Asianet Suvarna News Asianet Suvarna News

ಹೊರಗೆ ಪಾನ್ ಒಳಗೆ 'ಲಕ್ಷ್ಮಿ' ಬ್ಯಾಕಾಂಕ್‌ಗೆ ಹೊರಟವ ಏರ್‌ಪೋರ್ಟ್‌ನಲ್ಲಿ ಅಂದರ್

 ಪಾನ್ ಮಸಾಲದ ಕವರ್ ಒಳಗೆ 40 ಸಾವಿರ ಡಾಲರ್ ಹಣವನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕೋಲ್ಕತ್ತಾದ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. 

32 lakhs worth of cash smuggled inside paan masala packet: Bangkok bound man arrested at Kolkata airport akb
Author
First Published Jan 9, 2023, 10:09 PM IST

ಕೋಲ್ಕತ್ತಾ: ಪಾನ್ ಮಸಾಲದ ಕವರ್ ಒಳಗೆ 40 ಸಾವಿರ ಡಾಲರ್ ಹಣವನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕೋಲ್ಕತ್ತಾದ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.  ಬಂಧಿತ ವ್ಯಕ್ತಿ ಕೋಲ್ಕತ್ತಾದಿಂದ ಬ್ಯಾಕಾಂಕ್‌ಗೆ ಹೊರಟಿದ್ದ, ಪಾನ್ ಮಸಾಲ ಪ್ಯಾಕೇಟ್ ಒಳಭಾಗದಲ್ಲಿ 40 ಸಾವಿರ ಡಾಲರ್ ಅಂದರೆ ಸುಮಾರು 32  ಲಕ್ಷದ 78 ಸಾವಿರ ರೂಪಾಯಿ ಮೌಲ್ಯದ ಡಾಲರ್ ಬಿಲ್‌ಗಳನ್ನು ತುಂಬಾ ನೀಟ್ ಆಗಿ ಜೋಡಿಸಿ ಪಿನ್ ಮಾಡಲಾಗಿತ್ತು. ಇದರ ಜೊತೆಗೆ ಕೆಲವು ಪುಡಿಗಳು ಕೂಡ ಇದ್ದು, ಬಹುಶ ಈ ಹುಡಿಯನ್ನು ಪಾನ್ ಮಸಾಲಾ ಆಗಿರಬಹುದು ಎಂದು ಶಂಕಿಸಲಾಗಿದೆ. 

ಕೋಲ್ಕತ್ತಾ ಕಸ್ಟಮ್ಸ್ ಅಧಿಕಾರಿಗಳು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಕಾಣಿಸುವಂತೆ ಅಧಿಕಾರಿಗಳು ಪ್ರತಿಯೊಂದು ಸಣ್ಣ ಸಣ್ಣ ಪಾನ್ ಮಸಾಲಾದ ಸ್ಯಾಚೆಟ್ ಅನ್ನು ಹರಿದು ಅದರ ಒಳಗಿರುವ ಡಾಲರ್ ನೋಟನ್ನು ಹೊರಗೆ ತೆಗೆಯುತ್ತಿರುವುದನ್ನು ಕಾಣಬಹುದು.  ಪುಟ್ಟ ಪುಟ್ಟ ಪಾನ್ ಮಸಾಲಾ ಸ್ಯಾಚೆಟ್ ಒಳಗೆ ಡಾಲರ್ ಗಳನ್ನು ನೀಟ್ ಆಗಿ ಮಡಚಿ ತುಂಬಿಸಿ ಸೀಲ್ ಮಾಡಲಾಗಿದ್ದು, ಮೇಲ್ನೋಟಕ್ಕೆ ಇದು  ಐದು ರೂಪಾಯಿಯ  ಪಾನ್ ಪ್ಯಾಕೆಟ್‌ನಂತೆ ಕಾಣಿಸುತ್ತಿದೆ. ಕಸ್ಟಮ್ಸ್ ಅಧಿಕಾರಿಗಳು ಇದನ್ನು  ನಿಧಾನವಾಗಿ ಒಂದೊಂದೆ ಸ್ಯಾಚೆಟ್ ಅನ್ನು ಹರಿದು ಅದರ ಒಳಗೆ ಮಡಚಿಟ್ಟ ಡಾಲರ್‌ಗಳನ್ನು ಹೊರ ತೆಗೆಯುತ್ತಿದ್ದಾರೆ.  ಒಟ್ಟಿನಲ್ಲಿ ಖದೀಮನ ಕಿತಾಪತಿಗೆ ಕಸ್ಟಮ್ಸ್ ಅಧಿಕಾರಿಯೊಬ್ಬರಿಗೆ ದಿನವಿಡೀ ಕೆಲಸ ಸಿಕ್ಕಿದ್ದಂತು ನಿಜ.

