Asianet Suvarna News Asianet Suvarna News

ಆಟ ಆಡುವಾಗ ವಿದ್ಯುತ್‌ ಶಾಕ್‌: 12ರ ಬಾಲಕನ ದಾರುಣ ಸಾವು

*  ವಿದ್ಯಾರಣ್ಯಪುರ ಸಮೀಪದ ಮೈದಾನದಲ್ಲಿ ದುರ್ಘಟನೆ
*  ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ 
*  ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 

12 Year Old Boy Dies due to Electrocution in Bengaluru grg
Author
Bengaluru, First Published Nov 2, 2021, 11:52 AM IST
  • Facebook
  • Twitter
  • Whatsapp

ಬೆಂಗಳೂರು(ನ.02):  ತನ್ನ ಸ್ನೇಹಿತರ(Friends) ಜತೆ ಆಟವಾಡುವಾಗ ಆಕಸ್ಮಿಕವಾಗಿ ವಿದ್ಯುತ್‌(Electricity) ಪ್ರವಹಿಸಿ 12 ವರ್ಷದ ಬಾಲಕನೊಬ್ಬ(Boy) ಸಾವನ್ನಪ್ಪಿರುವ(Death) ಘಟನೆ ವಿದ್ಯಾರಣ್ಯಪುರ ಸಮೀಪದ ರಾಮಚಂದ್ರಾಪುರ ಮೈದಾನದಲ್ಲಿ ಸೋಮವಾರ ನಡೆದಿದೆ.

ರಾಮಚಂದ್ರಾಪುರದ ನಿವಾಸಿ ಬಾಬು ದಂಪತಿ ಪುತ್ರ ಮಣಿ (12) ಮೃತ ದುರ್ದೈವಿ. ಮನೆ ಸಮೀಪದ ಮೈದಾನದಲ್ಲಿ ಗೆಳೆಯರ ಜತೆ ಸಂಜೆ 4.30ರಲ್ಲಿ ಮಣಿ ಆಟವಾಡುತ್ತಿದ್ದ(Play). ಆ ವೇಳೆ ಮೈದಾನಕ್ಕೆ ಹೊಂದಿಕೊಂಡಂತಿರುವ ಹಳೇ ಕಟ್ಟಡದ ಗ್ರೀಲ್‌ ಬಳಿ ಚೆಂಡು ತೆಗೆದುಕೊಂಡು ಬರಲು ಆತ ಹೋದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು(Police) ಹೇಳಿದ್ದಾರೆ.

ಆಂಧ್ರಪ್ರದೇಶ(Andhra Pradesh) ಮೂಲದ ಬಾಬು, ತಮ್ಮ ಪತ್ನಿ ಮತ್ತು ಮೂವರ ಮಕ್ಕಳ ಜತೆ ರಾಮಚಂದ್ರಾಪುರದಲ್ಲಿ ನೆಲೆಸಿದ್ದಾರೆ. ಶಾಲೆಗೆ(School) ರಜೆ(Vaccation) ಹಿನ್ನೆಲೆಯಲ್ಲಿ ತನ್ನ ಗೆಳೆಯರ ಜತೆ ಮನೆ ಹತ್ತಿರದ ಮೈದಾನಕ್ಕೆ ಆಟವಾಡಲು ಮಣಿ ತೆರಳಿದ್ದ. ಆ ಮೈದಾನ(Ground) ಸಮೀಪ ಹಳೇ ಕಟ್ಟಡದಲ್ಲಿ ಶೌಚಾಲಯದ ದುರಸ್ತಿ ಕಾಮಗಾರಿ ನಡೆದಿದೆ. ಕಟ್ಟಡದ ಗ್ರೀಲ್‌ಗೆ ವಿದ್ಯುತ್‌ ತಂತಿ ತಾಕಿತ್ತು. ಆದರೆ ಇದರ ಅರಿವಿಲ್ಲದ ಮಣಿ, ಬಿದ್ದ ಚೆಂಡನ್ನು ತೆಗೆದುಕೊಂಡು ಬರಲು ಹೋದಾಗ ಆಕಸ್ಮಿಕವಾಗಿ ಗ್ರೀಲ್‌ ಮುಟ್ಟಿದ್ದಾನೆ. ಆಗ ಆತನಿಗೆ ವಿದ್ಯುತ್‌ ಪ್ರವಹಿಸಿದೆ. ಕೂಡಲೇ ಸ್ಥಳೀಯರು ಬಾಲಕನ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಳಗಾವಿ: ವಿದ್ಯುತ್‌ ಅವಘಡಕ್ಕೆ ಅಜ್ಜಿ-ಮೊಮ್ಮಗ ಸಾವು

ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಸ್ಥಳೀಯರ ಪ್ರತಿಭಟನೆ

ಬಾಲಕ ಸಾವಿನಿಂದ ರೊಚ್ಚಿಗೆದ್ದ ಸಾರ್ವಜನಿಕರು, ರಾಮಚಂದಾಪುರದಲ್ಲಿ ರಸ್ತೆ ತಡೆದು ನಡೆಸಿ ಬೆಸ್ಕಾಂ(BESCOM)ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಗ್ಗೆ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಪೊಲೀಸರು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸಿದ ಪರಿಣಾಮ ಸಾರ್ವಜನಿಕರು ಪ್ರತಿಭಟನೆ(Protest) ಹಿಂಪಡೆದರು.

ನೀರು ಪಾಲಾಗಿದ್ದವನ ಹುಡುಕಲು ಹೋದ ಮೂವರು ವಿದ್ಯುತ್‌ಗೆ ಬಲಿ

ಕೃಷ್ಣಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹವನ್ನು ಹುಡುಕಲು ಹೋಗಿದ್ದ ಮೂವರು ವಿದ್ಯುತ್ ತಾಗಿ(Electrocution) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಾಗಲಕೋಟೆ(Bagalkot) ಜಿಲ್ಲೆಯ ಹುನಗುಂದ(Hunagund) ತಾಲೂಕಿನ ದನ್ನೂರ ಗ್ರಾಮದ ಬಳಿ ಕಳೆದ ತಿಂಗಳ ಅ.8 ರಂದು ನಡೆದಿತ್ತು. .

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಾರನಾಳ ಗ್ರಾಮದ ಶಿವಪ್ಪ ಅಮಲೂರ (70) ಎಂಬ ವ್ಯಕ್ತಿ ಕಳೆದ ಮೂರು ದಿನಗಳ ಹಿಂದೆ ಧನ್ನೂರ ಬಳಿಯ ಕೃಷ್ಣ ಮತ್ತು ಮಲಪ್ರಭೆ ನದಿಗೆ(River) ಹಾರಿದ್ದನು. ತಂದೆಯ ಶವವನ್ನು ಹುಡಕಲು ಕೂಡಲಸಂಗಮದಲ್ಲಿನ ಬೋಟ್(Boat) ತೆಗೆದುಕೊಂಡು ಮಗ ಯಮನಪ್ಪ ಅಳಿಯ ಶರಣಗೌಡ ಹಾಗೂ ಬೋಟ್ ಆಪರೇಟರ್ ಪರಶುರಾಮ ಸೇರಿದಂತೆ 10 ಜನರು ಸೇರಿಕೊಂಡು ಶವ ಪತ್ತೆ ಹಚ್ಚಲು ನದಿಗೆ ಇಳಿದಿದ್ದು ನದಿಯ ಮಧ್ಯಕ್ಕೆ ಹೋಗುತ್ತಿದ್ದಂತೆ ನದಿಯ ಮಧ್ಯದಲ್ಲಿರುವ ಕಬ್ಬಿಣದ ವಿದ್ಯುತ್ ಕಂಬಕ್ಕೆ ಬೋಟ್ ತಗುಲಿ ಶಾಟ್ ಸರ್ಕ್ಯೂಟಾಗಿ ಮೂವರು ಸಾವನ್ನಪ್ಪಿದ್ದರು. 
 

Follow Us:
Download App:
  • android
  • ios