Asianet Suvarna News Asianet Suvarna News

Fingerprint Fraud: ಮತ ಚಲಾವಣೆ ವೇಳೆ ವಂಚನೆ : ಸಾವಿರಾರು ರುಪಾಯಿ ಹಣ ಕಳೆದುಕೊಂಡ ಮಹಿಳೆಯರು!

*ಬಿಹಾರದ ಪಂಚಾಯತ್‌ ಚುನಾವಣೆ ವೇಳೆ  ಘಟನೆ
*ಬಯೋಮೆಟ್ರಿಕ್‌ನಲ್ಲಿ ಫಿಂಗರ್‌ಪ್ರಿಂಟ್‌ ಪಡೆದು ವಂಚನೆ
*ಪಾಸ್‌ಬುಕ್‌ ಎಂಟ್ರಿ ಮಾಡಲು ಬ್ಯಾಂಕ್‌ಗೆ ಮುಗಿ ಬಿದ್ದ ಜನ!

Fingerprint Fraud many women loose money after casting votes in bihar panchayat polls Purniya District mnj
Author
Bengaluru, First Published Dec 5, 2021, 10:09 AM IST
  • Facebook
  • Twitter
  • Whatsapp

ಪಟನಾ (ಡಿ. 05) : ಇತ್ತೀಚೆಗೆ ನಡೆದ ಬಿಹಾರ ಪಂಚಾಯತ್‌ ಚುನಾವಣೆಯಲ್ಲಿ (Bihar Panchayat Elections) ಮತದಾನ ಮಾಡಿದ (Vote) ಕೆಲ ಮಹಿಳೆಯರು, ಮತ ಚಲಾಯಿಸಿ ಕೆಲ ಹೊತ್ತಿನಲ್ಲೇ ತಮ್ಮ ಬ್ಯಾಂಕ್‌ ಖಾತೆಯಲ್ಲಿ (Bank Account) ಇಟ್ಟಿದ್ದ ಸಾವಿರಾರು ರುಪಾಯಿ ಹಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ಪುರ್ನಿಯಾ ಜಿಲ್ಲೆಯ (Purniya District) ಚೋಪ್ರಾ ಪಂಚಾಯತ್‌ನ ರಿಹುವಾ ಗ್ರಾಮದಲ್ಲಿ ನ.29ರಂದು ಪಂಚಾಯತ್‌ ಚುನಾವಣೆಗೆ ಮತದಾನ ನಡೆದಿತ್ತು.

ಚುನಾವಣಾಧಿಕಾರಿಗಳು (Election Officer) ತಾವು ಮತ ಚಲಾವಣೆಗೆ ಬಂದಾಗ ಬಯೋಮೆಟ್ರಿಕ್‌ನಲ್ಲಿ ತಮ್ಮ ಫಿಂಗರ್‌ಪ್ರಿಂಟ್‌ (Finger Print) ಪಡೆದಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕೆನರಾ ಬ್ಯಾಂಕ್‌ನಲ್ಲಿದ್ದ (Canara Bank) ತಮ್ಮ ಹಣವೆಲ್ಲಾ ಮಾಯವಾಗಿದೆ ಎಂದು ಮತ ಚಲಾಯಿಸಿದ 30ಕ್ಕೂ ಹೆಚ್ಚು ಮಹಿಳೆಯರು ದೂರಿದ್ದಾರೆ.

ಪಾಸ್‌ಬುಕ್‌ ಎಂಟ್ರಿಗೆ ಮುಗಿ ಬಿದ್ದ ಜನ!

ಎಲೆಕ್ಟ್ರಾನಿಕ್‌ ಸಾಧನಗಳನ್ನು (Electronic Machines) ಜನ ಸಾಮಾನ್ಯರ ಬ್ಯಾಂಕ್‌ನಲ್ಲಿರುವ ಹಣ ಲಪಾಟಾಯಿಸಲು ದುರುಪಯೋಗ ಪಡಿಸಿಕೊಳ್ಳುವುದು ಅಪರಾಧವಾಗಿದೆ. ಈ ಬಗ್ಗೆ ತಿಳಿದ ಬಳಿಕ ಈ ಕುರಿತು ವಸ್ತುನಿಷ್ಠ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪುರ್ನಿಯಾ ಜಿಲ್ಲಾ ಮ್ಯಾಜಿಸ್ಪ್ರೇಟ್‌ಗೆ (District Magistrate) ಒತ್ತಾಯಿಸಿದ್ದೇವೆ ಎಂದು ಚೋಪ್ರಾ ಪಂಚಾಯತ್‌ ಮುಖ್ಯಸ್ಥ ಜಾವೇದ್‌ ಇಕ್ಬಾಲ್‌ (Javed Iqbal) ಹೇಳಿದರು. ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಗ್ರಾಮದ ಜನರು ಪಾಸ್‌ಬುಕ್‌ ಎಂಟ್ರಿ (Passbook Entry) ಮಾಡಲು ಬ್ಯಾಂಕ್‌ಗೆ ಮುಗಿ ಬಿದ್ದಿದ್ದಾರೆ. ಬ್ಯಾಂಕ್‌ಗೆ ಹೋಗಿ ಪರೀಶಿಲಿಸಿದಾಗ  ಖಾತೆಯಲ್ಲಿ ಹಣವಿಲ್ಲದಿರುವುದ ಪತ್ತೆಯಾಗಿದೆ.

Hawala Money: 2,656 ಬ್ಯಾಂಕ್‌ ಖಾತೆಗೆ ನೂರಾರು ಕೋಟಿ ಹವಾಲ ಹಣ

"ಕ್ಯಾನೆರಾ ಬ್ಯಾಂಕ್‌ನ ನನ್ನ ಖಾತೆಯಲ್ಲಿ  46,000 ರೂಪಾಯಿ ಇತ್ತು. ಆದರೆ ನವೆಂಬರ್‌ 30 ರಂದು ಹಣ ಪಡೆಯಲೆಂದು ಬ್ಯಾಂಕಿಗೆ ಹೋದಾಗ ನನ್ನ ಖಾತೆಯಲ್ಲಿ ಯಾವುದೇ ಹಣ ಇಲ್ಲ ಎಂದು ಕ್ಯಾಶಿಯರ್‌ (Cashier) ಹೇಳಿದರು" ಎಂದು ಹಣ ಕಳೆದುಕೊಂಡ ಮಹಿಳೆಯಲ್ಲೋಬ್ಬರಾದ ದುಖಾನ್‌ ದೇವಿ ಹೇಳಿದ್ದಾರೆ. ಹಣ ಕಳೆದುಕೊಂಡ ಇನ್ನೊಬ್ಬ ಮಹಿಳೆ ವಿದ್ಯಾ ದೇವಿ ತನ್ನ ಖಾತೆಯಲ್ಲಿ 5,000 ರೂಪಾಯಿ ಇತ್ತು ಈಗ ಖಾತೆಯಲ್ಲಿ ಅದು ತೋರಿಸಿತ್ತಿಲ್ಲ ಎಂದು ಹೇಳಿದ್ದಾರೆ. ಈರೀತಿ ಸುಮಾರು 30ಕ್ಕೂ ಅಧಿಕ ಮಹಿಳೆಯರು ತಮ್ಮ ಖಾತೆಯಿಂದ ಹಣ ಕಳೆದುಕೊಂಡ ಬಗ್ಗೆ ಆರೋಪಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ನೇಮಕ: ಹತ್ತು ಮಂದಿ ಅರೆಸ್ಟ್‌

ನಕಲಿ ದಾಖಲೆಗಳನ್ನು(Duplicate Documents) ಸೃಷ್ಟಿಸಿ ಭಾರತೀಯ ಸೇನೆಗೆ(Indian Army) ನೇಮಕಾತಿ ಮಾಡಿಸಿದ ಆರೋಪದ ಮೇರೆಗೆ ಇಬ್ಬರು ಪೊಲೀಸರು ಸೇರಿ ಹತ್ತು ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ATM Robbery: ದರೋಡೆಗೆ ಲವರ್‌ ಸ್ಕೆಚ್‌, ಎಟಿಎಂ ಪಾಸ್‌ವರ್ಡ್‌ ನೀಡಿದ ಪ್ರೇಯಸಿ..!

ಮಹಾರಾಷ್ಟ್ರ(Maharashtra), ಆಂಧ್ರಪ್ರದೇಶ(Andhra Pradesh),ಬೆಂಗಳೂರು ಮೂಲದ ಮನೋಜ್‌ ಅಲಿಯಾಸ್‌ ಮಾರೆಣ್ಣ ಕರ್ಚೇಡು, ಪರಶುರಾಮ ಕಿಳ್ಳಕ್ಯಾತರ, ವೆಂಕಟೇಶ, ಜಂಬಣ್ಣ ಬೆಗಲೂರು, ವೈಭವ ಸಾಂಬಾಜಿ ಮಕಾಳೆ, ನೇತಾಜಿ ರಾಮ ಸಾವಂತ್‌ ಅಲಿಯಾಸ್‌ ಸಾವಂತ್‌, ಮಂಜುನಾಥ ಗೋಡ್ಕೆ ಅಲಿಯಾಸ್‌ ಮನೋಜ್‌, ಅಜಿತ್‌ಕೊಂಡೆ ಕಲೇನಿ, ಬಳ್ಳಾರಿ ಮೂಲದ ಪೊಲೀಸರಾದ ಕೆ. ಅಂಕಲೇಶ್‌ ಮತ್ತು ರಾಮಾಂಜನೇಯ ಅವರನ್ನು ಬಂಧಿಸಲಾಗಿದೆ(Arrest).

ಈ ಪ್ರಕರಣದಲ್ಲಿ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಎರಡು ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್‌ ಕೆ. ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಹಾರಾಷ್ಟ್ರ ಮೂಲದ ಅಜಿತ್‌ಕೊಂಡೆ ಕಲೇನಿ ಎಂಬವರ ದಾಖಲಾತಿ ಪರಿಶೀಲನೆ ವೇಳೆ ಸೇನಾಧಿಕಾರಿಗಳು ತಪ್ಪು ಮಾಹಿತಿ ಬಂದಿರುವುದು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಹಿರೇಹಡಗಲಿ ಠಾಣೆಗೆ ಮರು ಪರಿಶೀಲನೆಗೆ ಕಳುಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಇಡೀ ಪ್ರಕರಣ ಬಹಿರಂಗಗೊಂಡಿದೆ.

Follow Us:
Download App:
  • android
  • ios