ಪಾನ್ ಮಸಾಲ ಜಾಹೀರಾತು ನಿರಾಕರಿಸಿ ಮಾದರಿಯಾದ ಪ್ಯಾನ್ ಇಂಡಿಯಾ ಸ್ಟಾರ್ ಯಶ್

ಈ ವ್ಯಕ್ತಿ ಕೋಲ್ಕತ್ತಾದಿಂದ  ಥೈಲ್ಯಾಂಡ್‌ನ ಬ್ಯಾಕಾಂಕ್‌ಗೆ ಹೊರಟಿದ್ದ. ಈ  ಪಾನ್ ಮಸಾಲಾ ಸ್ಯಾಚೆಟ್‌ನಲ್ಲಿ ಅಡಗಿದ್ದ ಒಟ್ಟು, 32 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಏರ್‌ಪೋರ್ಟ್‌ನಲ್ಲಿ ಚೆಕ್ ಇನ್ ಆದ ಲಗೇಜ್ ಅನ್ನು ತಪಾಸಣೆಗೆ ಒಳಪಡಿಸಿದಾಗ ಇದು ಪತ್ತೆಯಾಗಿದೆ. ಕೆಲದಿನಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempegowda International Airport ) ಗುದನಾಳದಲ್ಲಿ  ( rectum) ಅರ್ಧ ಕೇಜಿಯಷ್ಟು ಚಿನ್ನದ ಪೇಸ್ಟ್‌ ಅನ್ನು ಬಚ್ಚಿಟ್ಟುಕೊಂಡು ಬಂದ  ಘಟನೆ ಇತ್ತೀಚೆಗೆ ನಡೆದಿತ್ತು.  ಮಾಲ್ಡೀವ್ಸ್‌ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕನೋರ್ವ ಈ ಕಿತಾಪತಿ ಮಾಡಿದ್ದ. 

ಮಾನವ ಕಳ್ಳ ಸಾಗಣೆ: ಗಾಯಕ ದಲೇರ್ ಮೆಹಂದಿಗೆ 2 ವರ್ಷ ಜೈಲು

ಡಿಸೆಂಬರ್ 30, ರಂದು ಈ ಘಟನೆ ನಡೆದಿತ್ತು. ಪ್ರಯಾಣಿಕನ ಕಷ್ಟಪಟ್ಟು ನಡೆಯುತ್ತಿರುವುದನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಹಿಡಿದು ತಪಾಸಣೆ ನಡೆಸಿದಾಗ 
ಗುದನಾಳದಲ್ಲಿ ಬಂಗಾರದ ಪೇಸ್ಟ್ ಇರುವುದು ಕಾಣಿಸಿತ್ತು.  ಸ್ಕ್ಯಾನ್ ಮಾಡಿದ ಅಧಿಕಾರಿಗಳಿಗೆ ಈತನ ಗುದನಾಳದಲ್ಲಿ ಮೂರು ಚಿನ್ನದ ಪೇಸ್ಟ್‌ನ ( gold paste) ಗಟ್ಟಿ ಪತ್ತೆಯಾಗಿದ್ದವು. ನಂತರ ಆತನ ಗುದನಾಳದಲ್ಲಿದ್ದ ಚಿನ್ನದ ಪೇಸ್ಟ್‌ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಈ ಚಿನ್ನದ ಪೇಸ್ಟ್ ಮೌಲ್ಯ 28 ಲಕ್ಷ ರೂಪಾಯಿಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.  ಬೆಂಗಳೂರು (Bengaluru) ಹಾಗೂ ಮಂಗಳೂರು ವಿಮಾನ ನಿಲ್ದಾಣ (Mangaluru airport) ಸೇರಿ ಕೇವಲ ಡಿಸೆಂಬರ್ ತಿಂಗಳೊಂದರಲ್ಲಿಯೇ  ಹೀಗೆ ಕಳ್ಳಸಾಗಣೆಯಾಗಿ ವಿದೇಶದಿಂದ ಬಂದ ನಾಲ್ಕು ಕೇಜಿ  ಮೊತ್ತದ ಚಿನ್ನಾಭರಣವನ್ನು (gold) ವಶಕ್ಕೆ ಪಡೆದಿದ್ದಾರೆ.  ಜೊತೆಗೆ ಒಟ್ಟು ಆರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

 

 

Follow Us:
Download App:
  • android
  • ios