್‌ನಲ್ಲಿ ಈ ಗೇಮ್‌ ಅನ್ನು ಆಡಿರಬಹುದು. 80, 90ರ ದಶಕದ ಮಕ್ಕಳಿಗಂತೂ ಸೂಪರ್‌ ಮ್ಯಾರಿಯೋ ಬಗ್ಗೆ ಗೊತ್ತಿರುತ್ತೆ. ಇನ್ನು, ಇತ್ತೀಚೆಗೆ ಶಾಲಾ ಮಕ್ಕಳಿಗೆ ಸೂಪರ್‌ ಮ್ಯಾರಿಯೋ ಬ್ರದರ್ಸ್‌ ಸಿನಿಮಾವನ್ನು ತೋರಿಸಲಾಯ್ತು. ಇಂತಹ ಸಮಯದಲ್ಲಿ ಮಹಿಳೆಯೊಬ್ಬರ ಅಶ್ಲೀಲ ಫೋಟೋವನ್ನು ಕೆಲ ಕಾಲ ತೋರಿಸಲಾಗಿದೆ. ಈ ಸಂಬಂಧ ಪೊಲೀಸರು ಸಹ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಐರ್ಲೆಂಡ್‌ನ ಲಂಡನ್‌ಡೆರ್ರಿಯಲ್ಲಿ ಮಕ್ಕಳಿಗೆ ಸೂಪರ್‌ ಮ್ಯಾರಿಯೋ ಬ್ರೋಸ್‌ನ ಸಿನಿಮಾವೊಂದನ್ನು ಪ್ರದರ್ಶಿಸುವ ವೇಳೆ ಅಶ್ಲೀಲ ಫೋಟೋವೊಂದನ್ನು ಪ್ರದರ್ಶಿಸಲಾಗಿದೆ. ಶುಕ್ರವಾರ ವಾಟರ್‌ಸೈಡ್‌ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ. ಉತ್ತರ ಐರ್ಲೆಂಡ್‌ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನು ಓದಿ: ನಿಮ್ಮ ಫೋನ್‌ಗೆ ಬಂದ OTP ಪಾಕ್‌ಗೆ ಶೇರ್‌ ಆಗ್ಬೋದು ಎಚ್ಚರ: ಎನ್‌ಐಎ, ಎಟಿಎಸ್‌ ತನಿಖೆ

 ಪ್ರೈಮರಿ ಶಾಲೆಯ ಮಕ್ಕಳು ಈ ಸಿನಿಮಾ ವೀಕ್ಷಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಅಶ್ಲೀಲ ಫೋಟೋವನ್ನು ಕೆಲ ಸಮಯದ ಕಾಲ ಬೆಳ್ಳಿ ಪರದೆ ಮೇಲೆ ಪ್ರದರ್ಶನವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಥಿಯೇಟರ್‌ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದು, ಇದು ದುರದೃಷ್ಟಕರ ಆದರೆ ಗಂಭೀರವಾದದ್ದು ಎಂದು ಹೇಳಿಕೊಂಡಿದ್ದಾರೆ. 

ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಥಿಯೇಟರ್‌ ಸಿಬ್ಬಂದಿ, ವಾಟರ್‌ಸೈಡ್‌ ಥಿಯೇಟರ್‌ಗೆ ಇಂದು (ಶುಕ್ರವಾರ) ನಡೆದ ದುರದೃಷ್ಟಕರ ಹಾಗೂ ಗಂಭೀರವಾದ ಘಟನೆ ಬಗ್ಗೆ ಅರಿವಿದೆ. ನಮ್ಮ ಥಿಯೇಟರ್‌ಗೆ ಭೇಟಿ ನೀಡುವ ಜನರ ಹಿತ ಕಾಪಾಡುವುದು ನಮ್ಮ ಪ್ರಮುಖವಾದ ಮುಖ್ಯ ಕಾಳಜಿಯಾಗಿದೆ. ಈ ಸಂಬಂಧ ನಾವು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಇದರಿಂದ ತೊಂದರೆಗೀಡಾದ ಎಲ್ಲರಿಗೂ ನಾವು ಕ್ಷಮೆ ಕೋರುತ್ತೇವೆ’’ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ವಾಟ್ಸಾಪ್‌ ಕಾಲ್‌ನಲ್ಲಿ ಬೆತ್ತಲಾದ 78 ವರ್ಷದ ವೃದ್ಧ: ಮುತ್ತಿನ ನಗರಿಯಲ್ಲಿ ಸೈಬರ್‌ ವಂಚಕರಿಂದ 23 ಲಕ್ಷ ರೂ. ಪಂಗನಾಮ

