ಬಾಲಕಿ ಜೊತೆ ಬಲವಂತದ ಮದುವೆ: ತಾಯಿ-ಮಗನಿಗೆ 20 ವರ್ಷ ಕಠಿಣ ಶಿಕ್ಷೆ!

ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ. 

Forced marriage with a minor girl 20 years of punishment for mother son at chamarajanagar rav

ಚಾಮರಾಜನಗರ (ಮಾ.5): ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ. 

ತಮಿಳುನಾಡಿನ(Tamilunadu) ತಿರಚಂಗೂರು(Tirachanguru) ತಾಲೂಕಿನ ಶರಣ್‌ ರಾಜ್‌(Sharanraj)(25) ಹಾಗೂ ಈತನ ತಾಯಿ ಸೆಲ್ವಿ(40) ಶಿಕ್ಷೆಗೊಳಗಾದ ಅಪರಾಧಿಗಳು. 

ಲೋಕಾಯುಕ್ತ ದಾಳಿ: ಫೈಲ್ ಒಳಗೆ ಹಣ ಇಡು ಎಂದು ಪರಾರಿಯಾದ ಕಾರ್ಮಿಕ ಇಲಾಖೆ ನೀರೀಕ್ಷಕ

14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಬೈಕಿನಲ್ಲಿ ಹತ್ತಿಸಿಕೊಂಡು ಕರೆದೊಯ್ದು ಬಲವಂತದಿಂದ ಮದುವೆಯಾಗಿ, ಲೈಂಗಿಕ ದೌರ್ಜನ್ಯ(Sexual assault) ಎಸಗಿದ್ದರಿಂದ ನ್ಯಾ. ನಿಶಾರಾಣಿ, ತಾಯಿ ಹಾಗೂ ಮಗನಿಗೆ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

2018 ರಲ್ಲಾಗಿತ್ತು ಈ ಮದುವೆ:

ಶರಣ್‌ ರಾಜ್‌ ಎಲೆಕ್ಟ್ರೆಷಿಯನ್‌ ಕೆಲಸ ಮಾಡಿಕೊಂಡಿದ್ದು ತಾಯಿ ಸೆಲ್ವಿ ಪೇಪರ್‌ ಮಿಲ್‌ ನಲ್ಲಿ ನೌಕರಿ ಮಾಡುತ್ತಿದ್ದರು. 2018 ರ ಸೆ. 9 ರಂದು ಹನೂರು ತಾಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿಯನ್ನು ಶರಣ್‌ ರಾಜ್‌ ತನ್ನ ಬೈಕಿನಲ್ಲಿ ಪುಸಲಾಯಿಸಿ ಕರೆದೊಯ್ದಿದ್ದ. ಬಳಿಕ, ಆಕೆ ಜೊತೆ ಬಲವಂತದಿಂದ ಮದುವೆಯನ್ನೂ ಮಾಡಿಕೊಂಡು ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದನು.

ಕೃತ್ಯಕ್ಕೆ ತಾಯಿ ಸೆಲ್ವಿ ಮತ್ತು ಶಶಿಕುಮಾರ್‌ ಎಂಬವರು ಸಹಕರಿಸಿದ್ದರು. ಈ ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟಪೊಲೀಸ್‌ ಠಾಣೆಯಲ್ಲಿ ಅಂದಿನ ಇನ್ಸೆ$್ಪಕ್ಟರ್‌ ಬಿ.ಮಹೇಶ್‌ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ( ಕೃತ್ಯದ ಶಶಿಕುಮಾರ್‌ ಎಂಬಾತ ತಲೆ ಮರೆಸಿಕೊಂಡಿದ್ದಾನೆ) ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು.

ವಾದ-ಪ್ರತಿವಾದ ನಡೆದು ಆರೋಪಿಗಳ ವಿರುದ್ಧ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ತಾಯಿ-ಮಗನಿಗೆ ನ್ಯಾ.ನಿಶಾರಣಿ ತಲಾ 20 ವರ್ಷ ಕಠಿಣ ಶಿಕ್ಷೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಜೊತೆಗೆ, ಕಾನೂನು ಸೇವಾ ಪ್ರಾಧಿಕಾರವು ನೊಂದ ಬಾಲಕಿಗೆ 1 ಲಕ್ಷ ರು. ಪರಿಹಾರವನ್ನು 30 ದಿನದೊಳಗೆ ಕೊಡಬೇಕೆಂದು ಆದೇಶಿಸಿದ್ದಾರೆ.

ಅಪ್ರಾಪ್ತೆ ಮದುವೆ ಮಾಡಿಕೊಡುವಂತೆ ರಂಪಾಟ: ಲಾಂಗ್‌ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ ಭೂಪ

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್‌ ವಾದ ಮಂಡಿಸಿದ್ದರು.

Latest Videos
Follow Us:
Download App:
  • android
  • ios