*  ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್ ದಾಖಲು,ಹಳೆ ಕೇಸ್ ಗೆ ಹೊಸ ಟ್ವಿಸ್ಟ್ *  ಡ್ರಗ್ ಕೇಸ್ ಬೆನ್ನಲ್ಲೆ ಮತ್ತೊಂದು ಕೇಸ್ನಲ್ಲಿ ಸಂಜನಾ ಗಲ್ರಾನಿ *  ಮಾಡೆಲ್ ವಂದನಾ ಜೈನ್ ನೀಡಿದ ದೂರಿನ್ವಯ ಎಫ್ಐಆರ್ * ನ್ಯಾಯಾಲಯದ ಆದೇಶದಂತೆ ಕ್ರಮ ತೆಗೆದುಕೊಂಡ ಪೊಲೀಸರು

ಬೆಂಗಳೂರು (ಮೇ 13)  ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.  ಹಳೆ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಡ್ರಗ್ ಕೇಸ್ ಬೆನ್ನಲ್ಲೆ ಮತ್ತೊಂದು ಕ ಪ್ರಕರಣ ಸಂಜನಾ ಬೆನ್ನು ಹತ್ತಿದೆ.

ಮಾಡೆಲ್ ವಂದನಾ ಜೈನ್ ನೀಡಿದ ದೂರಿನ್ವಯ ಎಫ್ಐಆರ್ ದಾಖಲಾಗಿದೆ ನ್ಯಾಯಾಲಯದ ಪಿಸಿಆರ್ ಹಿನ್ನೆಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.  2019 ರಲ್ಲಿ ಲ್ಯಾವೆಲ್ಲೆ ರಸ್ತೆಯ ಕ್ಲಬ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಪ್ರಕರಣ ಇದು. ಗೆಳೆಯನ ಜೊತೆ ಕ್ಲಬ್ ಗೆ ತೆರಳಿದ್ದ ವಂದನಾ ಮತ್ತು ಅದೇ ವೇಳೆ ಅಲ್ಲಿದ್ದ ನಟಿ ಸಂಜನಾ ಗಲ್ರಾನಿ ನಡುವೆ ಗಲಾಟೆ ನಡೆದಿತ್ತು.

ಸಂಜನಾ ರಂಜಾನ್ ಆಚರಣೆ ಮಾಡುತ್ತಾರೆ

ವಂದನಾ ಜೈನ್ ವಿರುದ್ಧ ಅವಹೇನಕಾರಿ ಹೇಳಿಕೆ ಕೊಟ್ಟಿದ್ದ ಸಂಜನಾ  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವೇಳೆ ವಂದನಾ ಮುಖಕ್ಕೆ  ಮದ್ಯ ಎರಚಿ, ಸಂಜನಾ ಹಲ್ಲೆ ನಡೆಸಿದ್ದಾರೆ ಎಂದು ವಂದನಾ ಆರೋಪಿಸಿದ್ದರು. ಘಟನೆಯಲ್ಲಿ  ನನ್ನ ಕಣ್ಣಿಗೆ ಗಾಯವಾಗಿದೆ ಎಂದು ವಂದನಾ ಜೈನ್   ಹೇಳಿದ್ದರು.