Gurugram Rape: ಕೆಲಸ ಕೊಡಿಸೋದಾಗಿ ಹೇಳಿ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ..!

ಗುರುಗ್ರಾಮ್‌ನ ಸೆಕ್ಟರ್ 51 ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

woman techie drugged raped in car at gurugram mall parking ash

ಗುರುಗ್ರಾಮ್‌ (ಫೆಬ್ರವರಿ 14, 2023): ಹರ್ಯಾಣದ ಗುರುಗ್ರಾಮ್‌ನಲ್ಲಿ 27 ವರ್ಷದ ಮಹಿಳಾ ಟೆಕ್ಕಿಗೆ ವ್ಯಕ್ತಿಯೊಬ್ಬ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿರುವ ಘಟನೆ ಸೋಮವಾರ ನಡೆದಿದೆ. ಗುರುಗ್ರಾಮ್ ಮಾಲ್‌ನ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲೇ ರೇಪ್‌ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಂಜಿನಿಯರಿಂಗ್‌ ಪದವೀಧರ ಮಹಿಳೆಗೆ ಉದ್ಯೋಗ ಸಂದರ್ಶನದ ನೆಪದಲ್ಲಿ ಕರೆ ಮಾಡಿದ್ದ ಆರೋಪಿ, ನೀರಿನಲ್ಲಿ ಮತ್ತು ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ಗುರುಗ್ರಾಮ್‌ನ ಸೆಕ್ಟರ್ 51 ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಅತ್ಯಾಚಾರ(Rape)  ಸಂತ್ರಸ್ತೆ (Victim) ತಾನು ಆನ್‌ಲೈನ್‌ನಲ್ಲಿ ಉದ್ಯೋಗವನ್ನು (Online Job) ಹುಡುಕುತ್ತಿರುವುದಾಗಿ  ಹೇಳಿದ್ದು, ಮತ್ತು ಈ ವೇಳೆ ತುಷಾರ್ ಶರ್ಮಾ ಎಂಬ ವ್ಯಕ್ತಿಯ ನಂಬರ್ ನನಗೆ ಸಿಕ್ಕಿದೆ. ಬಳಿಕ ಅವರಿಗೆ ಕರೆ ಮಾಡಿದಾಗ, ತನಗೆ ಕೆಲಸ (Job) ನೀಡುವುದಾಗಿ ಆತ ಭರವಸೆ ನೀಡಿದ್ದ ಎಂದು ಮಹಿಳೆ (Women) ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಶನಿವಾರ ಸಹರಾ ಮಾಲ್‌ನಲ್ಲಿ (Mall) ಸಂದರ್ಶನದ (Interview) ನೆಪದಲ್ಲಿ ಆಕೆಗೆ ಆರೋಪಿ (Accused) ಕರೆ ಮಾಡಿದ್ದ. 

ಇದನ್ನು ಓದಿ: ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಕಾಮುಕರ ಬಂಧನ
 
ಬಳಿಕ ಮಹಿಳೆ ತನ್ನ ದಾಖಲೆಗಳೊಂದಿಗೆ ಫೋನ್‌ನಲ್ಲಿ ಮೊದಲೇ ಹೇಳಿದಂತೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮಾಲ್‌ನ ಗೇಟ್‌ ಬಳಿ ಹೋಗಿ ತುಷಾರ್ ಶರ್ಮಾನನ್ನು ಭೇಟಿಯಾದಳು. ನಂತರ ಆರೋಪಿ ಮಾಲ್‌ನ ನೆಲಮಾಳಿಗೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಕಾರು ನಿಲ್ಲಿಸಿದ್ದಾನೆ. ನಂತರ ಆರೋಪಿ ಆಕೆಗೆ ನೀರು ನೀಡಿದ್ದಾನೆ. ಅದನ್ನು ಸೇವಿಸಿದ ನಂತರ ತಾನು ಪ್ರಜ್ಞೆ ಕಳೆದುಕೊಂಡೆ ಎಂದು ಸಂತ್ರಸ್ಥ ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. 

ತನ್ನ ಸಂಕಟವನ್ನು ವಿವರಿಸಿದ ಸಂತ್ರಸ್ಥೆ, ತುಷಾರ್‌ ಶರ್ಮಾ ತನ್ನ ಕಾರಿನೊಳಗೆ ತಳ್ಳಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ತನ್ನನ್ನು ಮಾಲ್ ಪಾರ್ಕಿಂಗ್ ಪ್ರದೇಶದಲ್ಲೇ ಬಿಟ್ಟು ಆತ ಪರಾರಿಯಾದ. ಹಾಗೆ, ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿರುವುದಾಗಿಯೂ ತಿಳಿದುಬಂದಿದೆ.

ಇದನ್ನು ಓದಿ: ರೇಪ್‌ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನೇ ಕಚ್ಚಿ ಕತ್ತರಿಸಿ ಬಚಾವ್ ಆದ ಯುವತಿ!

ಆದರೂ, ಮಹಿಳೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು), 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ತುಷಾರ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಮಧ್ಯೆ, ಪೊಲೀಸರು ಮಾಲ್ ಮ್ಯಾನೇಜ್‌ಮೆಂಟ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದ್ದು, ಆರೋಪಿಯನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

9 ವರ್ಷದ ಬಾಲಕಿಯ ರೇಪ್‌ ಮಾಡಿದ ಆರೋಪಿ, ಬುಲ್ಡೋಜರ್‌ ಬಳಸಿ ಮನೆ ಕೆಡವಿದ ಪೊಲೀಸ್‌..!

ಮಿಷನ್‌ ಶಕ್ತಿ ಅಭಿಯಾನದ ಅಡಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 9 ವರ್ಷದ ಸೋದರ ಸೊಸೆಯನ್ನು ರೇಪ್‌ ಮಾಡಿದ ಆರೋಪಿಯ ಮನೆಯನ್ನು ಪೊಲೀಸರು ಬುಲ್ಡೋಜರ್‌ ಬಳಸಿ ಕೆಡವಿದ ಘಟನೆ ಇತ್ತೀಚೆಗೆ ನಡೆದಿದೆ. ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಕಾಮಾಸಿನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ರೇಪ್‌ ಮಾಡಿದ್ದ ಕಾರಣಕ್ಕೆ ಸ್ವತಃ ಪೊಲೀಸರೇ ಈ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಫೆಬ್ರವರಿ 8 ರಂದು ಪುಟ್ಟ ಬಾಲಕಿಯನ್ನು ಆತ ರೇಪ್‌ ಮಾಡಿದ್ದ. ಈಗಾಗಲೇ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ರೇಪ್‌ ಮಾಡಿದ ಬಳಿಕ ಸ್ಥಳದಲ್ಲಿದ್ದವರಿಗೆ ಬೆದರಿಕೆ ಹಾಕಿ ಆರೋಪಿ ನಾಪತ್ತೆಯಾಗಿದ್ದ. ಇದರ ಬೆನ್ನಲ್ಲಿಯೇ ಮನೆಯವರು ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ ಎಸಗಿದ ಕಾಮುಕ ಟೆಕ್ಕಿ!

Latest Videos
Follow Us:
Download App:
  • android
  • ios