5 ಬಾಲಕರಿಂದ 9 ವರ್ಷದ ಬಾಲಕಿಯ ಗ್ಯಾಂಗ್‌ರೇಪ್: ಕಲಬುರಗಿಯಲ್ಲಿ ಹೇಯ ಘಟನೆ
ಒಂಬತ್ತು ವರ್ಷದ ಬಾಲಕಿ ಮೇಲೆ 12ರಿಂದ 14 ವರ್ಷ ವಯಸ್ಸಿನ ಐವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಲ್ಲಿನ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ನಾಲ್ವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ.
ಕಲಬುರಗಿ (ಜು.07): ಒಂಬತ್ತು ವರ್ಷದ ಬಾಲಕಿ ಮೇಲೆ 12ರಿಂದ 14 ವರ್ಷ ವಯಸ್ಸಿನ ಐವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಲ್ಲಿನ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ನಾಲ್ವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ.
ಐವರು ಬಾಲಕರು ಸೇರಿಕೊಂಡು ಮನೆ ಮುಂದಿನ ರಸ್ತೆಯಲ್ಲಿ ಬಾದಾಮಿಕಾಯಿ ಒಡೆಯುತ್ತ ತನ್ನ ಪಾಡಿಗೆ ಕುಳಿತಿದ್ದ ಬಾಲಕಿಯನ್ನು ಚಾಕೋಲೆಟ್ ಆಮಿಷ ತೋರಿಸಿ ತಮ್ಮ ಜೊತೆ ಕರೆದೊಯ್ದಿದ್ದಾರೆ. ಬಾಲಕಿ ಮನೆಯಿಂದ ಕೂಗಳತೆಯಲ್ಲೇ ಇದ್ದಂಥ ಮನೆ ಮೇಲಿನ ಮಹಡಿ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆಂದು ಬಾಲಕಿ ತಾಯಿ ಮಹಿಳಾ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪವೇನು?: ಸಂತ್ರಸ್ತೆ ಬಾಲಕಿ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದಳು. ಮಧ್ಯಾಹ್ನ 2 ಗಂಟೆ ಹೊತ್ತಿಗೆ ರಸ್ತೆ ಪಕ್ಕ ಬಾದಾಮಿ ಕಾಯಿ ಒಡೆಯುತ್ತ ಕುಳಿತಿದ್ದಾಗ ಐವರು ಬಾಲಕರು ಆಕೆಯ ಬಳಿ ಬಂದು ಈ ದುಷ್ಕೃತ್ಯ ಎಸಗಿದ್ದಾರೆ. ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ ಪಕ್ಕದ ಕಟ್ಟಡದ ಟೆರೇಸ್‌ಗೆ ಕರೆದೊಯ್ದ ಬಾಲಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ ಮನೆಯಲ್ಲಿ ಅಥವಾ ಯಾರಿಗಾದರೂ ಈ ವಿಚಾರ ಹೇಳಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಕೂಡಾ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ಮಾಡದೆ ಬುರುಡೆ ಬಿಡ್ತೀರಾ?: ಸಿಎಂ ಸಿದ್ದರಾಮಯ್ಯ ತರಾಟೆ
ಘಟನೆ ನಂತರ ಗಾಬರಿಗೊಂಡು ಮನೆಗೆ ಬಂದ ಬಾಲಕಿ ತಾಯಿಗೆ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾಳೆ. ಬಳಿಕ ಅಸ್ವಸ್ಥ ಬಾಲಕಿಯನ್ನು್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಈಗಾಗಲೇ ನಾಲ್ವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಇನ್ನೊಬ್ಬ ಬಾಲಕ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ. ಭಾರತೀಯ ದಂಡ ಸಂಹಿತೆಯ 366ಎ(ಇನ್ನೊಬ್ಬರ ಜತೆಗೆ ಲೈಂಗಿಕ ಕ್ರಿಯೆಗೆ ಬಾಲಕಿಯನ್ನು ಬಲವಂತಪಡಿಸುವುದು), 376 ಡಿ(ಸಾಮೂಹಿಕ ಅತ್ಯಾಚಾರ) ಹಾಗೂ 506(ಜೀವ ಬೆದರಿಕೆ) ಜೊತೆಗೆ ಐಪಿಸಿ ಕಲಂ 5 (ಜಿ) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.