ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡು ಕೊಲೆ ನಡೆದಿರುವ ಘಟನೆ ವರ್ತೂರು ಎಸ್ಎಸ್ ಎಸ್ ಬಾರ್ ನಲ್ಲಿ ನಡೆದಿದೆ.  ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  

ಬೆಂಗಳೂರು (ಫೆ.14): ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡು ಕೊಲೆ ನಡೆದಿರುವ ಘಟನೆ ವರ್ತೂರು ಎಸ್ಎಸ್ ಎಸ್ ಬಾರ್ ನಲ್ಲಿ ನಡೆದಿದೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಅಲಸಹಳ್ಳಿ ಮುಖ್ಯ ರಸ್ತೆಯ ಎಸ್ ಎಸ್ ಎಸ್ ಬಾರ್ ಬಳಿ ಘಟನೆ ನಡೆದಿತ್ತು. ಮುನಿಯಪ್ಪ ಮತ್ತು ಶ್ರೀಧರ್ ಎಂಬಿಬ್ಬರ ಮಧ್ಯೆ ಎಣ್ಣೆ ಮತ್ತಿನಲ್ಲಿ ಗಲಾಟೆ ನಡೆದಿತ್ತು. ಇದರಲ್ಲಿ ಮುನಿಯಪ್ಪ 45 ವರ್ಷದ ವ್ಯಕ್ತಿಯ ಕೊಲೆಯಾಗಿದೆ. ಶ್ರೀಧರ್ ಮತ್ತು ಮೃತ ಮುನಿಯಪ್ಪ ಇಬ್ಬರು ಪರಿಚಿತರು. ಇವರಿಬ್ಬರೂ ಒಂದೇ ಏರಿಯಾದಲ್ಲಿ ವಾಸ ಮಾಡುತ್ತಿದ್ದದರು. ಶ್ರೀಧರ್ ಬಗ್ಗೆ ಆತನ ತಂದೆಗೆ ಮುನಿಯಪ್ಪ ಮಾಹಿತಿ ನೀಡಿದ್ದ ಅನ್ನೊ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ. ಮಚ್ಚಿನಿಂದ ಹೊಡೆದು ಮುನಿಯಪ್ಪನ ಕೊಲೆ ಮಾಡಲಾಗಿದೆ. ಪ್ರಕರಣ ಸಂಭಂದ ವರ್ತೂರು ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದ್ದು, ಶ್ರೀಧರ್ ನನ್ನು ಅರೆಸ್ಟ್ ಮಾಡಲಾಗಿದೆ.

GURUGRAM RAPE: ಕೆಲಸ ಕೊಡಿಸೋದಾಗಿ ಹೇಳಿ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ..!

ಬೆಂಗಳೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮಾರಾಮಾರಿ:
ಇಬ್ಬರು ಗ್ರಾಹಕರು ಕುಡಿದು ಹೊಡೆದಾಟ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ. ನಗರ ಬಿಇಎಲ್ ರಸ್ತೆಯ 1522 ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ಗ್ರಾಹಕರು ಗಲಾಟೆ ಮಾಡಿಕೊಂಡಿದ್ದು, ಗಲಾಟೆ ಬಿಡಿಸಲು ಹೋದ ಸಿಬ್ಬಂದಿ ಕೂಡ ಗಲಾಟೆಯನ್ನು ನಿಲ್ಲಿಸಲು ಆಗಿಲ್ಲ.

ಚಿನ್ನಕ್ಕೆ ಕಡಿಮೆ ಹಣ ಕೊಡುತ್ತೇನೆ ಎಂದಿದ್ದಕ್ಕೆ ಅಂಗಡಿಗೆ ಬೆಂಕಿ ಇಟ್ಟ ಭೂಪ ಕೊನೆಗೂ ಅರೆಸ್ಟ್

ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಗ್ರಾಹಕರು ಇಬ್ಬರು ಕೂಡ ಪ್ರತ್ಯೇಕ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್ ಸಿಆರ್ ಮಾಡಿ ಇಬ್ಬರಿಗೂ ಎಚ್ಚರಿಕೆ ಕೊಟ್ಟು ಪೊಲೀಸರು ಕಳಿಸಿದ್ದಾರೆ. ಗಲಾಟೆ ದೃಶ್ಯ ಬಾರ್ ಗೆ ಬಂದಿದ್ದ ಇತರ ಗ್ರಾಹಕರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.