Asianet Suvarna News Asianet Suvarna News

ಸಿಂಧನೂರು: ಮನೆ ಮಾರಾಟ ವಿಚಾರ, ಸ್ವಂತ ‌ಮಗನನ್ನೇ ಕೊಲೆಗೈದ ಪಾಪಿ ತಂದೆ

*  ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ನಡೆದ ಘಟನೆ
*  ಈಜು ಬಾರದ ಮಗನನ್ನ ಕಾಲುವೆಗೆ ನೂಕಿ ಕೊಲೆಗೈದ ತಂದೆ
*  ಈ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
 

Father Killed Son at Sindhanur in Raichur grg
Author
Bengaluru, First Published Jul 30, 2021, 11:46 AM IST
  • Facebook
  • Twitter
  • Whatsapp

ರಾಯಚೂರು(ಜು.30): ಮನೆ ಮಾರಾಟದ ವಿಚಾರವಾಗಿ ಅಪ್ಪ-ಮಗನ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. ಭೀಮಪ್ಪ (18) ಕೊಲೆಯಾದ ದುರ್ವೈವಿಯಾಗಿದ್ದಾನೆ. ಹಣಮಂತಪ್ಪ (65) ಸ್ವಂತ ‌ಮಗನನ್ನೇ ಕೊಲೆಗೈದ ಪಾಪಿ ತಂದೆಯಾಗಿದ್ದಾನೆ. 

ಏನಿದು ಪ್ರಕರಣ?

ಎರಡು ಮದುವೆ ಆಗಿದ್ದ ಆರೋಪಿ ಹಣಮಂತಪ್ಪ ವಿವಿಧೆಡೆ ಸಾಲ ಮಾಡಿಕೊಂಡಿದ್ದನು. ಹೀಗಾಗಿ ಹಣಮಂತಪ್ಪ ಮನೆ ಮಾರಾಟ ಮಾಡಲು ಮುಂದಾಗಿದ್ದನು. ಇದಕ್ಕೆ ಮಗ ಭೀಮಪ್ಪ ತಕರಾರು ತಗೆಗಿದ್ದ ಎಂದು ಹೇಳಲಾಗುತ್ತಿದೆ. 

'ಗನ್ ಜತೆ ಒಂದು ಸೆಲ್ಫಿ' ಪ್ರಾಣ ಕಳೆದುಕೊಂಡ ನವವಿವಾಹಿತೆ

ಇದೇ ಸಿಟ್ಟಿನಿಂದ ಈಜು ಬಾರದ ಮಗನನ್ನ ಕಾಲುವೆಗೆ ನೂಕಿ ಕೊಲೆಗೈದಿದ್ದಾನೆ ಅಪ್ಪ. ಮಗನಿಗೆ ‌ನಂಬಿಸಿ ಮುಖ್ಯ ಕಾಲುವೆಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿಸು ಬಂದಿದೆ. ಸದ್ಯ ಪೊಲೀಸರು ತನಿಖೆ ನಡೆಸಿ ಆರೋಪಿ ಹಣಮಂತಪ್ಪನನ್ನ ಬಂಧಿಸಿದ್ದಾರೆ. ಈ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios