* ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದ ಘಟನೆ* ಪಿಯುಸಿ ಕಾಲೇಜು ಸೇರಿಸುವ ವಿಚಾರದಲ್ಲಿ ತಂದೆಯ ಜೊತೆ ಮುನಿಸಿಕೊಂಡಿದ್ದ ಪುತ್ರಿ* ಮನೆಯಲ್ಲೇ ನೇಣಿಗೆ ಶರಣಾಗಿದ್ದ ಬಾಂಧವ್ಯ

ಮಂಡ್ಯ(ಜೂ.20): ಮಗಳ ಆತ್ಮಹತ್ಯೆಯಿಂದ ನೊಂದ ತಂದೆಯೂ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಬಾಂಧವ್ಯ (17) ರಾಜು (65) ಸಾವಿಗೀಡಾದ ತಂದೆ ಮಗಳಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಿಯುಸಿ ಕಾಲೇಜು ಸೇರಿಸುವ ವಿಚಾರದಲ್ಲಿ ತಂದೆಯ ಜೊತೆ ಮುನಿಸಿಕೊಂಡಿದ್ದ ಬಾಂಧವ್ಯ ಬೆಳಗಿನ ಜಾವ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. 

ಹಳೆ ಮನೆಯ ಕಟ್ಟಿಗೆಯ ಚಿತೆ ಮಾಡಿ ಸುಸೈಡ್‌ಗೆ ಶರಣಾದ ಹಿರಿಯ ಜೀವ

ಮಗಳ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ತಂದೆ ರಾಜು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.