ಬಳಿಕ ಆಯೋಜಕ ಮಂಡಳಿ ಈ ಘಟನೆ ಬಗ್ಗೆ ಥಿಯೇಟರ್‌ನಲ್ಲಿದ್ದ ಮಕ್ಕಳ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ಉತ್ತರ ಐರ್ಲೆಂಡ್‌ನ ಪೊಲೀಸ್‌ ಸರ್ವೀಸ್‌ಗೂ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಬಿಬಿಸಿಗೆ ಮಾಹಿತಿ ನೀಡಿದ ಪೊಲೀಸ್‌ ವಕ್ತಾರ, ಈ ಬಗ್ಗೆ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಮತ್ತು ಈ ತನಿಖೆಗೆ ಸಹಾಯ ಮಾಡಲು ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸರನ್ನು ಭೇಟಿ ಮಾಡಿ ಎಂದು ನಾವು ಕೇಳುತ್ತೇವೆ’’ ಎಂದೂ ಹೇಳಿದ್ದಾರೆ. 

ಇನ್ನು, ಡಿಯುಪಿ ಅಸೆಂಬ್ಲಿ ಸದಸ್ಯ ಗ್ಯಾರಿ ಮಿಡಲ್‌ಟನ್‌ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ‘’ಇಂತಹ ಘಟನೆ ನಡೆದಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಯಾವ ಡಿವೈಸ್‌ ಅನ್ನು ಬಳಸಿ ಮಕ್ಕಳಿಗೆ ಸಿನಿಮಾ ತೋರಿಸಲಾಗಿದೆ ಎಂಬುದನ್ನು ಪತ್ತೆಹಚ್ಚಬೇಕು’’ ಎಂದೂ ಹೇಳಿದ್ದಾರೆ. ಅಲ್ಲದೆ, ಪೋಷಕರು ಹಾಗೂ ಇದಕ್ಕೆ ಸಂಬಂಧಪಟ್ಟವರಿಗೆ ಈ ಬಗ್ಗೆ ಮಾಹಿತಿ ನೀಡುವುದು ಮುಖ್ಯ’’ ಎಂದೂ ಅವರು ಹೇಳಿದ್ದಾರೆ. 

ಇದನ್ನೂ ಓದಿ: ಸಂಸದನ ವಿರುದ್ಧ ಟ್ವೀಟ್‌: ಬಿಜೆಪಿ ರಾಜ್ಯ ಕಾರ್ಯದರ್ಶಿ ಬಂಧಿಸಿದ ಸೈಬರ್‌ ಕ್ರೈಂ ಪೊಲೀಸರು

ಇನ್ನೊಂದೆಡೆ, ಈ ಬಗ್ಗೆ ಬಿಬಿಸಿಗೆ ಮಾಹಿತಿ ನೀಡಿದ ಡೆರ್ರಿ ಹಾಗೂ ಸ್ಟ್ರಬೇನ್‌ ಡಿಸ್ಟ್ರಿಕ್ಟ್‌ ಕೌನ್ಸಿಲ್‌ನ ಎಸ್‌ಡಿಎಲ್‌ಪಿ ಕೌನ್ಸಿಲ್ಲರ್‌ ಸೀನ್‌ ಮೂನಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘’ಇದು ದುರದೃಷ್ಟಕರ ವಿಚಾರ ಹಾಗೂ ಈ ಘಟನೆ ನಡೆದಿದ್ದು ಕೂಡ ದುರದೃಷ್ಟಕರ’’ ಎಂದೂ ಹೇಳಿದ್ದಾರೆ. ಹಾಗೂ, ಮಕ್ಕಳು ಇಂತಹ ಅನುಚಿತವಾದದ್ದನ್ನು ನೋಡುವುದು ಸರಿಯಲ್ಲ. ಆದರೂ, ಈ ತನಿಖೆ ಬಾಕಿ ಇದೆ’’ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಹರ್ಷದ್‌ ಮೆಹ್ತಾನಂತೆ ವಂಚನೆ: 3 ತಿಂಗಳಲ್ಲಿ 4,672 ಕೋಟಿ ರೂ. ಅಕ್ರಮ ಷೇರು ವಹಿವಾಟು ಮಾಡಿದ ಸ್ಟಾಕ್‌ ಬ್ರೋಕರ್!