*  ಮದ್ಯ ಸೇವಿಸಿ ಕರ್ತವ್ಯ ಪ್ರಶ್ನಿಸಿದ್ದಕ್ಕೆ ಇರಿದು ಕೊಂದ*  ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಚೇತನ್‌*  ಆರೋಪಿಯನ್ನ ಬಂಧಿಸಿದ ಪೊಲೀಸರು  

ಬೆಂಗಳೂರು(ನ.11): ಮದ್ಯ(Alcohol) ಸೇವಿಸಿ ಕೆಲಸ ಮಾಡುತ್ತಿದ್ದನ್ನು ಪ್ರಶ್ನಿಸಿದ ಅಪಾರ್ಟ್‌ಮೆಂಟ್‌(Apartment) ನಿವಾಸಿಯೊಬ್ಬರನ್ನು ಅದೇ ಅಪಾರ್ಟ್‌ಮೆಂಟ್‌ ಕಾವಲುಗಾರ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಎಚ್‌ಎಎಲ್‌ ಸಮೀಪ ಬುಧವಾರ ನಡೆದಿದೆ.

ಎಸಿಎಸ್‌ ಲೇಔಟ್‌ ‘ಡಿ’ ಬ್ಲಾಕ್‌ನ ಪದ್ಮಾ ಅಪಾರ್ಟ್‌ಮೆಂಟ್‌ನ ನಿವಾಸಿ, ಭಾಸ್ಕರ್‌ ರೆಡ್ಡಿ (65) ಕೊಲೆಯಾದ(Murder) ದುರ್ದೈವಿ. ಘಟನೆ ಸಂಬಂಧ ನೇಪಾಳ ಮೂಲದ ಕಾವಲುಗಾರ(Security Guard) ಬಸಂತ್‌ನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ(Arrest). ಕ್ಷುಲ್ಲಕ ವಿಚಾರಕ್ಕೆ ಬೆಳಗ್ಗೆ ರೆಡ್ಡಿ ಮತ್ತು ಬಸಂತ್‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಕೆರಳಿದ ಆತ, ರೆಡ್ಡಿ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ(Death).

ಮೃತ ಭಾಸ್ಕರ್‌ ರೆಡ್ಡಿ ಅವರು, ಎಚ್‌ಎಎಲ್‌ ಸಮೀಪದ ದೊಡ್ಡನೆಕ್ಕುಂದಿಯವರು. ಎರಡು ವರ್ಷಗಳಿಂದ ತಮ್ಮ ಪುತ್ರನ ಕುಟುಂಬದ ಜತೆ ಪದ್ಮಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಈ ಅಪಾರ್ಟ್‌ಮೆಂಟ್‌ನಲ್ಲಿ 9 ಫ್ಲ್ಯಾಟ್‌ಗಳಿದ್ದು(Flat), ಎರಡೇ ಹಂತದಲ್ಲಿ ರೆಡ್ಡಿ ಕುಟುಂಬ ನೆಲೆಸಿತ್ತು. ಭಾಸ್ಕರ್‌ ರೆಡ್ಡಿ ಈ ಅಪಾರ್ಟ್‌ಮೆಂಟ್‌ನ ಸಂಘದ ಸದಸ್ಯರಾಗಿದ್ದರು. ಇದೇ ಅಪಾರ್ಟ್‌ಮೆಂಟ್‌ನಲ್ಲಿ ಮೂರು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್‌ ಆಗಿ ಬಸಂತ್‌ ಕೆಲಸ ಮಾಡುತ್ತಿದ್ದು, ಅಪಾರ್ಟ್‌ಮೆಂಟ್‌ ಕೆಳಮಹಡಿಯಲ್ಲಿ ಆತ ವಾಸವಾಗಿದ್ದ ಎಂದು ಪೊಲೀಸರು(Police) ತಿಳಿಸಿದ್ದಾರೆ.

