Asianet Suvarna News Asianet Suvarna News

Bengaluru: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

*   ಆತ್ಮಹತ್ಯೆ ಅಥವಾ ಆಯತಪ್ಪಿ ಬಿದ್ದಿರುವ ಬಗ್ಗೆ ಪೊಲೀಸರಿಂದ ತನಿಖೆ
*   ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ
*   ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೈಷ್ಣವಿ
 

Girl Dies Falling from the 12th Floor of the Apartment in Bengaluru grg
Author
Bengaluru, First Published Dec 6, 2021, 9:13 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.06):  ವಿದ್ಯಾರ್ಥಿಯೊಬ್ಬಳು(Student) ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ(Death) ಘಟನೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೇಣುಗೋಪಾಲನಗರದ ನಿತೀಶ್‌ ಪಾರ್ಕ್ ಅಪಾರ್ಟ್‌ಮೆಂಟ್‌ ನಿವಾಸಿ ವೈಷ್ಣವಿ(13) ಮೃತ ದುರ್ದೈವಿ. ರಾತ್ರಿ 10.30ರ ಸುಮಾರಿಗೆ ಕುಟುಂಬದ ಸದಸ್ಯರೊಂದಿಗೆ ಊಟ ಮುಗಿಸಿ ಬಾಲ್ಕನಿಯಲ್ಲಿ(Balcony) ಅಡ್ಡಾಡುತ್ತಿದ್ದ ವೈಷ್ಣವಿ ಏಕಾಏಕಿ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆಯೋ(Suicide) ಅಥವಾ ಆಯತಪ್ಪಿ ಬಿದ್ದಳೋ ಎಂಬುದರ ಬಗ್ಗೆ ಹೆಚ್ಚಿನ ತನಿಖೆಯಿಂದ(Investigation) ತಿಳಿದು ಬರಲಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಉತ್ತರ ಪ್ರದೇಶದ(Uttar Pradesh) ಮೂಲದ ವೀರೇಂದ್ರ ಕುಮಾರ್‌ ಹಾಗೂ ಸುಮನ್‌ ದಂಪತಿ ಕಳೆದ 20 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಸಿವಿಲ್‌ ಗುತ್ತಿಗೆದಾರರಾಗಿರುವ ವೀರೇಂದ್ರ ಕುಮಾರ್‌ ದಂಪತಿಗೆ ಪುತ್ರಿ ವೈಷ್ಣವಿ ಹಾಗೂ ಇಬ್ಬರು ಪುತ್ರರಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೈಷ್ಣವಿ, ರಾತ್ರಿ ಕುಟುಂಬದ ಸದಸ್ಯರೊಂದಿಗೆ ಕುಳಿತು ಊಟ ಮಾಡಿದ್ದಾಳೆ. ಬಳಿಕ ವಾಷ್‌ ರೂಮ್‌ಗೆ ಹೋಗಿ ಬಂದು ಬಾಲ್ಕನಿಯಲ್ಲಿ ವಾಕ್‌ ಮಾಡುತ್ತಿದ್ದಳು. ಈ ವೇಳೆ ಮನೆಯವರು ಹಾಲ್‌ನಲ್ಲಿ ಕುಳಿತಿದ್ದರು.

ಆಟ ಆಡುವಾಗ ವಿದ್ಯುತ್‌ ಶಾಕ್‌: 12ರ ಬಾಲಕನ ದಾರುಣ ಸಾವು

ಈ ಸಂದರ್ಭದಲ್ಲಿ ಏನೋ ಬಿದ್ದ ಶಬ್ದವಾಗಿದೆ. ಆಗ ವೀರೇಂದ್ರ ಕುಮಾರ್‌ ಅವರು ಬಾಲ್ಕನಿಯತ್ತ ಬಂದು ನೋಡಿದಾಗ ವೈಷ್ಣವಿ ಕೆಳಗೆ ಬಿದ್ದಿರುವುದು ತಿಳಿದು ಬಂದಿದೆ. ತಕ್ಷಣ ಓಡಿಹೋಗಿ ನೋಡಿದಾಗ ವೈಷ್ಣವಿ ತಲೆಗೆ ತೀವ್ರಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಮೃತದೇಹವನ್ನು(Deadbody) ಮರಣೋತ್ತರ ಪರೀಕ್ಷೆ(Postmortem) ನಡೆಸಿ ಕುಟುಂಬಕ್ಕೆ ಒಪ್ಪಿಸಲಾಗಿದೆ. ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಪುಣ್ಯಸ್ನಾನ ವೇಳೆ ನದಿಗೆ ಬಿದ್ದು ಬಾಲಕಿ ಸಾವು

ನಂಜನಗೂಡು(Nanjangud): ಶ್ರೀಕಂಠೇಶ್ವರಸ್ವಾಮಿ ಕಪಿಲ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುವ ವೇಳೆ ಆಯತಪ್ಪಿ ನದಿಗೆ ಬಿದ್ದು ಬಾಲಕಿ(Girl) ಮೃತಪಟ್ಟ ಘಟನೆ ನ.24ರಂದು ನಡೆದಿತ್ತು. ಮಂಡ್ಯ(Mandya) ಜಿಲ್ಲೆ ಕೆ.ಆರ್‌. ಪೇಟೆ ತಾಲೂಕು ಕುರುಬಹಳ್ಳಿಯ ಪ್ರಕಾಶ್‌ ಹಾಗೂ ಆಶಾರಾಣಿ ದಂಪತಿ ಪುತ್ರಿ ಯೋಗೇಶ್ವರಿ(13) ಮೃತಳು.

ಪೋಷಕರೇ ಎಚ್ಚರ: 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು..!

ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ಆಗಮಿಸಿದ್ದ ಪ್ರಕಾಶ್‌ ಕುಟುಂಬ ದರ್ಶನಕ್ಕೂ ಮುನ್ನ ಉರುಳು ಸೇವೆ ಮಾಡಿ ಕಪಿಲ ನದಿಯ(Kapila River) ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಲು ಮುಂದಾಗಿದ್ದಾರೆ. ಯೋಗೇಶ್ವರಿ ಮುಖ ಹಾಗೂ ತಲೆಗೆ ಸೋಪಿನಿಂದ ಉಜ್ಜಿ ನೊರೆ ಆವರಿಸಿದ್ದರಿಂದ ಕಣ್ಣುಮುಚ್ಚಿಕೊಂಡು ನದಿ ನೀರಿನಿಂದ ತೊಳೆದುಕೊಳ್ಳಲು ಮುಂದಾದಾಗ ಸ್ನಾನಘಟ್ಟದ ಮೆಟ್ಟಿಲಿನಿಂದ ನದಿಗೆ ಜಾರಿ ಬಿದ್ದಿದ್ದಳು. ನದಿಗೆ ಬಿದ್ದ ಆಕೆಯನ್ನು ತಕ್ಷಣದಲ್ಲಿ ಯಾರೂ ಗಮನಿಸಿಲ್ಲ ಎನ್ನಲಾಗಿದ್ದು ಇದರಿಂದ ಆಕೆ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು. ಮೃತದೇಹವನ್ನು ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂಬಂಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ವಿದ್ಯುತ್‌ ತಂತಿ ತಗುಲಿ ಬಾಲಕ ಸಾವು

ಗುತ್ತಲ: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ಹಾವೇರಿ(Haveri) ತಾಲೂಕಿನ ಗುತ್ತಲ ಸಮೀಪದ ಯಲಗಚ್ಚ ಗ್ರಾಮದಲ್ಲಿ ನ.26 ರಂದು ಸಂಭವಿಸಿತ್ತು.

ಯಲಗಚ್ಚ ಗ್ರಾಮದ ಚೇತನ್‌ ಶೇಖಪ್ಪ ಕಂಬಳಿ (14) ಬಾಲಕ ಮೃತಪಟ್ಟಿದ್ದ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಆಟವಾಡುವಾಗ ಆಕಸ್ಮಿಕವಾಗಿ ವಿದ್ಯುತ್‌ ತಂತಿ ಕೈಗೆ ತಗುಲಿ ಮೃತಪಟ್ಟಿದ್ದ. ಘಟನೆಗೆ ಸಂಬಂಧಿಸಿದಂತೆ ಖಾಸಗಿ ಗುತ್ತಿಗೆದಾರ ಮುಖೇಶ ಮುಂದಿನಮನಿ ಹಾಗೂ ಹೆಸ್ಕಾಂ ಅಧಿಕಾರಿಗಳ ನಿಷ್ಕಾಳಜಿಯಿಂದ ಬಾಲಕ ಸಾವಿಗೀಡಾಗಿದ್ದನು ಎಂದು ಮೃತನ ಪೋಷಕರು ದೂರಿದ್ದರು. ಘಟನಾ ಸ್ಥಳಕ್ಕೆ ಪಿಎಸ್‌ಐ ಜಗದೀಶ.ಜಿ ಭೇಟಿ ನೀಡಿದ್ದು, ಈ ಕುರಿತಂತೆ ಗುತ್ತಲ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 

Follow Us:
Download App:
  • android
  • ios