ಮಕ್ಕಳು ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುವುದು ಸಾಮಾನ್ಯ. ಆದರೆ ಈ ವೇಳೆ ಅತೀವ ಎಚ್ಚರಿಕೆ ವಹಿಸದಿದ್ದರೆ ಅನಾಹುತಗಳೇ ಸಂಭವಿಸುತ್ತದೆ. ಇದೀಗ 4 ವರ್ಷದ ಬಾಲಕ ಟಿವಿ ಸೆಟ್ ಅಪ್ ಬಾಕ್ಸ್ ಮುಟ್ಟಿ ಮೃತಪಟ್ಟ ಘಟನೆ ನೆಡೆದಿದೆ.

ನಾಗ್ಪುರ(ಆ.09) ಪುಟ್ಟ ಮಕ್ಕಳು ಟಿವಿಯತ್ತ ಆಕರ್ಷಿತರಾಗುತ್ತಾರೆ. ಅದರಲ್ಲೂ ಕಾರ್ಟೂನ್‌ಗಳನ್ನು ವೀಕ್ಷಿಸುತ್ತಾ ಟಿವಿಯೊಳಗೆ ಮುಳುಗಿ ಬಿಡುತ್ತಾರೆ. ಅತೀಯಾದ ಟಿವಿ ವೀಕ್ಷಣೆ, ಮೊಬೈಲ್ ವೀಕ್ಷಣೆ ಉತ್ತಮ ಬೆಳವಣಿಗೆ ಅಲ್ಲ. ಇದೀಗ 4 ವರ್ಷದ ಬಾಲಕ ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುತ್ತಾ ಟಿವಿ ಸೆಟ್ ಅಪ್ ಬಾಕ್ಸ್ ಮುಟ್ಟಿದ್ದಾನೆ. ವಿದ್ಯುತ್ ಶಾಕ್ ತಗುಲಿ ಬಾಲಕ ಮೃತಪಟ್ಟ ಘಟನೆ ನಾಗ್ಪುರದಲ್ಲಿ ನಡೆದಿದೆ. 

ಖೈರೆ ಪನ್ನಾಸೆ ಏರಿಯಾದಲ್ಲಿ ಆಗಸ್ಟ್ 8 ರಂದು ಈ ಘಟನೆ ನಡೆದಿದೆ. ಮಗುವಿನ ತಾಯಿ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಗುವಿನ ತಂದೆ ಸೋಫಾ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಮಗುವಿಗೆ ಟಿವಿಯಲ್ಲಿ ಕಾರ್ಟೂನ್ ಹಾಕಿದ್ದಾರೆ. ಸೋಫಾ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ತಂದೆ ನಿದ್ರೆಗೆ ಜಾರಿದ್ದಾರೆ. ಇತ್ತ ಮಗು ಕಾರ್ಟೂನ್ ವೀಕ್ಷಿಸುತ್ತಾ ಟಿವಿ ಹತ್ತಿರಕ್ಕೆ ಸಾಗಿದೆ.

ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್, 24ರ ಹರೆಯದ ಯುವಕ ಸಾವು!

ಟಿವಿ ಹತ್ತಿರಕ್ಕೆ ತೆರಳಿದ ಮಗು ಸೆಟ್ ಅಪ್ ಬಾಕ್ಸ್ ಮೇಲೆ ಕೈ ಇಟ್ಟಿದೆ. ಆದರೆ ವಿದ್ಯುತ್ ಶಾಕ್ ತಗಲಿಲಿದೆ. ವಿದ್ಯುತ್ ಶಾಕ್‌ನಿಂದ ಮಗುವ ನೆಲಕ್ಕೆ ಬಿದ್ದಿದೆ. ಮಗುವಿನಿಂದ ಒಂದು ಶಬ್ದವೂ ಬಂದಿಲ್ಲ. ಇತ್ತ ವಿಶ್ರಾಂತಿಯಲ್ಲಿದ್ದ ತಂದೆಗೆ ಇದರ ಅರಿವೆ ಆಗಿಲ್ಲ. ಕೆಲ ಹೊತ್ತಿನ ಬಳಿಕ ಎಚ್ಚೆತ್ತ ತಂದೆ ಮಗುವನ್ನು ನೋಡಿದಾಗ ಮಲಗಿರುವ ರೀತಿ ಪತ್ತೆಯಾಗಿದೆ. ಹತ್ತಿರ ಬಂದು ನೋಡಿದಾಗ ಆತಂಕ ಗೊಂಡಿದ್ದಾರೆ.

ಮಗುವಿನ ದೇಹದಲ್ಲಿ ಚಲನವೇ ಇರಲಿಲ್ಲ. ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಅಷ್ಟರೊಳಗೆ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿದೆ. ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ತಂದೆ ನಿದ್ರೆ ಜಾರಿದ ಬೆನ್ನಲ್ಲೇ ಘಟನೆ ನಡೆದಿದೆ. ಇದರ ಪರಿಣಾಮ ಮಗು ದುರಂತ ಅಂತ್ಯಕಂಡಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಹೈಟೆನ್ಷನ್ ವೈರ್‌ ಬಿದ್ದು ವಿದ್ಯುತ್ ಸ್ಪರ್ಶಕ್ಕೆ ಕನಿಷ್ಠ 16 ಜನ ಬಲಿ: ನಮಾಮಿ ಗಂಗಾ ಯೋಜನೆ ಆವರಣದಲ್ಲಿ ದಾರುಣ ಘಟನೆ

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ರಕ್ಷಣೆಗೆ ಹೋದ ಇಬ್ಬರ ಸಾವು: ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಇನ್ನೋವಾ ಕಾರನ್ನು ಹೊರತೆಗೆಯಲು ಯತ್ನಿಸಿದ ವೇಳೆ ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಮೈಸೂರಿನ ಎಚ್‌.ಡಿ.ಕೋಟೆ-ಮಾನಂದವಾಡಿ ರಸ್ತೆಯಲ್ಲಿ ಇತ್ತೀಚೆಗೆ ನಡೆದಿತ್ತು. ಅಶೋಕಪುರಂ ನಿವಾಸಿಗಳಾದ ಕಿರಣ್‌(35), ರವಿಕುಮಾರ್‌(33) ಮೃತರು. ಇನ್ನು ಕಾರು ಚಾಲಕ ರವಿ, ಸಹಾಯ ಮಾಡಲು ಬಂದಿದ್ದ ಸಂದೇಶ, ಶಿವಕುಮಾರ್‌ ಹಾಗೂ ರೋಷನ್‌ ಎಂಬವರು ವಿದ್ಯುತ್‌ ಸ್ಪರ್ಶದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿ ಎಂಬವರು ಗುರುವಾರ ರಾತ್ರಿ ಇನ್ನೋವಾ ಕಾರನ್ನು ಚಾಲನೆ ಮಾಡಿಕೊಂಡು ನಾಚನಹಳ್ಳಿಪಾಳ್ಯದ ಕಡೆಯಿಂದ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ವಿದ್ಯುತ್‌ ಕಂಬ ಮುರಿದು ಬಿದ್ದಿದ್ದು, ಕಾರು ವಿದ್ಯುತ್‌ ಕಂಬ ಮತ್ತು ಪಕ್ಕದಲ್ಲೇ ಇದ್ದ ಕಾಂಪೌಂಡ್‌ ಗೋಡೆ ನಡುವೆ ಸಿಕ್ಕಿಕೊಂಡಿದೆ.