ವ್ಯಾಯಾಮದ ಮೂಲಕ ಫಿಟ್ ಆಗಿರಬೇಕು ಎಂದು ಜಿಮ್‌ಗೆ ಹೋಗುವವರ ಸಂಖ್ಯೆ ಹೆಚ್ಚು. ಹೀಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆಯೆ ಕರೆಂಟ್ ಶಾಕ್‌ಗೆ 24ರ ಹರೆಯದ ಯುವಕ ಮೃತಪಟ್ಟಿದ್ದಾರೆ. ಇತ್ತ ಜಿಮ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. 

ದೆಹಲಿ(ಜು.20) ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಇದೀಗ ಬಹುತೇಕರು ಜಿಮ್‌ಗೆ ತೆರಳಿ ದೇಹ ದಂಡಿಸಿ ಫಿಟ್ ಆಗಿರಲು ಬಯಸುತ್ತಾರೆ. ಇದಕ್ಕಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಹೀಗಿ ಆರೋಗ್ಯ ಹಾಗೂ ಫಿಟ್ ಆಗಿರಲು ಬಯಸಿದ ದೆಹಲಿಯ 24ರ ಹರೆಯದ ಯುವಕ ಸಾಕ್ಷಮ್ ಪ್ರುತಿ ಮೃತಪಟ್ಟಿದ್ದಾನೆ. ಉತ್ತರ ದೆಹಲಿಯ ರೋಹಿನಿ ನಗರದಲ್ಲಿರುವ ಜಿಮ್‌ನ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದ ಮೃತಪಟ್ಟಿದ್ದಾನೆ. ಬಿಟೆಕ್ ಪದವಿದರನಾಗಿರುವ ಸಾಕ್ಷಮ್, ಗುರುಗ್ರಾಂನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇದೀಗ ಜಿಮ್ ಅವಾಂತರಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ.

ರೋಹಿನಿ ಸೆಕ್ಟರ್ 15ರಲ್ಲಿರುವ ಜಿಮ್‌ಪ್ಲೆಕ್ಸ್ ಕೇಂದ್ರದಲ್ಲಿ ಪ್ರತಿ ದಿನ ಜಿಮ್ ಮಾಡುತ್ತಿದ್ದ. ಎಂದಿನಂತೆ ಇಂದು ಬೆಳಗ್ಗೆ ಜಿಮ್‌ಗೆ ತೆರಳಿದ್ದಾನೆ. 6 ಗಂಟೆಗೆ ಸೇಬು ಸೇವಿಸಿ ಬಳಿಕ ಜಿಮ್‌ಗೆ ತೆರಳಿದ್ದಾನೆ. ಜಿಮ್ ಪ್ರವೇಶಿದ ಬಳಿಕ ಟ್ರೆಡ್‌ಮಿಲ್‌ನಲ್ಲಿ ಓಡಿ ಬಳಿಕ ವ್ಯಾಯಾಮ ಮಾಡಲು ಮುಂದಾಗಿದ್ದಾನೆ. ಇದರಂತೆ ಟ್ರೆಡ್‌ಮಿಲ್‌ನಲ್ಲಿ ಓಡಲು ಆರಂಭಿಸಿದ್ದಾನೆ. ಕೆಲ ಹೊತ್ತಿನ ಬಳಿಕ ವಿಶ್ರಾಂತಿಗಾಗಿ ಟ್ರೆಡ್‌ಮಿಲ್ ಪಕ್ಕ ಕುಳಿತಿದ್ದಾನೆ. ಇದೇ ವೇಳೆ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಯುವಕ ಕುಸಿದು ಬಿದ್ದಿದ್ದಾನೆ.

ಜಿಮ್​: ಪುರುಷತ್ವದ ಪ್ರದರ್ಶನವೊ? ಸಾವಿನ ಹಾದಿಯೊ? ಲಾಭದ ಮಾರ್ಗವೊ?

