ವಿಚಾರಣಾಧೀನ ಕೈದಿಗಳ ಹಲ್ಲೆ ಕೇಸ್, ಶಿವಮೊಗ್ಗ ಜೈಲು ಅಧೀಕ್ಷಕರ ವಿರುದ್ಧ ಕೇಸ್ ಬುಕ್
ಶಿವಮೊಗ್ಗ ಜಿಲ್ಲೆಯಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇವೆ. ಹಿಜಾಬ್ ಬೆನ್ನಲ್ಲೇ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ನಡೆದಿತ್ತು. ಇದೀಗ ವಿಚಾರಣಾಧೀನ ಕೈದಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜೈಲು ಅಧೀಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶಿವಮೊಗ್ಗ, (ಮಾ.08): ಶಿವಮೊಗ್ಗ ಜಿಲ್ಲೆಯಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇವೆ. ಹಿಜಾಬ್ ಬೆನ್ನಲ್ಲೇ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ನಡೆದಿತ್ತು. ಇದೀಗ ವಿಚಾರಣಾಧೀನ ಕೈದಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜೈಲು ಅಧೀಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವ್ಯಕ್ತಿಯ ಮೇಲೆ ಅನ್ಯಕೋಮಿನಿಂದ ಹಲ್ಲೆ: ಶಿವಮೊಗ್ಗದಲ್ಲಿ ಮತ್ತೆ ಆತಂಕ
ಕೈದಿಗಳಿಂದಲೇ ಶಿವಮೊಗ್ಗ ಜೈಲು ಅಧೀಕ್ಷಕ ಮಹೇಶ್ ಜಿಗಣಿ ವಿರುದ್ಧ ದೂರು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಮಹೇಶ್ ಜಿಗಣಿ ಕೇಸ್ ಬುಕ್ ಆಗಿದೆ. ಅಲ್ಲದೇ ಮಹೇಶ್ ಜಿಗಣಿ ಅವರನ್ನ ಶಿವಮೊಗ್ಗ ಜೈಲು ಅಧೀಕ್ಷಕ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ.