Asianet Suvarna News Asianet Suvarna News

Murder Case: ಹಳೆ ವೈಷಮ್ಯಕ್ಕೆ ಯುವಕನ ಬಲಿ: ನರ​ಗುಂದ​ದಲ್ಲಿ ಬಿಗು​ವಿನ ವಾತಾ​ವ​ರಣ

*   ಗದಗ ಜಿಲ್ಲೆಯ ನರ​ಗುಂದ​ದಲ್ಲಿ ಘಟನೆ, ನಾಲ್ವರ ಬಂಧನ
*  ಒಂದು ಕೋಮಿನ ಯುವಕರು, ಮತ್ತೊಂದು ಕೋಮಿನ ಯುವಕರ ಮಧ್ಯೆ ಸಂಘರ್ಷ
*  ಈ ಸಂಬಂಧ ಕುರಿತು ನರ​ಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 

Four Arrested For Murder Case at Nargund in Gadag grg
Author
Bengaluru, First Published Jan 19, 2022, 9:25 AM IST

ನರಗುಂದ(ಜ.19):  ಪಟ್ಟಣದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆ ಸೋಮವಾರ ರಾತ್ರಿ ಪುರಸಭೆ ಹಿಂದೆ ಒಂದು ಕೋಮಿನ ಯುವಕರು, ಮತ್ತೊಂದು ಕೋಮಿನ ಇಬ್ಬರು ಯುವಕರನ್ನು ಚೂರಿಯಿಂದ ಇರಿದಿದ್ದು, ಘಟನೆಯಲ್ಲಿ ಗಾಯಗೊಂಡ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ(Hubballi) ಕಿಮ್ಸ್‌ನಲ್ಲಿ(KIMS) ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ(Death).

ಸಮೀರ ಸುಬಾನಸಾಬ್‌ ಶಹಪುರ (20) ಎಂಬಾತನೇ ಮೃತಪಟ್ಟ ಯುವಕ. ಇನ್ನು ಶಮಸೀರಖಾನ್‌ ನಾಸಿರಖಾನ್‌ ಪಠಾಣ ತೀವ್ರ ಗಾಯಗೊಂಡಿದ್ದು(Injured), ಆತನಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ಕುರಿತು ನರ​ಗುಂದ(Nargund) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು(Accused) ಬಂಧಿಸಿದ್ದಾರೆ(Arrest). ನರಗುಂದ ಪಟ್ಟಣದ ಮಲ್ಲಿಕಾರ್ಜುನ ಹಿರೇಮಠ, ಸಕ್ರಪ್ಪ ಕಾಕನೂರ, ಚನ್ನು ಅಕ್ಕಿ, ಸಂಜು ನಲವಡೆ ಎಂಬ​ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ದೇವರಾಜು ತಿಳಿಸಿದ್ದಾರೆ.

Thieves Caught in Bengaluru: ಕಿಟಕಿಯಲ್ಲಿ ಕೈ ಹಾಕಿ ಚಿನ್ನಾಭರಣ ಕದಿಯುತ್ತಿದ್ದ ಮೂವರ ಬಂಧನ!

ಘಟನೆ ಪರಿ​ಣಾಮ ಪಟ್ಟಣದ ದಂಡಾಪುರ, ಲೋದಿಗಲ್ಲಿ ಕೆಲವು ಮಾರುಕಟ್ಟೆ ಪ್ರದೇಶಗಳಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾ​ಣ​ವಾ​ಗಿದೆ. ಪುರಸಭೆ ಸಮೀಪದ ಸರ್ಕಾರಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು(Students) ಮಧ್ಯಾಹ್ನವೇ ಮನೆಗೆ ಕಳಿಸಿ ಶಾಲೆ ಬಂದ್‌ ಮಾಡಲಾಗಿದ್ದು, ನರ​ಗುಂದದಲ್ಲಿ ಬಿಗು​ವಿನ ವಾತಾ​ವ​ರಣ ಸೃಷ್ಟಿ​ಯಾ​ಗಿದೆ.

ಐಜಿಪಿ ಭೇಟಿ:

ಘಟನೆ ಹಿನ್ನೆ​ಲೆ ಉತ್ತರ ವಲಯ ಐಜಿಪಿ ಎನ್‌. ಸತೀಶಕುಮಾರ ಅವರು ಮಂಗಳವಾರ ಪಟ್ಟಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿ ಕೋಮು ಸಂಘರ್ಷಕ್ಕೆ(Communal Violance) ಅವಕಾಶ ಕೊಡುವುದಿಲ್ಲ. ಮುಂಜಾಗ್ರತೆಯಾಗಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸೋಮವಾರದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನು ಕೆಲವರನ್ನು ಬಂಧಿಸಲಾಗುವುದು. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಈಗಾಗಲೇ ಕೊಲೆ​ಯಾದ ಯುವ​ಕ​ರ ಸಮು​ದಾ​ಯದ ಮುಖಂಡರ ಜತೆ ಸಭೆ ನಡೆಸಲಾಗಿದ್ದು, ಪಟ್ಟಣದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ಮೂರು ತಿಂಗಳಿಂದ ಇಲ್ಲಿ ಕೋಮು ಸಂಘರ್ಷ ನಡೆದಿರುವುದು ಕಂಡುಬಂದಿದೆ. ಇದಕ್ಕೆ ಕಾರಣರಾದವರ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿ​ದರು.

150 ಜನರ ವಿರುದ್ಧ ಪ್ರಕರಣ

ಪಟ್ಟಣದಲ್ಲಿ ನ. 27ರಿಂದ ಕೋಮು ಸಂಘರ್ಷದ ಘಟನೆಗಳು ನಡೆಯುತ್ತಿದ್ದು, ಸೋಮವಾರ ನಡೆದ ಕೊಲೆ(Murder) ಪ್ರಕರಣ ಸೇರಿದಂತೆ 6 ಪ್ರಕರಣ ದಾಖಲಾಗಿವೆ. ಎರಡೂ ಕೋಮು ಸೇರಿದಂತೆ 150 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಶಿವಪ್ರಕಾಶ್‌ ದೇವರಾಜು ಹೇಳಿದರು.

Belagavi: ಗಂಡನನ್ನೇ ಕೊಂದ ಪಾಪಿ ಹೆಂಡ್ತಿ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕೋಮಿನ ಕಡೆಯಿಂದ ಪ್ರಚೋದನಕಾರಿ ಚಟುವಟಿಕೆ ನಡೆಯುತ್ತಿವೆ. ಪದವಿಪೂರ್ವ ಹಾಗೂ ಪದವಿ ಹಂತದ ವಿದ್ಯಾರ್ಥಿಗಳನ್ನು ಇದಕ್ಕೆ ಬಳಸಿಕೊಳ್ಳುವುದು ಕಂಡುಬಂದಿದೆ. ಈ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಪಟ್ಟಣದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಇಬ್ಬರು ಡಿಎಸ್ಪಿ, ಐವರು ಇನ್‌ಸ್ಪೆಕ್ಟರ್‌, 6 ಸಬ್‌ಇನ್‌ಸ್ಪೆಕ್ಟರ್‌ ಹಾಗೂ 4 ಡಿಆರ್‌ ತಂಡಗಳನ್ನು ನೇಮಕ ಮಾಡಲಾಗಿದೆ. 1 ಕೆಎಸ್‌ಆಪಿರ್‌ಗೆ ವಿನಂತಿ ಮಾಡಲಾಗಿದೆ. ಮುಂದೆ ಕೋಮುಗಲಭೆ ನಡೆಯದಂತೆ ನೋಡಿಕೊಳ್ಳಲಾಗುವುದು. ಘಟನೆಗೆ ಸಂಬಂಧಿಸಿದಂತೆ ಇನ್ನು ಹಲ​ವ​ರನ್ನು ಬಂಧಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಡಿಎಸ್ಪಿ ಶಂಕರ ರಾಗಿ ಇದ್ದರು.

ಬ್ಯಾಂಕ್‌ ದರೋಡೆ ಮಾಡಿದವನ ಸಿನಿಮೀಯ ರೀತಿ ಬಂಧನ

ಹು​ಬ್ಬ​ಳ್ಳಿ: ಹಾಡಹಗಲೇ ಇಲ್ಲಿನ ಕೊಪ್ಪಿಕರ ರಸ್ತೆ ಎಸ್‌ಬಿಐಗೆ(State Bank of India) ಬಂದಾತ ಮ್ಯಾನೇಜರ್‌ ಹಾಗೂ ಕ್ಯಾಶಿಯರ್‌ಗೆ ಏಕಾಏಕಿ ಚೂರಿ ತೋರಿಸಿ ಬೆದರಿಸಿ 6.39 ಲಕ್ಷ ದರೋಡೆ(Robbery) ಮಾಡಿಕೊಂಡು ಪರಾರಿ ಆಗುವಾಗ ಬೆನ್ನಟ್ಟಿದ ಇಬ್ಬರು ಪೊಲೀಸರು(Police) ಆತನನ್ನು ಸಿನಿಮೀಯ ರೀತಿ ಬಂಧಿಸಿದ್ದಾರೆ(Arrest).
 

Follow Us:
Download App:
  • android
  • ios