ದಿಢೀರ್ ಕುಸಿದು ಬಿದ್ದ ಸಾಕ್ಷಮ್‌ನನ್ನು ಜಿಮ್‌ನಲ್ಲಿದ್ದ ಇತರರು ಹಾಗೂ ಸಿಬ್ಬಂಧಿಗಳು ಆಸ್ಪತ್ರೆ ದಾಖಲಿಸಿದ್ದಾರೆ. ಪರಿಶೀಲಿಸದ ವೈದ್ಯರು ಯುವಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವರದಿಯಲ್ಲಿ ಯುವಕ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾನೆ ಎಂದಿದೆ. ಹೃದಯಾಘಾತ ಎಂದು ಜಿಮ್ ಮಾಲೀಕ ಹೇಳಿದ್ದ. ಇದೀಗ ವಿದ್ಯುತ್ ಶಾಕ್ ಎಂದಾಗ ಪೊಲೀಸರಿಗೂ ಶಾಕ್ ಆಗಿದೆ. 

ಮೊದಲೇ ಜಿಮ್ ಸುತ್ತುವರಿದೆ ಸೀಲ್ ಮಾಡಿದ್ದ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಇದೇ ವೇಳೆ ಜಿಮ್‌ನ ಟ್ರೆಡ್‌ಮಿಲ್‌ ಕರೆಂಟ್ ಶಾಕ್ ಹೊಡೆಯತ್ತಿರುವುದದು ಬೆಳಕಿಗೆ ಬಂದಿದೆ. ಇತ್ತ ಜಿಮ್ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ವಿದ್ಯುತ್ ಶಾಕ್‌ನಿಂದ ಯುವಕ ಕುಸಿದು ಬಿದ್ದಿರುವ ದೃಶ್ಯಗಳು ಪತ್ತೆಯಾಗಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಜಿಮ್ ಮಾಲಿಕನನ್ನು ಬಂಧಿಸಿದ್ದಾರೆ. 

Viral Video: ಜಿಮ್‌ ನಲ್ಲೂ ಸೀರೆನಾ? ಸೀರೆ ಧರಿಸಿ ಈಕೆ ಕ್ಲಿಷ್ಟಕರ ಕಸರತ್ತು ಮಾಡ್ತಾಳೆ

ಯುವಕನ ಕಳೆದುಕೊಂಡಿರುವ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಿಮ್ ಮಾಲೀಕನ ನಿರ್ಲಕ್ಷ್ಯಕ್ಕೆ ನನ್ನ ಮಗ ಬಲಿಯಾಗಿದ್ದಾನೆ. ಜಿಮ್ ಮಾಲೀಕ ದುಬಾರಿ ಹಣ ಪಡೆದು ಈ ರೀತಿ ನಿರ್ಲಕ್ಷ್ಯ, ಕೆಟ್ಟ ಸೇವೆ ನೀಡಿದ ಪರಿಣಾಮವೇ ಈ ದುರಂತ ಸಂಭವಿಸಿದೆ ಎಂದು ಮೃತ ಯುವಕನ ತಾಯಿ ಹೇಳಿದ್ದಾರೆ. ನಮ್ಮ ಕುಟುಂಬವೇ ಅನಾಥವಾಗಿದೆ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

ಈ ಘಟನೆ ಬಳಿಕ ಇದೀಗ ಉತ್ತರ ದೆಹಲಿ ಪೊಲೀಸರು, ಇತರ ಜಿಮ್‌ಗೆ ದಾಳಿ ನಡೆಸಿದ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಜಿಮ್‌ಗಳಲ್ಲಿ ಗ್ರಾಹಕರಿಗೆ ಯಾವ ರೀತಿ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿದ್ಯುತ್ ಶಾಕ್ ಹೊಡೆಯದಂತೆ ತಡೆಯಲು ಇರುವ ವ್ಯವಸ್ಥೆಗಳೇನು? ಅರ್ಥ್, ಅಗ್ನಿಶಾಮಕ ಸಿಲಿಂಡರ್ ಸೇರಿದಂತೆ ಇತರ ತುರ್ತು ವಸ್ತುಗಳ ಕುರಿತು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.