Asianet Suvarna News Asianet Suvarna News

ದುಡ್ಡಿಗಾಗಿ ಮಗಳನ್ನೇ ಕಿಡ್ನಾಪ್‌ ಮಾಡಿದ ಅಮ್ಮ; ಪ್ಲಾನ್‌ ವರ್ಕೌಟ್‌ ಆಗದೇ ಈಗ ಪೊಲೀಸರ ಅತಿಥಿ

Crime News Today: ಹಣಕ್ಕಾಗಿ ಸ್ವಂತ ಮಗಳನ್ನೇ ತಾಯಿ ಅಪಹರಿಸಿದ ಪ್ರಕರಣ ಉತ್ತರಪ್ರದೇಶ - ದೆಹಲಿ ಗಡಿಭಾಗದ ಗುರುಗ್ರಾಮದಲ್ಲಿ ನಡೆದಿದೆ. ವಿಶೇಷ ತಂಡ ರಚಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.

mother kidnaps own daughter for rs 50 lakh ransom in gurugram
Author
First Published Sep 13, 2022, 12:30 PM IST

ಗುರುಗ್ರಾಮ: ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ತಾಯಿಯೇ ಮಗಳನ್ನು ಹಣಕ್ಕಾಗಿ ಅಪಹರಿಸಿದ ಘಟನೆ ನಡೆದಿದೆ. ಮಗಳು ಮತ್ತು ಸ್ನೇಹಿತೆಯೊಬ್ಬರ ಮಗಳನ್ನು ಅಪಹರಿಸಿ ಐವತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಅದಾದ ನಂತರ ಪೊಲೀಸರು ಮಕ್ಕಳ ರಕ್ಷಣೆಗಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಆರೋಪಿಗಳ ಯೋಜನೆ ಫಲಿಸದೇ ಕಡೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. 

ಆರೋಪಿಗಳನ್ನು ರಿಂಕಿ, ಸಾಗರ್‌ ಮತ್ತು ಅಜಯ್‌ ಎಂದು ಗುರುತಿಸಲಾಗಿದೆ. ರಿಂಕಿ ತನ್ನ ಸ್ನೇಹಿತೆಯಿಂದ 26 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದಳು. ಅದನ್ನು ತೀರಿಸಲು ಸಾಧ್ಯವಾಗದಿದ್ದಾಗ ಸ್ನೇಹಿತೆಯ ಮಗಳನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುವ ಯೋಜನೆ ಹಾಕಿದಳು. ಅವಳ ಕಾರ್‌ ಚಾಲಕ ಅಜಯ್‌ ಮತ್ತು ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಸಾಗರ್‌ ಸೇರಿ ಪ್ಲಾನ್‌ ರೂಪಿಸಿದರು. ಆದರೆ ಸ್ನೇಹಿತೆಯ ಮಗಳೊಬ್ಬಳೇ ಅಪಹರಣವಾದರೆ ಜನರಿಗೆ ಸಂಶಯ ಬರಬಹುದು ಎಂಬ ಕಾರಣಕ್ಕೆ ತನ್ನ  9 ವರ್ಷದ ಮಗಳನ್ನೂ ರಿಂಕಿ ಅಪಹರಿಸಿದ್ದಾಳೆ. 

ಇದನ್ನೂ ಓದಿ: ಡ್ರಗ್ಸ್‌ ನಶೆಯಲ್ಲಿ ನಿಲ್ಲಲೂ ಸಾಧ್ಯವಾಗದೇ ತೂರಾಡುತ್ತಿರುವ ಯುವತಿ ವಿಡಿಯೋ ವೈರಲ್‌

ಸೆಪ್ಟೆಂಬರ್‌ 10ನೇ ತಾರೀಕು ಏಕ್ತಾ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯ ಮನೆಯಲ್ಲಿ ಕೀರ್ತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಿಂಕಿಯನ್ನು ಕೂಡ ಕಾರ್ಯಕ್ರಮಕ್ಕೆ ಕರೆಯಲಾಗಿತ್ತು. ರಿಂಕಿ ಜತೆಗೆ ಅಜಯ್‌ ಮತ್ತು ಸಾಗರ್‌ ಕೂಡ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲಿ ತನ್ನ 14 ವರ್ಷದ ಮಗಳು ಮತ್ತು ಸ್ನೇಹಿತೆಯ ಒಂಭತ್ತು ವರ್ಷದ ಮಗಳನ್ನು ರಿಂಕಿ ಐಸ್‌ಕ್ರೀಂ ಕೊಡಿಸುವ ನೆಪದಲ್ಲಿ ಅಜಯ್‌ ಜತೆ ಕಳಿಸಿದಳು. ಮಕ್ಕಳು ಆಚೆ ಹೋದ ನಂತರ ಅವರನ್ನು ಅಪಹರಿಸಲಾಗಿದೆ. ನಂತರ ಮಕ್ಕಳು ಕಾಣದಿದ್ದಾಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಯ್ತು. ಈ ವೇಳೆ ಅಪಹರಣ ಮಾಡಿದ ಅಜಯ್‌ ಮತ್ತು ಸಾಗರ್‌ ಐವತ್ತು ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಕರೆ ಮಾಡಿದ್ದರು. ಮೊಬೈಲ್‌ ಲೊಕೇಷನ್‌ ಟ್ರೇಸ್‌ ಮಾಡಿದ ಭೋಂಡ್ಸಿ ಠಾಣಾ ಪೊಲೀಸರು ಹೀರೊ ಹೊಂಡಾ ಸರ್ಕಲ್‌ನಿಂದ ಮಕ್ಕಳನ್ನು ರಕ್ಷಿಸಿದ್ದಾರೆ. 

ಇದನ್ನೂ ಓದಿ: ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

"ಸ್ನೇಹಿತೆಯ 14 ವರ್ಷದ ಮಗಳನ್ನು ಅಪಹರಿಸಲು ರಿಂಕಿ ಪ್ಲಾನ್‌ ಮಾಡಿದ್ದಳು. ತನ್ನ ಮೇಲೆ ಅನುಮಾನ ಬೀಳಬಾರದು ಎಂಬ ಕಾರಣಕ್ಕೆ ತನ್ನ ಮಗಳನ್ನೂ ಅಪಹರಿಸಿದಳು. ರಿಂಕಿ ಡಾಬಾ ಒಂದನ್ನು ಆರಂಭಿಸಿದ್ದಳು. ಅದರ ನಿರ್ವಹಣೆಗಾಗಿ ರಿಂಕಿ ಸ್ನೇಹಿತೆಯ ಬಳಿ ಸಾಲ ಪಡೆದಿದ್ದಳು. ಸಾಲ ತೀರಿಸಲು ಹಣವಿಲ್ಲದಿದ್ದಾಗ, ಸಾಲಕೊಟ್ಟ ಸ್ನೇಹಿತೆಯ ಮಗಳನ್ನೇ ಅಪಹರಿಸಿದ್ದಾಳೆ. ಕೀರ್ತನೆ ಕಾರ್ಯಕ್ರಮದ ದಿನ ಇಬ್ಬರೂ ಮಕ್ಕಳನ್ನು ಅಪಹರಿಸಿದ್ದಾರೆ," ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios