Asianet Suvarna News Asianet Suvarna News

ಕಾಂಗ್ರೆಸ್‌ ಮುಖಂಡನಿಂದ ಅತ್ಯಾ​ಚಾರ: ಶಿಕ್ಷಕಿ ಆರೋಪ

ಕಾಂಗ್ರೆಸ್‌ ಮುಖಂಡನಿಂದ ಅತ್ಯಾ​ಚಾರ: ಶಿಕ್ಷಕಿ ಆರೋಪ| ಮನೆ ಬಳಿ ಬರುವಂತೆ ಹೇಳಿದ್ದ ಮುಖಂಡ| ತಲೆಮರೆಸಿಕೊಂಡ ಆರೋಪಿ ತಿಪ್ಪೇಸ್ವಾಮಿ

Rape Attempt On Teacher Allegation On Chitradurga Congress Zilla Panchayat Member
Author
Bangalore, First Published Jan 20, 2020, 7:31 AM IST
  • Facebook
  • Twitter
  • Whatsapp

ಚಿತ್ರದುರ್ಗ[ಜ.20]: ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿರಿಗೆರೆ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ತಿಪ್ಪೇಸ್ವಾಮಿ ವಿರುದ್ಧ ಶಿಕ್ಷಕಿಯೊಬ್ಬರು ಅತ್ಯಾಚಾರದ ದೂರು ನೀಡಿದ್ದಾರೆ.

ಪ್ರೇಮದ ನಾಟಕವಾಡಿ 9ನೇ ಕ್ಲಾಸ್ ವಿದ್ಯಾರ್ಥಿನಿ ಕೈಗೆ ಮಗು ಕೊಟ್ಟ ನೆರೆಮನೆಯ ಯುವಕ

ಅತ್ಯಾಚಾರಕ್ಕೆ ಒಳಗಾದ ಶಿಕ್ಷಕಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭರಮಸಾಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಜಿಪಂ ಸದಸ್ಯ ತಿಪ್ಪೇಸ್ವಾಮಿ ತಮ್ಮ ಬಳಿ ಎಂಟು ಲಕ್ಷ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದು, ನಾಲ್ಕು ಲಕ್ಷ ರು. ವಾಪಸ್‌ ಕೊಟ್ಟಿದ್ದರು. ನಂತರ ಒಂದು ಲಕ್ಷ ರು. ಪುನಃ ಸಾಲವಾಗಿ ಪಡೆದಿದ್ದರು. ತಮಗೆ ಹಣದ ತುರ್ತು ಅನಿವಾರ್ಯವಿದ್ದುದರಿಂದ ವಾಪಸ್‌ ಮಾಡುವಂತೆ ಒಂದು ತಿಂಗಳಿಂದ ಕೋರಿಕೊಂಡಿದ್ದೆ. ಆದರೆ, ಹಣ ವಾಪಸ್‌ ಕೊಡುವುದಾಗಿ ಹೇಳಿದ ತಿಪ್ಪೇಸ್ವಾಮಿ, ಸಿರಿಗೆರೆಯಲ್ಲಿ ನಿರ್ಮಾಣದ ಹಂತದಲ್ಲಿರುವ ತಮ್ಮ ಮನೆ ಬಳಿ ಬರುವಂತೆ ಶನಿವಾರ ಸಂಜೆ ಹೇಳಿದ್ದರು. ಅದರಂತೆ ಕಟ್ಟಡದ ಬಳಿ ಹೋದಾಗ ನನ್ನ ಮೇಲೆ ಅತ್ಯಾಚಾರವೆಸಗಿದರು. ನಂತರ ಕಾರೊಂದರಲ್ಲಿ ಬಂದು ಚಿಕಿತ್ಸೆಗಾಗಿ ಚಿತ್ರದುರ್ಗ ಆಸ್ಪತ್ರೆಗೆ ಸೇರಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಐಪಿಸಿ ಸೆಕ್ಷನ್‌ ಕಲಂ 376, 341, 504, 506 ಅಡಿ ಭರಮಸಾಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿ ತಿಪ್ಪೇಸ್ವಾಮಿ ತಲೆ ಮರೆಸಿಕೊಂಡಿದ್ದಾರೆ.

5 ವರ್ಷದ ಮಗುವಿನ ನಿರ್ಭಯಾ ರೀತಿ ರೇಪ್‌: ಇಬ್ಬರು ದೋಷಿ!

Follow Us:
Download App:
  • android
  • ios