Asianet Suvarna News Asianet Suvarna News

ಎದೆಹಾಲಿನ ಸಮಸ್ಯೆ; 20ನೇ ಮಹಡಿಯಿಂದ ಬಿದ್ದು ಬಾಣಂತಿ ಆತ್ಮಹತ್ಯೆಗೆ ಶರಣು

ತನ್ನ 11 ತಿಂಗಳ ಹೆಣ್ಣು ಮಗುವಿಗೆ ಎದೆ ಹಾಲುಣ್ಣಿಸಲು ಸಮಸ್ಯೆ ಎದುರಾಗಿದ್ದರಿಂದ ಜಿಗುಪ್ಸೆಗೊಂಡು ಅಪಾರ್ಚ್‌ಮೆಂಟ್‌ ಕಟ್ಟಡದ 20ನೇ ಮಹಡಿಯಿಂದ ಜಿಗಿದು ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

feeding mother committed suicide falling from the 20th floor at bengaluru rav
Author
First Published Dec 26, 2022, 9:57 AM IST

ಬೆಂಗಳೂರು (ಡಿ.26) : ತನ್ನ 11 ತಿಂಗಳ ಹೆಣ್ಣು ಮಗುವಿಗೆ ಎದೆ ಹಾಲುಣ್ಣಿಸಲು ಸಮಸ್ಯೆ ಎದುರಾಗಿದ್ದರಿಂದ ಜಿಗುಪ್ಸೆಗೊಂಡು ಅಪಾರ್ಚ್‌ಮೆಂಟ್‌ ಕಟ್ಟಡದ 20ನೇ ಮಹಡಿಯಿಂದ ಜಿಗಿದು ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ತಲಘಟ್ಟಪುರದ ಹಾಲಿಡೇ ವಿಲೇಜ್‌ ರೆಸಾರ್ಚ್‌ ರಸ್ತೆಯಲ್ಲಿರುವ ಪೂರ್ವ ಹೈಲ್ಯಾಂಡ್‌ ಅಪಾರ್ಚ್‌ಮೆಂಟ್‌ ನಿವಾಸಿ ಚರಿಷ್ಮಾ ಸಿಂಗ್‌ (40) ಮೃತ ದುರ್ದೈವಿ. ತಲೆ ಬಾಚಿಕೊಳ್ಳುವುದಾಗಿ ಹೇಳಿ ಬೆಳಗ್ಗೆ 11.30ಕ್ಕೆ ಸುಮಾರಿಗೆ ತಮ್ಮ ಫ್ಲ್ಯಾಟ್‌ನಿಂದ ಹೊರ ಬಂದ ಚರಿಷ್ಮಾ, ಬಳಿಕ 20ನೇ ಮಹಡಿಗೆ ತೆರಳಿ ಕಾರಿಡಾರ್‌ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಕೂಡಲೇ ಪೊಲೀಸರಿಗೆ ಅಪಾರ್ಚ್‌ಮೆಂಟ್‌ ಕಾವಲು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ದೇವದುರ್ಗ ಖಾಸಗಿ ಆಸ್ಪತ್ರೆ ಎಡವಟ್ಟು?: ಅಧಿಕ ರಕ್ತಸ್ರಾವದಿಂದ ಬಾಣಂತಿ ಸಾವು

2 ತಿಂಗಳ ಹಿಂದಷ್ಟೇ ವಿದೇಶದಿಂದ ಆಗಮನ:

11 ವರ್ಷಗಳ ಹಿಂದೆ ಸಾಫ್‌್ಟವೇರ್‌ ಕರಣ್‌ ಸಿಂಗ್‌ ಹಾಗೂ ಚರಿಷ್ಮಾ ಸಿಂಗ್‌ ವಿವಾಹವಾಗಿದ್ದು, ದಂಪತಿಗೆ 11 ತಿಂಗಳ ಹೆಣ್ಣು ಮಗುವಿದೆ. ಕೆನಡಾ ದೇಶದಲ್ಲಿ ಉದ್ಯೋಗದಲ್ಲಿ ಕರಣ್‌ ಸಿಂಗ್‌, ತಮ್ಮ ಪತ್ನಿ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಕುಟುಂಬ ಸಮೇತ ನಗರಕ್ಕೆ ಬಂದಿದ್ದರು. ಬಳಿಕ ತಲಘಟ್ಟಪುರದ ಪೂರ್ವ ಹೈಲ್ಯಾಂಡ್‌ ಅಪಾರ್ಚ್‌ಮೆಂಟ್‌ನಲ್ಲಿ ಚರಿಷ್ಮಾ ಕುಟುಂಬ ಜತೆ ದಂಪತಿ ನೆಲೆಸಿದ್ದರು. ಮಗುವಿಗೆ ಎದೆ ಹಾಲುಣ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕೆಗೆ ನೊಂದಿದ್ದರು. ಇದರಿಂದ ಖಿನ್ನತೆಗೊಳಗಾಗಿದ್ದ ಚರಿಷ್ಮಾ, ಯಲಹಂಕ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಆರೋಗ್ಯದಲ್ಲಿ ಸುಧಾರಣೆ ಕಾಣದೆ ಆಕೆ ಮತ್ತಷ್ಟುನೊಂದಿದ್ದರು.

ಇದೇ ಯಾತನೆಯಲ್ಲೇ ಬೆಳಗ್ಗೆ 11.30ರಲ್ಲಿ ಸ್ನಾನ ಮುಗಿದ ಬಳಿಕ ತಲೆ ಬಾಚಿಕೊಳ್ಳುವುದಾಗಿ ಹೇಳಿ ಫ್ಲ್ಯಾಟ್‌ನಿಂದ ಹೊರಬಂದ ಆಕೆ, 20ನೇ ಮಹಡಿಗೆ ತೆರಳಿ ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಈ ಸಂಬಂಧ ಮೃತಳ ಸೋದರ ಗೌತಮ್‌ ಸಿಂಗ್‌ ನೀಡಿದ ದೂರಿನನ್ವಯ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Women Health: ಬಾಣಂತಿಯರಿಗೆ ಹೇರುವ ಈ ನಿಯಮದಲ್ಲಿ ಎಷ್ಟು ಸತ್ಯವಿದೆ?

ಎರಡು ಬಾರಿ ಆತ್ಮಹತ್ಯೆ ಯತ್ನ

ಅನಾರೋಗ್ಯ ಹಿನ್ನಲೆಯಲ್ಲಿ ಬೇಸರಗೊಂಡು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ಚರಿಷ್ಮಾ ವಿಫಲವಾಗಿದ್ದಳು. ಕೆನಡಾದಲ್ಲಿ ನೆಲೆಸಿದ್ದಾಗಲೇ ಆಕೆ ಆತ್ಮಹತ್ಯೆಗೆ ಮುಂದಾಗಿದ್ದಳು. ಈ ಬೆಳವಣಿಗೆ ಬಳಿಕ ಬೆಂಗಳೂರಿಗೆ ಪತ್ನಿಯನ್ನು ಕರಣ್‌ ಸಿಂಗ್‌ ಕರೆತಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios