ಟ್ರೈನ್ ಮೂಲಕ ಬೆಂಗಳೂರಿಗೆ ಗಾಂಜಾ ತೆಗೆದುಕೊಂಡು ಬರುತ್ತಿದ್ದ ಐವರು ಆರೋಪಿಗಳನ್ನು  ಕೆಜಿ ನಗರ ಪೊಲೀಸರು ಬಂಧಸಿದ್ದಾರೆ.  ಇನ್ನೊಂದೆಡೆ ಜಯನಗರ ಪೊಲೀಸರಿಂದಲೂ ಗಾಂಜಾ ಮಾರಾಟ ಮಾಡ್ತಿದ್ದವರ ಬಂಧನವಾಗಿದೆ.

ಬೆಂಗಳೂರು (ಸೆ.13): ಟ್ರೈನ್ ಮೂಲಕ ಬೆಂಗಳೂರಿಗೆ ಗಾಂಜಾ ತೆಗೆದುಕೊಂಡು ಬರುತ್ತಿದ್ದ ಐವರು ಆರೋಪಿಗಳನ್ನು ಕೆಜಿ ನಗರ ಪೊಲೀಸರು ಬಂಧಸಿದ್ದಾರೆ. ಬಂಧಿತರನ್ನು ನವಾಜ್ ಪಾಷಾ, ನೂರ್ ಅಹಮ್ಮದ್, ಶ್ರೀಮತಿ ಮುಬಾರಕ್, ಇಮ್ರಾನ್ ಪಾಷಾ, ಕಿರಣ್ @ ಬಂಗಾರಪ್ಪ ಎಂದು ಗುರುತಿಸಲಾಗಿದೆ. ಬಂಧಿತರಿಂದ 2 ಕೋಟಿ ರೂ ಮೌಲ್ಯದ 506 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಕೆಜಿ ನಗರದ ಕೆಂಪಾಂಬುದಿ‌ ಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದು ಆರೋಪಿಗಳನ್ನ ಬಂಧಿಸಿ 66 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಕೆಂಗೇರಿಯ ಮನೆಯೊಂದರಲ್ಲಿ ಗಾಂಜಾ ಇಟ್ಟಿರೋದು ಖಚಿತವಾಗಿತ್ತು. ದಾಳಿ ನಡೆಸಿ 440 ಕೆಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿತ್ತು. ಬಂಧಿತರು ಭುವನೇಶ್ವರ್ ನಿಂದ ರೈಲಿನ ಮೂಲಕ ಗಾಂಜಾ ಸರಬರಾಜು ಮಾಡ್ತಿದ್ರು. 10-20 ಕೆಜಿಯ ಬ್ಯಾಗನ್ನ ಟ್ರೈನ್ ಸೀಟಿ ನಡಿಯಲ್ಲಿಟ್ಟು ಕಳುಹಿಸುತ್ತಿದ್ದರು. ಒರಿಸ್ಸಾ ಮೂಲದ ವ್ಯಕ್ತಿಯೊಬ್ಬನನ್ನ ಟ್ರೈನ್ ನಲ್ಲೇ ಕೂರಿಸಿ ವಾಚ್ ಮಾಡಿಸ್ತಿದ್ರು. ನಂತರ ಟ್ರೈನ್ ಕೆಆರ್ ಪುರಂ ಬಳಿ ಬರ್ತಿದ್ದಂತೆ ಗಾಂಜಾ ಇಳಿಸಿಕೊಳ್ತಿದ್ರು. ಸದ್ಯ ಆರೋಪಿಗಳನ್ನ ಬಂಧಿಸಿ ಕೆಜಿ ಇನ್ಸ್ ಪೆಕ್ಟರ್ ರಕ್ಷಿತ್ ಹಾಗೂ ತಂಡ‌ ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.

ಜಯನಗರ ಪೊಲೀಸರಿಂದಲೂ ಗಾಂಜಾ ಮಾರಾಟ ಮಾಡ್ತಿದ್ದವರ ಬಂಧನ
ಬೆಂಗಳೂರು ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಹಶೀಷ್ ಆಯಿಲ್ , ನಯಾಜ್ ಪಾಷಾ,ಸಾಗರ್ ಸಾಹೋ, ಶೇಷಗಿರಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ಆರೋಪಿ ನಯಾಜ್ ಪಾಷಾ ಬಂಧನಕ್ಕೊಳಗಾಗಿದ್ದ. ಈತ ವಿಚಾರಣೆ ವೇಳೆ ಗಾಂಜಾ ಸರಬರಾಜು ಆಗ್ತಿದ್ದ ಬಗ್ಗೆ ಮಾಹಿತಿ ನೀಡಿದ್ದ. ಹೀಗಾಗಿ ಆರೋಪಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆಂಧ್ರಪ್ರದೇಶದ ಶ್ರೀಕಾಕುಲಂಗೆ ತೆರಳಿದ್ದರು. ಆಂಧ್ರದಲ್ಲಿ ಸಾಗರ್ ಸಾಹೋ ಹಾಗೂ ಶೇಷಗಿರಿಯನ್ನ ಬಂಧಿಸಲಾಗಿತ್ತು. ಬಂಧಿತರಿಂದ 20 ಲಕ್ಷ ಮೌಲ್ಯದ 50 ಕೆಜಿ ಗಾಂಜಾ ಮತ್ತು 3ಕೋಟಿ ರೂ ಮೌಲ್ಯದ 6 ಕೆಜಿ ಹಶೀಷ್ ಆಯಿಲ್ ವಶ ಪಡಿಸಿಕೊಳ್ಳಲಾಗಿದೆ. ಜಯನಗರ ಇನ್ಸ್ ಪೆಕ್ಟರ್ ಮಂಜುನಾಥ್ ಟೀಂನಿಂದ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.

ದುಡ್ಡಿಗಾಗಿ ಮಗಳನ್ನೇ ಕಿಡ್ನಾಪ್‌ ಮಾಡಿದ ಅಮ್ಮ; ಪ್ಲಾನ್‌ ವರ್ಕೌಟ್‌ ಆಗದೇ ಈಗ ಪೊಲೀಸರ ಅತಿಥಿ

ಗಾಂಜಾ ಜಪ್ತಿ: ಒಬ್ಬನ ಬಂಧನ
ದಾವಣಗೆರೆ: ಮಾರಾಟ ಮಾಡಲೆಂದು ಗಾಂಜಾ ಸಂಗ್ರಹಿಸಿಟ್ಟಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ, 14 ಸಾವಿರ ರು. ಮೌಲ್ಯದ ಗಾಂಜಾ ಸೊಪ್ಪು, ಮೊಬೈಲ್‌ ಜಪ್ತಿ ಮಾಡಿ, ಆರೋಪಿ ಯ ಬಂಧಿಸಿದ ಘಟನೆ ಹರಿಹರ ನಗರದಲ್ಲಿ ನಡೆದಿದೆ.

Lokayukta Raid: ಲೋಕಾಯುಕ್ತ ಅಬ್ಬರ ಶುರು, BBMP ಜಂಟಿ ಆಯುಕ್ತರ ಮೇಲೆ ದಾಳಿ - ಬಂಧನ

ಹರಿಹರದ ಆಶ್ರಯ ಕಾಲನಿಯ ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಗ್ರಾಮಾಂತರ ಎಎಸ್ಪಿ ಕನ್ನಿಕಾ ಸಿಕ್ರಿವಾಲ್‌ ಸಿಬ್ಬಂದಿ ಸಹಿತ ದಾಳಿ ಮಾಡಿ, ಬಂಧಿಸಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಹರಿಹರ ಸಿಪಿಐ ಯು.ಸತೀಶಕುಮಾರ, ಎಸ್‌ಐ ಶಂಕರಗೌಡ ಪಾಟೀಲ್‌, ಸಿಬ್ಬಂದಿ ಎಎಸ್‌ಐ ಕರಿಬಸಪ್ಪ, ಸೈಯದ್‌ ಗಫಾರ್‌, ತಿಮ್ಮೇಶ, ಹನುಮಂತಪ್ಪ ಕವಾಡಿ, ಸಿ.ಎಂ.ನಾಗರಾಜ, ನೂರುಲ್ಲಾ ಕಲಾರಿ, ಎಸ್‌.ಬಿ.ಸಿದ್ದರಾಜು ಕಾರ್ಯಕ್ಕೆ ಎಸ್ಪಿ ಸಿಬಿ.ರಿಷ್ಯಂತ್‌, ಎಎಸ್ಪಿ ಆರ್‌.ಬಿ.ಬಸರಗಿ ಶ್ಲಾಘಿಸಿದ್ದಾರೆ.