ಬೆಂಗಳೂರು [ಜ.21]: ಬೆಂಗಳೂರು ಪೊಲೀಸರು ಭರ್ಜರಿ ಬೇಟೆಯಾಡಿದ್ದು, ನಾಲ್ವರು ಅಂತರಾಜ್ಯ ಕಾರು ಕಳ್ಳರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. 

ಕಾಮಾಕ್ಷಿಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ತಮಿಳುನಾಡಿನ ತಿರುಚ್ಚಿಯಲ್ಲಿ ಸದ್ದಾಂ  ಹುಸೇನ್, ಮಾರುಮುತ್ತು, ನಾಹೂರ್ ಮೀರಾ, ಹರಿಕೃಷ್ಣ ಎಂಬ ನಾಲ್ವರು ಕಳ್ಳರನ್ನು ಬಂಧಿಸಿ 30 ಲಕ್ಷ ರು. ಮೌಲ್ಯದ ಮೂರು ಕಾರು ವಶಕ್ಕೆ ಪಡೆಯಲಾಗಿದೆ. 

ಮಾರುತಿ ಕಾರುಗಳನ್ನೇ ಕದಿಯುತ್ತಿದ್ದ ಕಳ್ಳರು, ಗ್ಲಾಸ್ ಒಡೆದು ಕಾರನ್ನು ತೆಗೆದುಕೊಂಡು ಎಸ್ಕೇಪ್ ಆಗುತ್ತಿದ್ದರು. ಕಳ್ಳರಿಂದ ಮಾರುತಿ ಬ್ರೆಜಾ, ಎರ್ಟಿಗಾ ಮತ್ತು ಡಿಜೈರ್ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. 

ಕಾಂಗ್ರೆಸ್‌ ಮುಖಂಡನಿಂದ ಅತ್ಯಾ​ಚಾರ: ಶಿಕ್ಷಕಿ ಆರೋಪ...

ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಚಂದನ‌ ಲೇಔಟ್ ನಲ್ಲಿ ಮೂರು ತಿಂಗಳ ಹಿಂದೆಯಷ್ಟೆ ತಂದಿದ್ದ ಹೊಸ ಕಾರನ್ನು ಕದ್ದೊಯ್ದಿದ್ದರು. ಹೊಸ ಕಾರು ಕಳ್ಳತನವಾಗಿದೆ ಎಂದು ಮಾಲೀಕ ಚಂದ್ರೇಗೌಡರಿಂದ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ತಮಿಳುನಾಡಿನ ತಿರುಚ್ಚಿಯಲ್ಲಿ ಕಳ್ಳರಿಗೆ ಬಲೆ ಬೀಸಿ ಸೆರೆ ಹಿಡಿದಿದ್ದಾರೆ. 

ದೇಶವನ್ನೇ ಬೆಚ್ಚಿ ಬೀಳಿಸಿದೆ ಡಾ. ಬಾಂಬ್ ಮಿಸ್ಸಿಂಗ್ ಮಿಸ್ಟರಿ..!.

ನಾಲ್ವರು ಹಿಂದೆ ಹುಳಿಮಾವು, ಬೊಮ್ಮನಹಳ್ಳಿ, ಸೂರ್ಯನಗರ, ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿಯೂ ಕಾರು ಕಳ್ಳತನ ಮಾಡಿದ್ದು,  ಇವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 11 ಪ್ರಕರಣ ದಾಖಲಾಗಿವೆ.