Suvarna FIR: ಲೈಂಗಿಕವಾಗಿ ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಟಿಕ್‌ಟಾಕ್ ಸುಂದರಿ

ಮದ್ಯ ವ್ಯಸನಿ ಆಗಿದ್ದ ಬಸಂತ್‌, ಪ್ರತಿ ದಿನ ರಾತ್ರಿ ಕರ್ತವ್ಯದ ವೇಳೆ ಪಾನಮತ್ತನಾಗಿರುತ್ತಿದ್ದ. ಇದನ್ನು ಗಮನಿಸಿದ ಭಾಸ್ಕರ್‌ ರೆಡ್ಡಿ ಅವರು, ಬಸಂತ್‌ಗೆ ಕುಡಿದು ಕೆಲಸ ಮಾಡದಂತೆ ಎಚ್ಚರಿಸಿದ್ದರು. ಆದರೂ ತನ್ನ ವರ್ತನೆಯನ್ನು ಬದಲಾಯಿಸಿಕೊಂಡಿರಲಿಲ್ಲ. ಇದರಿಂದ ಬೇಸರಗೊಂಡ ಅವರು, ಬುಧವಾರ ಬೆಳಗ್ಗೆ ಕಾವಲುಗಾರನಿಗೆ ಏರಿದ ದನಿಯಲ್ಲಿ ಕುಡಿದು ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಬೇಡ. ಹೀಗೆ ಆದರೆ ಕೆಲಸದಿಂದ ತೆಗೆಯುವುದಾಗಿ ಎಚ್ಚರಿಸಿದ್ದರು. ಈ ಮಾತಿಗೆ ಕೋಪಗೊಂಡ ಆತ, ಏಕಾಏಕಿ ತನ್ನ ಬಳಿಯಿದ್ದ ಚಾಕುವಿನಿಂದ ರೆಡ್ಡಿ ಅವರ ಕುತ್ತಿಗೆಗೆ ಇರಿದಿದ್ದಾನೆ. ಚಾಕು ಇರಿತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. 

ಈ ಬಗ್ಗೆ ಪೊಲೀಸರಿಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿ ಪರಾರಿಯಾಗುವ ಮುನ್ನ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಎಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಸಾಲ ವಾಪಸ್‌ ನೀಡದ್ದಕ್ಕೆ ವಾಹನ ಗುದ್ದಿಸಿ ಕೊಲೆ!

ಪುತ್ರಿಯ ಹುಟ್ಟುಹಬ್ಬದ ಮುನ್ನಾ ದಿನವೇ ತಂದೆ ಆತ್ಮಹತ್ಯೆಗೆ ಶರಣು

ಪೀಣ್ಯ ದಾಸರಹಳ್ಳಿ: ಮಗಳ ಮೂರು ವರ್ಷದ ಹುಟ್ಟುಹಬ್ಬದ(Birthday) ಮುನ್ನಾ ದಿನವೇ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು(Bengaluru) ಉತ್ತರ ತಾಲೂಕು ಚಿಕ್ಕಬಾಣವಾರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಾಣವಾರ ನಿವಾಸಿ ಚೇತನ್‌ (27) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಖಾಸಗಿ ಕಂಪನಿಯಲ್ಲಿ ನೌಕರನಾಗಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆ ತುಮಕೂರು(Tumakuru) ಮೂಲದ ಉಪನ್ಯಾಸಕಿ ನವ್ಯಾ ಎಂಬುವರನ್ನು ಫೇಸ್‌ಬುಕ್‌ನಲ್ಲಿ(Facebook) ಪರಿಚಯ ಮಾಡಿಕೊಂಡಿದ್ದ. ಬಳಿಕ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ, ದಂಪತಿಗೆ ಮುದ್ದಾದ ಹೆಣ್ಣು ಮಗು ಇತ್ತು.

ಮದುವೆಯಾದ ಕೆಲ ದಿನಗಳಲ್ಲಿ ಸಂಸಾರದಲ್ಲಿ ಕೌಟುಂಬಿಕ ಕಲಹ ಶುರುವಾಗಿದ್ದು, ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದರು. ಮೊದಲನೇ ವಿವಾಹದ ವಿಚ್ಚೇದನ(Divorce) ಇನ್ನೂ ಕೋರ್ಟ್‌ನಲ್ಲಿ(Court) ಇರುವಾಗಲೇ ಚೇತನ್‌ ಫೇಸ್‌ಬುಕ್‌ನಲ್ಲಿ ಹೈದರಾಬಾದ್‌(Hyderabad) ಮೂಲದ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಆಕೆಯನ್ನು ಮದುವೆ ಆಗಲು ಮುಂದಾಗಿದ್ದ. ಈ ನಡುವೆ ಮೊದಲನೇ ಮದುವೇ ವಿಚಾರ ಪ್ರೇಯಸಿಗೆ ತಿಳಿದು ಈತನೊಂದಿಗೆ ಜಗಳ ಆಡಿದ್ದಳು. ನಂತರ ತ್ರಿಕೋನ ಸರಣಿಯಲ್ಲಿ ಚೇತನ್‌ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.