Job Fraud Busted: ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ನೇಮಕ: ಹತ್ತು ಮಂದಿ ಅರೆಸ್ಟ್‌

*  ತಲೆ ಮರೆಸಿಕೊಂಡ ಕೆಲ ಆರೋಪಿಗಳು 
*  ನೆರೆಯ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಕಳ್ಳರು
*  ದಾಖಲೆಗಳ ಫೋರ್ಜರಿ ಮಾಡಿ ಪೊಲೀಸ್‌ ವೆರಿಫಿಕೇಶನ್‌ ಮಾಡಿಸಿ ಸೇನೆಗೆ ನೇಮಕ
 

Ten Arrested For Appointment an Indian Army on Duplicate Documents grg

ಹೊಸಪೇಟೆ(ಡಿ.03):  ನಕಲಿ ದಾಖಲೆಗಳನ್ನು(Duplicate Documents) ಸೃಷ್ಟಿಸಿ ಭಾರತೀಯ ಸೇನೆಗೆ(Indian Army) ನೇಮಕಾತಿ ಮಾಡಿಸಿದ ಆರೋಪದ ಮೇರೆಗೆ ಇಬ್ಬರು ಪೊಲೀಸರು ಸೇರಿ ಹತ್ತು ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ(Maharashtra), ಆಂಧ್ರಪ್ರದೇಶ(Andhra Pradesh),ಬೆಂಗಳೂರು ಮೂಲದ ಮನೋಜ್‌ ಅಲಿಯಾಸ್‌ ಮಾರೆಣ್ಣ ಕರ್ಚೇಡು, ಪರಶುರಾಮ ಕಿಳ್ಳಕ್ಯಾತರ, ವೆಂಕಟೇಶ, ಜಂಬಣ್ಣ ಬೆಗಲೂರು, ವೈಭವ ಸಾಂಬಾಜಿ ಮಕಾಳೆ, ನೇತಾಜಿ ರಾಮ ಸಾವಂತ್‌ ಅಲಿಯಾಸ್‌ ಸಾವಂತ್‌, ಮಂಜುನಾಥ ಗೋಡ್ಕೆ ಅಲಿಯಾಸ್‌ ಮನೋಜ್‌, ಅಜಿತ್‌ಕೊಂಡೆ ಕಲೇನಿ, ಬಳ್ಳಾರಿ ಮೂಲದ ಪೊಲೀಸರಾದ ಕೆ. ಅಂಕಲೇಶ್‌ ಮತ್ತು ರಾಮಾಂಜನೇಯ ಅವರನ್ನು ಬಂಧಿಸಲಾಗಿದೆ(Arrest).

ಈ ಪ್ರಕರಣದಲ್ಲಿ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಎರಡು ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್‌ ಕೆ. ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Gold Robbery: ಸಂಜೆ ವೇಳೆ ಮನೆಗೆ ನುಗ್ಗಿ ಚಾಕು ತೋರಿಸಿ ದರೋಡೆ: ಐವರ ಬಂಧನ

ಪ್ರಕರಣದ ಹಿನ್ನೆಲೆ:

ಆಧಾರ್‌ ಕಾರ್ಡ್‌, ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣಪತ್ರ, ರೇಷನ್‌ ಕಾರ್ಡ್‌ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಾರಾಷ್ಟ್ರ ಸೇರಿದಂತೆ ಬೇರೆ ಊರಿನ 6 ಅಭ್ಯರ್ಥಿಗಳು(Candidates) ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಿ ಪೊಲೀಸ್‌(Police) ವೆರಿಫಿಕೇಶನ್‌ ಮಾಡಿಸಿ ಸೇನೆಗೆ ನೇಮಕಗೊಂಡಿದ್ದರು.

ಕರುಣಿ ಬಸವರಾಜ್‌ ವೀರಭದ್ರ, ಅಜಿತ್‌ ಕೊಂಡೆ ಕಲೇನಿ, ಚೌಹಾಣ್‌ ರೋಹಿತ್‌ ಮಹಾದೇವ, ಪರಾಸ್‌ ಅಸ್ಲಾಂ, ಗಣೇಶ ಮಹಾದೇವ ಮೊರೆ, ಆಕಾಶ್‌ ಕುಂಡಲಿಕ ಚೌಗಲೆ ಸೇನೆಗೆ ನೇಮಕಗೊಂಡಿದ್ದಾರೆ. ಇನ್ನೂ ದೇವಫೋಡ್‌ ಮಹತಾಬ್‌ ಕುರ್ಶೋದ್ದೀನ್‌, ಅಮುಲ್‌ ರಾಜೇಂದ್ರ ಘೋಡ್ಕೆ, ಚಿದಾನಂದ ಬಸವರಾಜ ತೇಲಿ, ಮಾಳಿ ರೋಹಿತ್‌ ಭೈರಪ್ಪ ಎಂಬವರು ಸೇನೆಗೆ ಆಯ್ಕೆಯಾಗಿದ್ದರೂ ಸರಿಯಾದ ದಾಖಲಾತಿಗಳನ್ನು ಸಲ್ಲಿಸದ್ದರಿಂದ ನೇಮಕಾತಿ(Recruitment) ರಿಜೆಕ್ಟ್ ಮಾಡಲಾಗಿದೆ.

ಪ್ರಕರಣ ಪತ್ತೆಯಾಗಿದ್ದು ಹೇಗೆ?

ಮಹಾರಾಷ್ಟ್ರ ಮೂಲದ ಅಜಿತ್‌ಕೊಂಡೆ ಕಲೇನಿ ಎಂಬವರ ದಾಖಲಾತಿ ಪರಿಶೀಲನೆ ವೇಳೆ ಸೇನಾಧಿಕಾರಿಗಳು ತಪ್ಪು ಮಾಹಿತಿ ಬಂದಿರುವುದು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಹಿರೇಹಡಗಲಿ ಠಾಣೆಗೆ ಮರು ಪರಿಶೀಲನೆಗೆ ಕಳುಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಇಡೀ ಪ್ರಕರಣ ಬಹಿರಂಗಗೊಂಡಿದೆ.

ಮಿನಿ ಲಾರಿ, ಬೊಲೆರೋ, ಬುಲೆಟ್‌ ಕದ್ದಿದ್ದ ಇಬ್ಬರು ಕಳ್ಳರ ಬಂಧನ

ಬೆಂಗಳೂರು(Bengaluru): ಕದ್ದ ವಾಹನದೊಂದಿಗೆ ಪರಾರಿಯಾಗುತ್ತಿದ್ದ ಇಬ್ಬರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸೂರು ಮೂಲದ ಡೇವಿಡ್‌ ಅರ್ಜುನ್‌ ಮನಿಗೊಂಡ(40) ಮತ್ತು ಮುನ್ನ ಕೊಟ್ಯಾನ್‌(40) ಬಂಧಿತರು. ಇವರು ನೀಡಿದ ಮಾಹಿತಿ ಮೇರೆಗೆ .11.20 ಲಕ್ಷ ಮೌಲ್ಯದ ಮಿನಿ ಲಾರಿ, ಬೊಲೆರೋ ವಾಹನ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Robbery: ಆಟೋ ಚಾಲಕನ ಸೋಗಿನಲ್ಲಿ ದರೋಡೆ: ಕುಖ್ಯಾತ ಕಳ್ಳನ ಬಂಧನ

ಕೆಲ ದಿನಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ವಾಹನ ತಪಾಸಣೆ ಮಾಡುವಾಗ ಮಿನಿ ಲಾರಿಯೊಂದು ಅದೇ ಮಾರ್ಗದಲ್ಲಿ ಬರುತ್ತಿತ್ತು. ಈ ವೇಳೆ ಪೊಲೀಸರನ್ನು ನೋಡಿದ ಆರೋಪಿಗಳು(Accused) ತಕ್ಷಣ ಮಿನಿ ಲಾರಿ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು. ಆಗ ಪೊಲೀಸರು ಲಾರಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಮಿನಿ ಲಾರಿಯನ್ನು ತುಮಕೂರಿನ ತಿಲಕ್‌ ಪಾರ್ಕ್ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಕಳವು ಮಾಡಿಕೊಂಡು ಬರುತ್ತಿದ್ದಾಗಿ ಹೇಳಿದ್ದರು.

ಈ ಸಂಬಂಧ ಹೆಚ್ಚಿನ ವಿಚಾರಣೆ ಮಾಡಿದಾಗ ಆರೋಪಿಗಳು ಈ ಹಿಂದೆ ಅತ್ತಿಬೆಲೆ ಹಾಗೂ ಕೋಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೊಲೆರೋ ವಾಹನ ಹಾಗೂ ರಾಯಲ್‌ ಎನ್‌ಫೀಲ್ಡ್‌(Royal Enfield) ದ್ವಿಚಕ್ರ ವಾಹನ ಕಳವು(Theft) ಮಾಡಿರುವುದು ಬೆಳಕಿಗೆ ಬಂದಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ರಸ್ತೆ ಬದಿ ನಿಲುಗಡೆ ಮಾಡಿದ್ದ ವಾಹನಗಳನ್ನು ಕಳವು ಮಾಡುತ್ತಿದ್ದರು. ನೆರೆಯ ತಮಿಳುನಾಡು(Tamil Nadu) ಹಾಗೂ ಮಹಾರಾಷ್ಟ್ರಗಳಲ್ಲಿಯೂ ಆರೋಪಿಗಳು ತನ್ನ ಕೈಚಳಕ ತೋರಿದ್ದು, ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜಾಮೀನು ಪಡೆದು ಹೊರಬಂದ ಬಳಿಕವೂ ಇಂತಹ ಕೃತ್ಯ ಮುಂದುವರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios