ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನ ವೇಶ್ಯಾವಾಟಿಕೆಗೆ ತಳ್ಳಿದ ಧೂರ್ತರು!
ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬಳನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಂಡ ಆರೋಪದ ಮೇಲೆ ಲಾಡ್ಜ್ ಮಾಲೀಕರು ಮತ್ತು ಮ್ಯಾನೇಜರ್ ಸೇರಿ ಮೂವರನ್ನು ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲಬುರಗಿ (ಜು.8) : ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬಳನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಂಡ ಆರೋಪದ ಮೇಲೆ ಲಾಡ್ಜ್ ಮಾಲೀಕರು ಮತ್ತು ಮ್ಯಾನೇಜರ್ ಸೇರಿ ಮೂವರನ್ನು ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಜಿಡಿಎ ಲೇಔಟ್‌ನಲ್ಲಿರುವ ಲಾಡ್ಜ್ ಮಾಲೀಕರಾದ ದೇವರಾಜ ಯಡಹಳ್ಳಿ, ಬಸವರಾಜ ಹರವಾಳ ಮತ್ತು ಮ್ಯಾನೇಜರ್ ತಿಮ್ಮಣ್ಣ ಪೂಜಾರಿ ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಡಿಎ ಲೇಔಟ್‌ನಲ್ಲಿರವ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ದಕ್ಷಿಣ ಉಪ ವಿಭಾಗದ ಎಸಿಪಿ ಅವರ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪಂಡಿತ್ ಸಗರ, ಸಿಬ್ಬಂದಿ ಸಾಯಿಬಣ್ಣ, ಶಿವಲಿಂಗ, ನೀಲಕಂಠರಾಯ ಪಾಟೀಲ ಮತ್ತು ಮಹಿಳಾ ಸಿಬ್ಬಂದಿ ಜ್ಯೋತಿ ಅವರು ದಾಳಿ ನಡೆಸಿದ್ದಾರೆ.
5 ಬಾಲಕರಿಂದ 9 ವರ್ಷದ ಬಾಲಕಿಯ ಗ್ಯಾಂಗ್‌ರೇಪ್: ಕಲಬುರಗಿಯಲ್ಲಿ ಹೇಯ ಘಟನೆ
ಈ ವೇಳೆ ಲಾಡ್ಜ್‌ನ ಕೋಣೆಯೊಂದರಲ್ಲಿ ಚಿತ್ತಾಪುರ ತಾಲೂಕಿನ ಸಾತನೂರ ಗ್ರಾಮದ ಮಲ್ಲಿನಾಥ ಅವಂಟಿ ಎಂಬಾತನೊಂದಿಗೆ ಮಹಿಳೆ ಇರುವುದು ಪತ್ತೆಯಾಗಿದೆ. ಮಹಿಳೆಯನ್ನು ವಿಚಾರಣೆ ನಡೆಸಿದಾಗ ಕೆಲಸ ಕೊಡಿಸುವುದಾಗಿ ಹೇಳೆ ಮಹಿಳೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಲಾಡ್ಜ್ ಮಾಲೀಕರು ಮತ್ತು ಮ್ಯಾನೇಜರ್‌ನನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಮ್ ಸೆಂಟರ್ ಮಾಲೀಕನಿಗೆ ವಂಚನೆ: ಇಬ್ಬರ ವಿರುದ್ಧ ದೂರು
ಕಲಬುರಗಿ: ಜಿಮ್ ಮಾಲೀಕನಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಇಲ್ಲಿನ ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ 420 ಕೇಸ್ ದಾಖಲಾಗಿದೆ. ಗುಬ್ಬಿ ಕಾಲೋನಿಯ ಕೃಷ್ಣಾ ಸಿ.ರಮೇಶ್ ಅವರು ಸೇಡಂ ರಸ್ತೆಯಲ್ಲಿ ಸ್ನ್ಯಾಪ್ ಫಿಟ್ನೆಸ್ ಜಿಮ್ ಸೆಂಟರ್ ನಡೆಸುತ್ತಿದ್ದು, ಇಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಎಂಎಸ್‌ಕೆ ಮಿಲ್‌ನ ಸೈಯದ್ ಶಹಬಾಜ್ ಮತ್ತು ಮೋಹ್ಮದ್ದ ಅಬ್ದುಲ್ ಕಲೀಂ ಅವರು ಜಿಮ್ಗೆ ಬರುತ್ತಿದ್ದ ಗ್ರಾಹಕರಿಂದ ತಿಂಗಳ ಫೀಸ್ ಪಡೆದು ಅದನ್ನು ಕಂಪನಿ ಅಕೌಂಟ್‌ಗೆ ಜಮಾ ಮಾಡುತ್ತಿದ್ದರು.
ಆದರೆ, ನವೆಂಬರ್ 2022ರಿಂದ ಜೂನ್ 2023ರವರೆಗೆ ಕೆಲವು ಗ್ರಾಹಕರು ತಮ್ಮ ಫೀಸು ಸೈಯದ್ ಶಹಬಾಜ್ ಮತ್ತು ಮೋಹ್ಮದ್ ಅಬ್ದುಲ್ ಕಲೀಂ ಅವರಿಗೆ ಕೊಟ್ಟಿದ್ದಾರೆ. ಇವರು ಈ ಹಣವನ್ನು ವೈಯಕ್ತಿವಾಗಿ ಬಳಸಿಕೊಂಡಿದ್ದಲ್ಲದೆ ತಮ್ಮ ವೈಯಕ್ತಿಕ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೃಷ್ಣಾ ಅವರು ಒಂದು ವಾರದ ಹಿಂದೆ ಅಕೌಂಟೆಂಟ್‌ಗಳಾದ ಶ್ಯಾಮ್ ಹತಕರ್ ಮತ್ತು ಆನಂದ ಅವರನ್ನು ವಿಚಾರಿಸಿ ಹಣಕಾಸಿನ ವ್ಯವಹಾರ ಪರಿಶೀಲಿಸಿದಾಗ ಸೈಯದ್ ಶಹಬಾಜ್ ಮತ್ತು ಮೋಹ್ಮದ್ ಅಬ್ದುಲ್ ಕಲೀಂ ಅವರು 10,49000 ರು. ನಗದು ಹಣ ಹಾಗೂ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ 2 ಲಕ್ಷ ರುಪಾಯಿಯನ್ನು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಪಕ್ಷ ನಾಯಕನ ಆಯ್ಕೆ ಮಾಡದೆ ಬುರುಡೆ ಬಿಡ್ತೀರಾ?: ಸಿಎಂ ಸಿದ್ದರಾಮಯ್ಯ ತರಾಟೆ
ಇಬ್ಬರು ಸೇರಿ ಒಟ್ಟು 12,49,000 ರು. ತೆಗೆದುಕೊಂಡು ವಂಚನೆ ಮಾಡಿದ್ದಾರೆ ಎಂದು ಕೃಷ್ಣಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಯದ್ ಶಹಬಾಜ್ ಮತ್ತು ಮೋಹ್ಮದ್ ಅಬ್ದುಲ್ ಕಲೀಂ ವಿರುದ್ಧ ಎಂ.ಬಿ. ನಗರ ಪೊಲೀಸರು 420 ಕೇಸ್ ದಾಖಲಿಸಿಕೊಂಡಿದ್ದಾರೆ.