*  ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಗೆ ಥಳಿತ, ಆಸ್ಪತ್ರೆಗೆ ದಾಖಲು*  ವೆಂಕಟೇಶ ಬಳಿ ವಿನಾಕಾರಣ ಜಗಳಕ್ಕಿಳಿದ ಅನ್ಯ ಕೋಮಿನ ಐದಾರು ಯುವಕರು*  ಶಾಂತಿ, ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕ್ರಮ ಜರುಗಿಸಿ 

ಶಿವಮೊಗ್ಗ(ಮಾ.04): ಗೋಪಾಳ ಬಡಾವಣೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿ ಮೇಲೆ ಅನ್ಯಕೋಮಿನ ಕೆಲ ಯುವಕರು ಕಲ್ಲುಗಳಿಂದ ತೀವ್ರ ಹಲ್ಲೆ(Assault) ನಡೆಸಿರುವ ಘಟನೆ ನಡೆದಿದ್ದು, ಹರ್ಷ ಹತ್ಯೆಯಿಂದ(Harsha Murder) ಉದ್ವಿಗ್ನಗೊಂಡು ಇದೀ​ಗ ಸಹಜ ಸ್ಥಿತಿಗೆ ಮರ​ಳು​ತ್ತಿದ್ದ ನಗರದಲ್ಲಿ ಮತ್ತೆ ಆತಂಕ ಮೂಡಿದೆ.

ವೆಂಕಟೇಶ್‌ (48) ಹಲ್ಲೆಗೊಳಗಾದವರು. ಗುರುವಾರ ಸಂಜೆ ಬಡಾವಣೆಯ ಪದ್ಮಾ ಟಾಕೀಸ್‌ ಸಮೀಪದ ಸರ್ಕಾರಿ ಶಾಲೆ ಬಳಿ ತಮ್ಮ ಸಾಕು ನಾಯಿಯೊಂದಿಗೆ ವಾಯುವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅನ್ಯ ಕೋಮಿನ ಐದಾರು ಯುವಕರು ವೆಂಕಟೇಶ ಬಳಿ ವಿನಾಕಾರಣ ಜಗಳಕ್ಕಿಳಿದ್ದಾರೆ. ಬಳಿಕ ವೆಂಕಟೇಶ್‌ ತಲೆಗೆ ಕಲ್ಲುಗಳಿಂದ ಜಜ್ಜಿದ್ದಾರೆ.

Shivamogga: ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರು. ಘೋಷಣೆ

ವೆಂಕಟೇಶ್‌ ಅವ​ರಿಗೆ ಗಂಭೀ​ರ​ವಾದ ಏಟು​ಬಿ​ದ್ದಿ​ರುವ ಹಿನ್ನೆ​ಲೆ​ಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಂಸದ ಬಿ.ವೈ.​ರಾ​ಘ​ವೇಂದ್ರ, ಬಿಜೆಪಿ ಮುಖಂಡ ಎಸ್‌. ದತ್ತಾತ್ರಿ, ಬಜರಂಗದಳ ಪ್ರಮುಖ ದಿನದಯಾಳು ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಶಾಂತಿ, ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕ್ರಮ ಜರುಗಿಸಿ: ಸಂಸದ

ಶಿವಮೊಗ್ಗ: ಶಾಂತಿ- ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಸದ ಬಿ.ವೈ. ರಾಘವೇಂದ್ರ(BY Raghavendra) ಪೊಲೀಸರಿಗೆ(Police) ಸೂಚನೆ ನೀಡಿದ್ದಾರೆ.
ಅನ್ಯಕೋಮಿನ ಕೆಲ ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೆಂಕಟೇಶ್‌ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಳೆದ ಕೆಲ ದಿನಗಳ ಹಿಂದೆ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯಿಂದಾಗಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಸಿತ್ತು. ಇದೀಗ ಪರಿಸ್ಥಿತಿ ಶಾಂತಸ್ಥಿತಿಗೆ ಬರುತ್ತಿದೆ. ಈ ಸಂದರ್ಭದಲ್ಲಿಯಯೇ ಕೆಲ ಕಿಡಿಗೇಡಿಗಳು ವಾಯುವಿಹಾರ ನಡೆಸುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದ್ದಾರೆ. ಈ ರೀತಿ ಘಟನೆ ಪುನರಾವರ್ತಿತವಾಗಬಾರದು. ಪೊಲೀಸ್‌ ಇಲಾಖೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ವೆಂಕಟೇಶ್‌ ಎಂಬುವವರು ವಾಕಿಂಗ್‌ಗೆ ಹೋದ ಸಂದರ್ಭದಲ್ಲಿ ನಾಲ್ಕರಿಂದ ಐದು ಜನರಿದ್ದ ತಂಡ ವೆಂಕಟೇಶ್‌ ಅವರನ್ನು ಹಗುರವಾದ ಮಾತುಗಳಿಂದ ಹೀಯಾಳಿಸಿದೆ. ಅಲ್ಲದೇ , ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಇಂತಹ ಕೆಟ್ಟಪ್ರವೃತ್ತಿ ಕೊನೆಯಾಗಬೇಕು. ಪೊಲೀಸ್‌ ಇಲಾಖೆ ಸರಿಯಾದ ರಕ್ಷಣೆ ಕೊಡದೇ ಹೋದರೆ ಜನರೇ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.

'ಬಿಜೆಪಿ ಹರ್ಷನ ತಂಗಿಗೆ MLA, ತಾಯಿಗೆ MP ಟಿಕೆಟ್ ಕೊಡಲಿ, ಅವಿರೋಧವಾಗಿ ಆಯ್ಕೆ ಮಾಡಿಸೋಣ'

ಕಿಡಿಗೇಡಿಗಳಿಗೆ ಭಯ ಬರದಿದ್ದರೆ ಈ ರೀತಿ ಕಾನೂನು ಉಲ್ಲಂಘನೆ(Violation of the Law) ಮಾಡುತ್ತಾರೆ. ಇದಕ್ಕೆ ಕೊನೆ ಹಾಡಬೇಕು. ನಮ್ಮ ಸಂಘಟನೆ ಕೂಡ ಈ ದಿಕ್ಕಿನಲ್ಲಿ ಚಿಂತನೆ ಮಾಡುತ್ತದೆ. ಇಂತಹ ಕೃತ್ಯ ಎಸಗುವವರಿಗೆ ದೇವರೇನು ಮೈಮೇಲೆ ಬರುತ್ತಾನೋ ಅಥವಾ ದುಷ್ಚಟಕ್ಕೆ ಬಲಿಯಾಗಿ ಇಂತಹ ಹೀನಕೃತ್ಯ ನಡೆಸುತ್ತಾರೋ ಗೊತ್ತಿಲ್ಲ. ಶಿವಮೊಗ್ಗ(Shivamogga) ನಗರದಲ್ಲಿ ಗಾಂಜಾ(Marijuana) ಹಾವಳಿ ವಿಪರೀತವಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಪೊಲೀಸರು ಸರಿಯಾದ ಕ್ರಮ ಜರುಗಿಸಬೇಕು. ರಾಕ್ಷಸಿ ಪ್ರವೃತ್ತಿಗೆ ಕೊನೆ ಹಾಡಬೇಕು ಎಂದು ಹೇಳಿದರು.

ಹರ್ಷ ಕುಟುಂಬಕ್ಕೆ ಬಿಜೆಪಿ ಟಿಕೆಟ್‌ ಇಲ್ಲ: ಆರಗ

ತುಮಕೂರು: ಹರ್ಷನ ಕುಟುಂಬಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದೇವೆ. ಕಾಂಗ್ರೆಸ್‌ ಆಧಾರರಹಿತ ಟೀಕೆ ಮಾಡುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಸ್ಥರಿಗೆ ಬಿಜೆಪಿಯಿಂದ ಟಿಕೆಟ್‌ ಕೊಡುವ ವಿಚಾರದ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಯಾರೋ ಹೇಳುತ್ತಾರೆಂದು ಸತ್ತವರ ಕುಟುಂಬದವರಿಗೆ ಟಿಕೆಟ್‌ ಕೊಡುತ್ತಾರಾ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸತ್ತವರ ಕುಟುಂಬದವರಿಗೆಲ್ಲಾ ಟಿಕೆಟ್‌ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.