Asianet Suvarna News Asianet Suvarna News

'ಗನ್ ಜತೆ ಒಂದು ಸೆಲ್ಫಿ' ಪ್ರಾಣ ಕಳೆದುಕೊಂಡ ನವವಿವಾಹಿತೆ

* ಸೆಲ್ಫಿ ಹುಚ್ಚಿಗೆ ಪ್ರಾಣ ಬಿಟ್ಟ ನವವಿವಾಹಿತೆ
* ಗನ್ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು
* ಮೊಬೈಲ್ ಬದಲು ಗನ್ ಟ್ರಿಗರ್ ಒತ್ತಿದಳು

Uttar Pradesh Woman shoots self in Hardoi while clicking selfie with gun mah
Author
Bengaluru, First Published Jul 25, 2021, 11:58 PM IST
  • Facebook
  • Twitter
  • Whatsapp

ಲಕ್ನೋ (ಜು. 25)   ಈ ನವವಿವಾಹಿತೆ ಸೆಲ್ಫಿ ಹುಚ್ಚಿಗೆ ಬಲಿಯಾಗಿದ್ದಾರೆ.  ಗನ್ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಳು. ಈ ವೇಳೆ ಗನ್ ಲೋಡ್ ಆಗಿದ್ದು ಗೊತ್ತಿರಲಿಲ್ಲ. 
26  ವರ್ಷದ ನವವಿವಾಹಿತೆ ರಾಧಿಕಾ ಗುಪ್ತಾ ಸೆಲ್ಫಿ ಹುಚ್ಚಿಗೆ ಬಲಿಯಾದವರು . ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಹೋಗಿ ಮೊಬೈಲ್ ಬದಲು ಗನ್ ಟ್ರಿಗರ್ ಒತ್ತಿದ್ದಾರೆ. 

ಗುಂಡು ಗಂಟಲು ಹೊಕ್ಕಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದಾರೆ.  ಲೈಸನ್ಸ್ ಇರುವ ಗನ್ ಇದಾಗಿದ್ದು ಮೃತಪಟ್ಟವಳ ಮಾವ ಉಪಯೋಗಿಸುತ್ತಿದ್ದ.  ಕೆಲ ದಿನಗಳ ಹಿಂದಷ್ಟೆ ಮನೆಗೆ ತಂದಿದ್ದರು ಎಂದು ಮಾವ ರಾಜೇಶ್ ಗುಪ್ತಾ  ತಿಳಸಿದ್ದಾರೆ. ಸೊಸೆ ಹೀಗೆ ಯಾಕೆ ಮಾಡಿಕೊಂಡಳು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸೆಲ್ಫಿಗಾಗಿ ಪ್ರಾಣ ಕಳೆದುಕೊಂಡ ಮಾಡೆಲ್

ಪತ್ನಿ ರಾಧಾಕಾಗೆ ಗನ್ ಮೇಲೆ ವಿಶೇಷ ಮೋಹ ಇತ್ತು.  ಅನೇಕ ಪೋಟೋಗಳನ್ನು ತೆಗೆಸಿಕೊಂಡಿದ್ದಳು ಎಂದು ಪತಿ ಆಕಾಶ್ ತಿಳಸಿದ್ದಾರೆ. ಇದು ಆತ್ಮಹತ್ಯೆಯೋ ಆಕಸ್ಮಿಕ ಸಾವೋ ಎಂಬುದರ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.  ಯುವತಿ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದಾರೆ.

Follow Us:
Download App:
  • android
  • ios